alex Certify Watch: ನಂಬಲಸಾಧ್ಯ ಘಟನೆ, ಕಾಣೆಯಾಗಿದ್ದ ಮಗುವಿನ ಮೃತದೇಹವನ್ನು ಬೆನ್ನ ಮೇಲೆ ಹೊತ್ತು ತಂದ ಮೊಸಳೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch: ನಂಬಲಸಾಧ್ಯ ಘಟನೆ, ಕಾಣೆಯಾಗಿದ್ದ ಮಗುವಿನ ಮೃತದೇಹವನ್ನು ಬೆನ್ನ ಮೇಲೆ ಹೊತ್ತು ತಂದ ಮೊಸಳೆ….!

VIDEO: Crocodile returns the body of a drowned child to rescue team in  Indonesia - GulfTodayಇಂಡೋನೇಷ್ಯಾದಲ್ಲೊಂದು ನಂಬಲಸಾಧ್ಯವಾದ ಘಟನೆ ನಡೆದಿದೆ. ನೀರಿನಲ್ಲಿ ಬಿದ್ದು ಕಾಣೆಯಾಗಿದ್ದ ನಾಲ್ಕು ವರ್ಷದ ಮಗುವೊಂದನ್ನು ಹುಡುಕಿ ಹುಡುಕಿ ಪಾಲಕರು ಸೋತು ಹೋಗಿದ್ದರು. ರಕ್ಷಣಾ ತಂಡ ಮಗುವಿಗಾಗಿ ಹುಡುಕಾಟ ನಡೆಸುತ್ತಿತ್ತು. ಈ ಸಂದರ್ಭದಲ್ಲಿ ನಡೆದಿರುವುದೇ ವಿಚಿತ್ರ ಘಟನೆ.

ರಕ್ಷಣಾ ತಂಡ ಮಗುವನ್ನು ಹುಡುಕುತ್ತಿರುವಂತೆಯೇ, ಮಗುವಿನ ಮೃತದೇಹವನ್ನು ಮೊಸಳೆಯೊಂದು ಬೆನ್ನಮೇಲೆ ಹೊತ್ತುತಂದು ರಕ್ಷಣಾ ತಂಡಕ್ಕೆ ನೀಡಿದೆ. ಈ ಅಚ್ಚರಿಯ ಘಟನೆ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಅದೀಗ ವೈರಲ್​ ಆಗಿದೆ.

ರಕ್ಷಣಾ ತಂಡಗಳು ಶೋಧ ಕಾರ್ಯಾಚರಣೆ ಆರಂಭಿಸುತ್ತಿದ್ದಂತೆ ಮೊಸಳೆಯೊಂದು ಬಾಲಕನ ಶವವನ್ನು ಬೆನ್ನ ಮೇಲೆ ಹೊತ್ತುಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಇಂಡೋನೇಷ್ಯಾದ ಪೂರ್ವ ಕಾಲಿಮಂಟನ್ ಪ್ರಾಂತ್ಯದ ಪೂರ್ವ ಬೊರ್ನಿಯೊ ದ್ವೀಪದಲ್ಲಿ ಈ ಘಟನೆ ನಡೆದಿದೆ. ಮೊಸಳೆಯ ಈ ಅಸಾಮಾನ್ಯ ಕೃತ್ಯಕ್ಕೆ ಆ ಪ್ರದೇಶದ ನಿವಾಸಿಗಳು ಸಂಪೂರ್ಣ ಬೆಚ್ಚಿಬಿದ್ದಿದ್ದಾರೆ. ಭಾರತೀಯ ಅರಣ್ಯ (ಐಎಫ್‌ಎಸ್) ಅಧಿಕಾರಿ ಸುಸಂತ ನಂದಾ ಅವರು ಟ್ವಿಟರ್‌ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ನೆಟ್ಟಿಗರು ಸಂಪೂರ್ಣವಾಗಿ ಆಘಾತಕ್ಕೊಳಗಾಗಿದ್ದಾರೆ. “ಪ್ರಾಣಿಗಳು ಈ ರೀತಿ ಕೆಲಸಗಳನ್ನು ಮಾಡುವುದನ್ನು ನೋಡಿದಾಗ ಪುನರ್ಜನ್ಮವನ್ನು ನಂಬಲೇಬೇಕು ಎನ್ನಿಸುತ್ತದೆ” ಎಂದು ಕೆಲವರು ಕಾಮೆಂಟ್ ಹಾಕಿದ್ದಾರೆ.

— Susanta Nanda IFS (@susantananda3) January 24, 2023

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...