alex Certify ʼಬಿಯರ್​ ಬೇಕು…… ಬಿಯರ್​ ಬೇಕು…..ʼ ಫುಟ್​ಬಾಲ್​ ಪಂದ್ಯ ವೀಕ್ಷಿಸಲು ಬಂದವರಿಂದ ಭಾರಿ ಗಲಾಟೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಬಿಯರ್​ ಬೇಕು…… ಬಿಯರ್​ ಬೇಕು…..ʼ ಫುಟ್​ಬಾಲ್​ ಪಂದ್ಯ ವೀಕ್ಷಿಸಲು ಬಂದವರಿಂದ ಭಾರಿ ಗಲಾಟೆ

ಕೆಲವೊಂದು ರಾಷ್ಟ್ರಗಳಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧದ ಕಾನೂನಿದೆ. ಆದರೆ ಕತಾರ್​ನಲ್ಲಿ ಫಿಪಾ ವಲ್ಡ್​​ ವಿಚಾರವಾಗಿ ಈ ಈ ಮೊದಲು ಕುತೂಹಲದ ನಿರ್ಣಯ ತೆಗೆದುಕೊಳ್ಳಲಾಗಿತ್ತು.

ಅದೇನೆಂದರೆ, ಫುಟ್​ಬಾಲ್​ ಪಂದ್ಯ ನೋಡುವ ವೀಕ್ಷಕರಿಗೆ ಅಂದರೆ ಟಿಕೆಟ್​ ಖರೀದಿಸಿ ಪಂದ್ಯ ನೋಡುಗರು ಆಟ ಪ್ರಾರಂಭಕ್ಕೂ 3 ಗಂಟೆಯ ಮೊದಲು ಮತ್ತು ಒಂದು ಗಂಟೆಯ ಒಳಗೆ ಬಿಯರ್​ ಖರೀದಿಸಬಹುದಾಗಿದೆ ಎಂಬುದು. ಆದರೆ ಫಿಫಾ ಪಂದ್ಯಾಟ ಪ್ರಾರಂಭವಾದ ಮೇಲೆ ಬಿಯರ್​ ಖರೀದಿಸಲು ಮತ್ತು ಸೇವಿಸಲು ಅನುಮತಿ ನೀಡಿರಲಿಲ್ಲ.

ಬಿಯರ್​ ಸೇವನೆ ಮಾಡಲು ಕಾದುಕುಳಿತಿದ್ದ ಮದ್ಯ ಪ್ರಿಯರಿಗೆ ಶಾಕಿಂಗ್​ ಎನ್ನುವಂಥ ಪ್ರಕರಣ ಭಾನುವಾರದ ಉದ್ಘಾಟನಾ ಸಮಾರಂಭಕ್ಕೆ 48 ಗಂಟೆಗಳ ಮೊದಲು ಬಂದಿದೆ. ಅದೇನೆಂದರೆ ಕ್ರೀಡಾಂಗಣದಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ ಎಂಬುದು.ಇದು ಫುಟ್​ಬಾಲ್​ ಅಭಿಮಾನಿಗಳನ್ನು ಕೆರಳಿಸಿದೆ.

ಇದು ಫುಟ್​ಬಾಲ್​ ಅಭಿಮಾನಿಗಳನ್ನು ಕೆರಳಿಸಿದೆ. ಫುಟ್​ಬಾಲ್​ ವೀಕ್ಷಣೆಗೆ ಬಂದ ಜನರು ತಮಗೆ ಬಿಯರ್​ ಬೇಕು ಎಂದು ಒಕ್ಕೊರಲಿನಿಂದ ಕೂಗುತ್ತಿರುವ ವಿಡಿಯೋ ವೈರಲ್​ ಆಗಿದೆ. ರೆಡ್ಡಿಟ್​ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಮೊದಲು ಆಮಿಷ ಒಡ್ಡಿ ಟಿಕೆಟ್​ ಖರೀದಿ ಮಾಡಿದ ಮೇಲೆ ಹೀಗೆ ಯೂಟರ್ನ್​ ಹೊಡೆದಿರುವುದು ಸರಿಯಲ್ಲ ಎಂದು ಭಾರಿ ಗಲಾಟೆ ಶುರು ಮಾಡಿದ್ದಾರೆ ಅಭಿಮಾನಿಗಳು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...