alex Certify ಜಿಂಕೆಯನ್ನು ಹಿಡಿಯಲು ಹೊಂಚು ಹಾಕಿಕುಳಿತಿತ್ತು ಚಿರತೆ…! ಇನ್ನೇನು ಪ್ರಾಣ ಹೋಗುತ್ತೆ ಅನ್ನುವಾಗ ಕಪಿಸೇನೆಯ ಎಂಟ್ರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಂಕೆಯನ್ನು ಹಿಡಿಯಲು ಹೊಂಚು ಹಾಕಿಕುಳಿತಿತ್ತು ಚಿರತೆ…! ಇನ್ನೇನು ಪ್ರಾಣ ಹೋಗುತ್ತೆ ಅನ್ನುವಾಗ ಕಪಿಸೇನೆಯ ಎಂಟ್ರಿ

ಪ್ರಾಣಿ, ಪಕ್ಷಿ ಪ್ರಪಂಚವೇ ವಿಚಿತ್ರ. ಇದರ ಬಗ್ಗೆ ಸಂಪೂರ್ಣ ತಿಳಿದವರೇ ಇಲ್ಲವೆನ್ನಬಹುದೇನೋ. ಅಂಥದ್ದೇ ಒಂದು ವಿಡಿಯೋ ಇಲ್ಲಿದೆ. ಚಿರತೆಯೊಂದು ಜಿಂಕೆಯ ಬೇಟೆಗೆ ಮುಂದಾದಾಗ ತಾವು ದಿನನಿತ್ಯ ಕಾಣುತ್ತಿರುವ ಈ ಜಿಂಕೆಯನ್ನು ರಕ್ಷಿಸಲು ಕಪಿ ಸೇನೆ ಮುಂದಾಗಿರುವ ಅಪರೂಪದ ದೃಶ್ಯವಿದು.

ಕೆಲವು ದಿನಗಳ ಹಿಂದೆ ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾದ ವೈರಲ್ ನೋಡುಗರನ್ನು ಭಾವುಕರನ್ನಾಗಿ ಮಾಡುವ ದೃಶ್ಯವಿದೆ. ಇದರಲ್ಲಿ ಜಿಂಕೆಗಳ ಹಿಂಡು ಅರಣ್ಯದಲ್ಲಿ ಅಡ್ಡಾಡುತ್ತಾ, ಹುಲ್ಲನ್ನು ಮೇಯುತ್ತಿರುತ್ತದೆ. ಕಪಿಗಳು ಕೂಡ ಜಿಂಕೆಯ ಜತೆಯಲ್ಲಿಯೇ ತಾವೂ ಆಟ ಆಡುತ್ತಾ ಇರುತ್ತದೆ.

ಅಲ್ಲಿಯವರೆಗೆ ಜಿಂಕೆಯ ಬೇಟೆಗೆ ಹೊಂಚಿ ಹಾಕಿ ಮರದ ಮೇಲೆ ಕುಳಿತಿದ್ದ ಚಿರತೆಯೊಂದು ಛಂಗನೆ ಧುಮುಕಿ ಜಿಂಕೆಯ ಮೇಲೆ ಬೀಳುತ್ತದೆ. ಅರೆಕ್ಷಣದಲ್ಲಿ ಏನಾಯಿತೆಂದು ತಿಳಿಯದ ಕಪಿಸೇನೆ ಅದ್ಯಾವ ವೇಗದಲ್ಲಿ ಬಂದು ಜಿಂಕೆಯನ್ನು ಕಾಪಾಡಿತು ಎನ್ನುವುದನ್ನು ಈ ವಿಡಿಯೋದಲ್ಲಿ ನೋಡಿದರೆ ಮೈ ನವಿರೇಳುತ್ತದೆ.

ಚಿರತೆಯ ದಾಳಿಗೆ ಜಿಂಕೆ ಬಿದ್ದುಬಿಡುತ್ತದೆ. ಇನ್ನೇನು ಅದರ ಪ್ರಾಣವನ್ನು ಚಿರತೆ ಕಸಿದುಕೊಳ್ಳುತ್ತದೆ ಎನ್ನುವಾಗಲೇ ಕೋತಿಗಳೆಲ್ಲಾ ಒಂದಾಗಿ ಚಿರತೆಯ ಮೇಲೆ ಎರಗಿ ಅದನ್ನು ಅಲ್ಲಿಂದ ಓಡಿಸುವ ದೃಶ್ಯವಿದು. ಇದಾಗಲೇ ಲಕ್ಷಾಂತರ ವ್ಯೂಸ್​ಗಳನ್ನು ಕಂಡಿರುವ ಈ ವಿಡಿಯೋ ನೋಡಿದರೆ ಪ್ರಾಣಿ ಪ್ರಪಂಚದ ಅದ್ಭುತ ವಿಷಯವೊಂದನ್ನು ತಿಳಿದುಕೊಂಡಂತಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...