alex Certify ಸುಡುವ ಶಾಖದ ಎಫೆಕ್ಟ್: ಯುಕೆ ಬೀಚ್​‌ ನಲ್ಲಿ ಬಂಡೆ ಕುಸಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಡುವ ಶಾಖದ ಎಫೆಕ್ಟ್: ಯುಕೆ ಬೀಚ್​‌ ನಲ್ಲಿ ಬಂಡೆ ಕುಸಿತ

ಹವಾಮಾನ ವೈಪರೀತ್ಯದ ಪರಿಣಾಮ ವಿವಿಧ ಕಡೆ ಒಂದೊಂದಾಗಿ ಪರಿಚಯವಾಗುತ್ತಿದೆ. ಯುನೈಟೆಡ್​ ಕಿಂಗ್​ಡಮ್​ನ ಅಬೀಚ್​ ಕರಾವಳಿ ಪ್ರದೇಶದಲ್ಲಿ ಸರಣಿ ಬಂಡೆಗಳು ಕುಸಿದಿದ್ದು ಧೂಳಿನ ರಾಶಿ ಎದ್ದು ನಿಷೇಧಿತ ವಲಯವಾಗಿ ಮಾರ್ಪಟ್ಟಿದೆ.

ಅಲ್ಲಿನ ಮಾಧ್ಯಮ ವರದಿ ಪ್ರಕಾರ, ಈ ಘಟನೆಯು ಆಗಸ್ಟ್​ 8ರಂದು ಸಿಡ್ಮೌತ್​ನ ಡೆಮೊನ್ಸ್​ ಈಸ್ಟ್​ ಬೀಚ್​ನಲ್ಲಿ ಸಂಭವಿಸಿದೆ. ಎರಡು ಬೃಹತ್​ ಕುಸಿತಗಳೊಂದಿಗೆ ಬಂಡೆಗಳು ಬಿದ್ದಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಘಟನೆಯ ಹಲವಾರು ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿವೆ. ಈ ಅನಿರೀಕ್ಷಿತ ಬೆಳವಣಿಗೆ ಸುಡುವ ಶಾಖದಿಂದ ಉಂಟಾಗಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ.

ತಾಪಮಾನದ ಏರಿಕೆಯು ಜುರಾಸಿಕ್​ ಕರಾವಳಿಯ ದುರ್ಬಲ ಬಂಡೆಗಳ ಬಿರುಕುಗಳಿಗೆ ಕಾರಣವಾಗಿದೆ. ಬಿಸಿಲಿನ ಶಾಖ ಸುಲಭವಾಗಿ ಮೇಲ್ಮೈಯನ್ನು ದುರ್ಬಲಗೊಳಿಸಿದೆ, ಇದರಿಂದಾಗಿ ಭೂಕುಸಿತಗಳು ಉಂಟಾಗುತ್ತವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬೀಚ್​ನಲ್ಲಿ ನಡೆಯಬಹುದಾದ ಅವಘಡ ತಪ್ಪಿಸಲು ಎಚ್ಚರಿಕೆ ನೀಡಲಾಗಿದ್ದು, ಅದರ ಚಿತ್ರವನ್ನು ಗ್ರಾಮೀಣ ಪೂರ್ವ ಡೆಮೊನ್​ ಪೊಲೀಸರು ಹಂಚಿಕೊಂಡಿದ್ದಾರೆ .

ಅದೃಷ್ಟವಶಾತ್​, ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ. ಅಂದಹಾಗೆ ಎರಡು ಭೂಕುಸಿತಗಳಿಗೆ 40 ಡಿಗ್ರಿ ಸೆಲ್ಸಿಯಸ್​ ತಾಪಮಾನ ಕಾರಣ ಎಂದು ಹೇಳಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...