alex Certify ವಿರಾಟ್ ಕೊಹ್ಲಿ ವರ್ತನೆ ಕುರಿತು ಶಾಕಿಂಗ್‌ ಸಂಗತಿ ಬಿಚ್ಚಿಟ್ಟ ಪಾಕ್‌ ಮಾಜಿ ಸ್ಪಿನ್ನರ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿರಾಟ್ ಕೊಹ್ಲಿ ವರ್ತನೆ ಕುರಿತು ಶಾಕಿಂಗ್‌ ಸಂಗತಿ ಬಿಚ್ಚಿಟ್ಟ ಪಾಕ್‌ ಮಾಜಿ ಸ್ಪಿನ್ನರ್‌

ಭಾರತೀಯ ಕ್ರಿಕೆಟ್‌ನ ಏಕದಿನ ತಂಡದ ನಾಯಕತ್ವ ಸ್ಥಾನ ಕಳೆದುಕೊಂಡಿರುವ ವಿರಾಟ್‌ ಕೊಹ್ಲಿರ ಸ್ವಭಾವ ಹಾಗೂ ವರ್ತನೆಗಳ ಕುರಿತು ಸಾಕಷ್ಟು ಬಾರಿ ಹಿರಿಯ ಆಟಗಾರರು ಮತ್ತು ಕ್ರಿಕೆಟ್‌ ತಜ್ಞರ ವಲಯದಲ್ಲಿ ಚರ್ಚೆಗಳು ನಡೆಯುತ್ತಲೇ ಇರುತ್ತವೆ.

ಇದೀಗ ಇದೇ ಕೊಹ್ಲಿ, ಬಿಸಿಸಿಐ ಅಧ್ಯಕ್ಷ ಹಾಗೂ ಮಾಜಿ ನಾಯಕ ಸೌರವ್‌ ಗಂಗೂಲಿಯೊಂದಿಗೂ ಹೊಸದೊಂದು ವಿವಾದ ಮಾಡಿಕೊಂಡಿದ್ದು, ತಮ್ಮ ವರ್ತನೆಯ ವಿಚಾರವಾಗಿ ಮತ್ತೊಮ್ಮೆ ಪ್ರಶ್ನೆಗೆ ಒಳಗಾಗಿದ್ದಾರೆ.

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದ್ಯಾನಿಶ್ ಕನೇರಿಯಾ ಸಹ ಈ ಬಗ್ಗೆ ಮಾತನಾಡಿದ್ದು, “ಎರಡು ವರ್ಷಗಳಿಂದ ವಿರಾಟ್ ಕೊಹ್ಲಿ ಒಂದೇ ಒಂದು ಶತಕ ಬಾರಿಸಿಲ್ಲ, ಆದ್ದರಿಂದ ವಿರಾಟ್ ತಮ್ಮ ಆಟದ ಮೇಲೆ ಗಮನ ಹರಿಸಬೇಕು. ಸೌರವ್‌ ಗಂಗೂಲಿಯಂಥ ಹಿರಿಯರ ವಿರುದ್ಧ ಮಾತನಾಡುವುದು ಆತನಿಗೆ ಯಾವುದೇ ರೀತಿಯ ಸಹಾಯ ಮಾಡುವುದಿಲ್ಲ,” ಎಂದಿದ್ದಾರೆ.

ಚಾಪ್‌ಸ್ಟಿಕ್ ಬಳಸುವುದನ್ನು ಪತ್ನಿಗೆ ಕಲಿಸುತ್ತಿರುವ ನವವಿವಾಹಿತ…! ವಿಡಿಯೋ ನೋಡಿ ನೆಟ್ಟಿಗರು ಫಿದಾ

“ವಿರಾಟ್‌ಗೆ ಅನಿಲ್ ಕುಂಬ್ಳೆ ಜೊತೆಗೂ ಸಮಸ್ಯೆಗಳು ಇದ್ದವು. ಈಗ ಆತನಿಗೆ ಗಂಗೂಲಿ ಜೊತೆಗೂ ಸಮಸ್ಯೆ ಇದೆ. ಆಟದ ನಿಜವಾದ ರಾಯಭಾರಿಗಳಾಗಿ ಕುಂಬ್ಳೆ ಮತ್ತು ಗಂಗೂಲಿ ತಮ್ಮನ್ನು ತಾವು ಸಾಬೀತುಪಡಿಸಿಕೊಂಡಿದ್ದಾರೆ. ಭಾರತೀಯ ಕ್ರಕೆಟ್‌ ಅನ್ನು ಬದಲಿಸಿದ ಗಂಗೂಲಿ ವಿರುದ್ಧ ವಿರಾಟ್ ಮಾತನಾಡುತ್ತಿದ್ದಾರೆ. ಇದೀಗ 90 ನಿಮಿಷಗಳ ಕಾಲ ವಿರಾಟ್ ಮಾತನಾಡಿದ್ದು ಬೇಕಾಗಿರಲಿಲ್ಲ. ಆತ ಟೆಸ್ಟ್‌ ಮತ್ತು ಟಿ20ಗಳಲ್ಲಿ ರನ್‌ ಗಳಿಸಲು ಪರದಾಡುತ್ತಿದ್ದಾರೆ. ಒಬ್ಬ ನಾಯಕನಾಗಿ, ಆತ ಐಸಿಸಿಯ ಯಾವುದೇ ಟ್ರೋಫಿ ಗೆದ್ದಿಲ್ಲ, ಆದ್ದರಿಂದ ಎಲ್ಲವೂ ಆತನ ವಿರುದ್ಧ ಹೋಗುತ್ತಿದೆ. ಇದೀಗ ಈ ಕೆಸರೆರಚಾಟ ಆತನಿಗೆ ಮತ್ತು ಭಾರತೀಯ ಕ್ರಿಕೆಟ್‌ಗೆ ಸಹಾಯ ಮಾಡಲಿದೆ ಎಂದು ನನಗೆ ಅನಿಸುವುದಿಲ್ಲ,” ಎಂದು ಪಾಕ್‌ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ಪಟ್ಟಿಯಲ್ಲಿ ನಾಲ್ಕನೇಯವರಾದ ಕನೇರಿಯಾ ತಿಳಿಸಿದ್ದಾರೆ.

“ರೋಹಿತ್‌ ಶರ್ಮಾ ವಿಚಾರಕ್ಕೆ ಬರೋದಾದರೆ, ಆತ ಆಟದ ಅತ್ಯುತ್ತಮ ರಾಯಭಾರಿಯಾಗಿದ್ದಾರೆ; ಆತ ಐಪಿಎಲ್‌ನ ಐದು ಟ್ರೋಫಿ ಜಯಿಸಿದ್ದಾನೆ. ಆತನ ನಾಯಕತ್ವ ಚೆನ್ನಾಗಿದೆ, ರಾಹುಲ್ ದ್ರಾವಿಡ್ ಜೊತೆಗೆ ಆತನ ಹೊಂದಾಣಿಕೆ ಚೆನ್ನಾಗಿದೆ. ವಿರಾಟ್, ದ್ರಾವಿಡ್ ಜೊತೆಗೆ ಸುದೀರ್ಘಕಾಲೀನವಾಗಿ ಒಳ್ಳೆಯ ಬಾಂಧವ್ಯ ಕಾಪಾಡಿಕೊಳ್ಳಬಲ್ಲರು ಎಂದು ನನಗೆ ಅನಿಸುವುದಿಲ್ಲ. ವಿರಾಟ್‌ಗೆ ಅನಿಲ್ ಕುಂಬ್ಳೆ ಜೊತೆಗೂ ಸಮಸ್ಯೆ ಇತ್ತು. ಕುಂಬ್ಳೆ ಮತ್ತು ದ್ರಾವಿಡ್ ಇಬ್ಬರೂ ದಕ್ಷಿಣ ಭಾರತದವರಾಗಿದ್ದು, ಕ್ರಿಕೆಟ್‌ನಲ್ಲಿ ದೊಡ್ಡ ಸ್ಥಾನಮಾನ ಹೊಂದಿದ್ದಾರೆ” ಎಂದು ಕನೆರಿಯಾ ತಿಳಿಸಿದ್ದಾರೆ.

ಪಾಕಿಸ್ತಾನ ಸೂಪರ್‌ ಲೀಗ್ ಮತ್ತು ಐಪಿಎಲ್ ಕುರಿತಂತೆ ಹೋಲಿಕೆ ಮಾಡಲು ಹೇಳಿದಾಗ ಪ್ರತಿಕ್ರಿಯಿಸಿದ ಕನೆರಿಯಾ, “ವೃತ್ತಿಪರ ಕೂಟವಾಗಿ ಐಪಿಎಲ್‌ ಭಾರತೀಯ ಕ್ರಿಕೆಟ್‌ಗೆ ಬಹಳಷ್ಟು ಪ್ರತಿಭೆಗಳನ್ನು ನೀಡುತ್ತಿದೆ. ಮತ್ತು ಪ್ರತಿ ಸೀಸನ್‌ನಿಂದ ಸೀಸನ್‌ಗೆ ಇನ್ನಷ್ಟು ಉತ್ತಮವಾಗುತ್ತಾ ಬಂದಿದೆ. ಇದೇ ವೇಳೆ ಪಿಎಸ್‌ಎಲ್‌ ಪಾಕಿಸ್ತಾನ ಕ್ರಿಕೆಟ್‌ಗೆ ಅಂಥದ್ದೇನೂ ಮಾಡುತ್ತಿಲ್ಲ. ಪಿಎಸ್‌ಎಲ್‌ನಲ್ಲಿ ಕೆಲ ಆಟಗಾರರು ಚೆನ್ನಾಗಿ ಆಡಿದರೂ ಸಹ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ರಾಜಕೀಯದಾಟಗಳಿಂದಾಗಿ ಅವರು ರಾಷ್ಟ್ರೀಯ ತಂಡಕ್ಕೆ ಬರುವುದು ಕಷ್ಟವಾಗುತ್ತದೆ,” ಎಂದು ಕನೆರಿಯಾ ತಿಳಿಸಿದ್ದಾರೆ.

ಭಾರತೀಯ ಬ್ಯಾಟ್ಸ್‌ಮನ್‌ಗಳ ವಿರುದ್ಧ ಬೌಲಿಂಗ್ ಮಾಡುವುದು ಬಹಳ ಕಷ್ಟವಾಗುತ್ತಿತ್ತು ಎಂದಿರು ಕನೆರಿಯಾ, “ದ್ರಾವಿಡ್ ಮತ್ತು ಲಕ್ಷ್ಮಣ್ ತಾಂತ್ರಿಕವಾಗಿ ನಿಪುಣರಾಗಿದ್ದು, ಸೆಹ್ವಾಗ್‌ ತಮ್ಮ ದೃಷ್ಟಿ-ಕೈಗಳ ಹೊಂದಾಣಿಕೆ ಮತ್ತು ಅದ್ಭುತ ಟೈಮಿಂಗ್‌ನಿಂದ ಯಾವುದೇ ಬೌಲರ್‌ನ ಆತ್ಮವಿಶ್ವಾಸವನ್ನೇ ಹಾಳು ಮಾಡುತ್ತಿದ್ದರು. ಆತನಿಗೆ ಬೌಲಿಂಗ್ ಮಾಡುವುದು ಭಾರೀ ಕಷ್ಟವಾಗಿತ್ತು,” ಎಂದು ಕೂ ಹೆಸರಿನ ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್ ಕುರಿತಂತೆ ಅನೇಕ ವಿಚಾರಗಳನ್ನು ಹಂಚಿಕೊಳ್ಳುವ ಕನೆರಿಯಾ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...