alex Certify ಜಗತ್ತಿನ ಅತ್ಯಂತ ವೇಗದ ಮ್ಯಾಗ್ಲೇವ್‌ ರೈಲಿನ ಅನುಭೂತಿ ಕೊಟ್ಟ ಯೂಟ್ಯೂಬರ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಗತ್ತಿನ ಅತ್ಯಂತ ವೇಗದ ಮ್ಯಾಗ್ಲೇವ್‌ ರೈಲಿನ ಅನುಭೂತಿ ಕೊಟ್ಟ ಯೂಟ್ಯೂಬರ್‌

ಆಯಸ್ಕಾಂತೀಯ ಲೆವಿಟೇಶನ್ ತಂತ್ರಜ್ಞಾನದ ಆಧಾರದ ಮೇಲೆ ಶರವೇಗದಲ್ಲಿ ಚಲಿಸುವ ರೈಲುಗಳ ಕುರಿತು ಅನೇಕ ವಿಡಿಯೋಗಳನ್ನು ನೋಡಿದ್ದೇವೆ. ಈ ಶರವೇಗದ ಹಿಂದಿನ ವಿಜ್ಞಾನದ ಬಗ್ಗೆ ಬಹಳಷ್ಟು ತಿಳಿದಿದ್ದೇವೆ.

ಜಪಾನ್‌ನ ಯಮನಾಶಿ ಮ್ಯಾಗ್ಲೆವ್‌ ಮಾರ್ಗದಲ್ಲಿ ಸಂಚರಿಸುವ ರೈಲುಗಳು 500ಕಿಮೀ/ಗಂಟೆ ವೇಗದಲ್ಲಿ ಸಂಚರಿಸುತ್ತವೆ. ಇಂಥ ರೈಲೊಂದರಲ್ಲಿ ಮೊದಲ ಬಾರಿಗೆ ಸಂಚರಿಸಿದ ಯೂಟ್ಯೂಬರ್‌ ಟಾಮ್ ಸ್ಕಾಟ್‌ ಈ ವೇಗದ ಅನುಭವವನ್ನು ತಮ್ಮ ವೀಕ್ಷಕರೊಂದಿಗೆ ಹಂಚಿಕೊಂಡಿದ್ದಾರೆ.

ರೈಲಿನ ವೇಗದ ಅನುಭವಕ್ಕೆ ಅಕ್ಷರಶಃ ಮೂಕನಾದಂತೆ ಕಂಡ ಸ್ಕಾಟ್‌, 500ಕಿಮೀ/ಗಂಟೆ ವೇಗದಲ್ಲಿ ಸಂಚರಿಸುವ ರೈಲಿನಲ್ಲಿ ಕುಳಿತುಕೊಳ್ಳುವ ಅನುಭವ ಹೇಗಿರಿತ್ತದೆ ಎಂದು ಹೇಳಿಕೊಂಡಿದ್ದಾರೆ.

603ಕಿಮೀ/ಗಂಟೆ ಗರಿಷ್ಠ ವೇಗ ಸಾಧಿಸುವ ಮೂಲಕ ಗಿನ್ನೆಸ್ ದಾಖಲೆ ಪುಸ್ತಕ ಸೇರಿದ್ದ ಯಮಾನಾಶಿ ಮ್ಯಾಗ್ಲೆವ್‌ ಮಾರ್ಗವು ಸದ್ಯ ಪ್ರಯೋಗದ ಹಂತದಲ್ಲೇ ಇದ್ದು, ಜನಸಂಚಾರಕ್ಕೆ ಯಾವಾಗ ತೆರೆದುಕೊಳ್ಳುತ್ತದೆ ಎಂಬ ಕುರಿತು ಸ್ಪಷ್ಟನೆ ಇಲ್ಲ. 2015ರಲ್ಲಿ ಮೊದಲ ಓಟ ಕಂಡ ಈ ಮಾರ್ಗವು 2027ರಲ್ಲಿ ಲೋಕಾರ್ಪಣೆಯಾಗುವ ನಿರೀಕ್ಷೆ ಇತ್ತು.

ಜಪಾನ್‌ನ ಶಿನಾಗಾವಾ ಹಾಗೂ ನಗೋಯಾ ನಗರಗಳ ನಡುವೆ ಈ ರೈಲು ಸಂಚರಿಸಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...