alex Certify ಮಗಳ ಜೊತೆ ಆಡ್ತಿರುವ ಕೊಹ್ಲಿ ಫೋಟೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗಳ ಜೊತೆ ಆಡ್ತಿರುವ ಕೊಹ್ಲಿ ಫೋಟೋ ವೈರಲ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜೊತೆ ಪತ್ನಿ ಅನುಷ್ಕಾ ಶರ್ಮಾ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ಆಗಸ್ಟ್ ನಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನಾಡಲಿದೆ. ಈ ಮಧ್ಯೆ 20 ದಿನಗಳ ಕಾಲ ಟೀಂ ಇಂಡಿಯಾ ಆಟಗಾರರಿಗೆ ವಿಶ್ರಾಂತಿ ಸಿಕ್ಕಿದೆ. ಕುಟುಂಬದ ಜೊತೆ ಆಟಗಾರರು ಸಮಯ ಕಳೆಯುತ್ತಿದ್ದಾರೆ.

ವಿರಾಟ್ ಕೊಹ್ಲಿ ತಮ್ಮ ಮಗಳು ವಮಿಕಾ ಜೊತೆ ಹೆಚ್ಚಿನ ಸಮಯ ಕಳೆಯಲು ಪ್ರಯತ್ನಿಸುತ್ತಿದ್ದಾರೆ. ಕೊಹ್ಲಿ ಮಗಳು ವಮಿಕಾಗೆ 6 ತಿಂಗಳು ಪೂರ್ಣಗೊಂಡಿದೆ. ಇದನ್ನು ಕೊಹ್ಲಿ ಹಾಗೂ ಅನುಷ್ಕಾ ಸಂಭ್ರಮಿಸಿದ್ದಾರೆ. ಈ ಸಂದರ್ಭದಲ್ಲಿ ಕೊಹ್ಲಿ ಕೆಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕೊಹ್ಲಿ ಮಗಳೊಂದಿಗೆ ಆಡ್ತಿದ್ದಾರೆ. ಮಗುವನ್ನು ಎತ್ತಿಕೊಂಡಿರುವ ಕೊಹ್ಲಿ, ಫೋಟೋವನ್ನೂ ಹಂಚಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆರು ತಿಂಗಳು ಪೂರ್ಣಗೊಳಿಸಿದ ಮಗಳಿಗಾಗಿ ದಂಪತಿ ಕೇಕ್ ಕತ್ತರಿಸಿದ್ದಾರೆ. ಮಗುವಿನ ಒಂದು ನಗು ನಮ್ಮ ಇಡೀ ಪ್ರಪಂಚವನ್ನು ಬದಲಿಸಬಹುದು ಎಂದು ಅನುಷ್ಕಾ ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...