alex Certify ರಸ್ತೆಯಲ್ಲೇ ಇದ್ದಕ್ಕಿದ್ದಂತೆ ನಿಂತ ಇ-ಸ್ಕೂಟರ್ ಗೆ ದಿಢೀರ್ ಬೆಂಕಿ: ಮತ್ತೊಂದು ಘಟನೆಯ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆಯಲ್ಲೇ ಇದ್ದಕ್ಕಿದ್ದಂತೆ ನಿಂತ ಇ-ಸ್ಕೂಟರ್ ಗೆ ದಿಢೀರ್ ಬೆಂಕಿ: ಮತ್ತೊಂದು ಘಟನೆಯ ವಿಡಿಯೋ ವೈರಲ್

ಹೈದರಾಬಾದ್‌ನಲ್ಲಿ ಬುಧವಾರ ರಾತ್ರಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನವೊಂದಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಅದರ ಬ್ಯಾಟರಿಯಿಂದ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಎಲೆಕ್ಟ್ರಿಕ್ ಸ್ಕೂಟರ್ ಮಾಲೀಕ ಸ್ನೇಹಿತನೊಂದಿಗೆ ಹೋಗುತ್ತಿದ್ದ ವೇಳೆ ವಾಹನ ಇದ್ದಕ್ಕಿದ್ದಂತೆ ನಿಂತಿದೆ. ಬ್ಯಾಟರಿಯಿಂದ ಹೊಗೆ ಬರಲಾರಂಭಿಸಿದ್ದು, ಅವರು ಅದನ್ನು ನಿಲ್ಲಿಸಿ ನಂತರ ದೂರ ಹೋಗುತ್ತಿದ್ದಂತೆ, ಬ್ಯಾಟರಿಯಿಂದ ಬೆಂಕಿ ಕಾಣಿಸಿಕೊಂಡಿದ್ದು, ವಾಹನಕ್ಕೆ ಆವರಿಸಿದೆ ಎಂದು ಎಲ್‌.ಬಿ. ನಗರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ಮಾಲೀಕರಿಂದ ಸ್ವೀಕರಿಸಿದ ಮನವಿಯ ಆಧಾರದ ಮೇಲೆ ತಿಳಿಸಿದ್ದಾರೆ.

ಕಳೆದ ತಿಂಗಳು, ನಿಜಾಮಾಬಾದ್ ಜಿಲ್ಲೆಯಲ್ಲಿ ಚಾರ್ಜಿಂಗ್‌ ಗಾಗಿ ಪ್ಲಗ್ ಇನ್ ಮಾಡಿದ ಎಲೆಕ್ಟ್ರಿಕ್ ಸ್ಕೂಟರ್‌ ಬ್ಯಾಟರಿ ಸ್ಫೋಟಗೊಂಡಾಗ 80 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿ ಕುಟುಂಬದ ಮೂವರು ಸದಸ್ಯರಿಗೆ ಸುಟ್ಟ ಗಾಯಗಳಾಗಿದ್ದವು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...