alex Certify ಮತ್ತೊಂದು ರೂಪದಲ್ಲಿ ವಿಶ್ವವಿಖ್ಯಾತ ʼಮನಿಕೆ ಮಗೆ ಹಿತೆʼ ಹಾಡು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಂದು ರೂಪದಲ್ಲಿ ವಿಶ್ವವಿಖ್ಯಾತ ʼಮನಿಕೆ ಮಗೆ ಹಿತೆʼ ಹಾಡು

ಶ್ರೀಲಂಕಾದ ಯುವ ಗಾಯಕಿ ಯೊಹಾನಿ ದಿಲೊಕಾ ಡಿಸಿಲ್ವಾ ಹಾಡಿದ ಮನಿಕೆ ಮಗೆ ಹಿಥೇ ಹಾಡು ವಿಶ್ವವಿಖ್ಯಾತ ಆಗಿದೆ. ಇಂಪಾದ ಗಾಯನ, ತಲೆದೂಗಿಸುವಂಥ ತಾಳ, ಸುಶ್ರಾವ್ಯ ರಾಗಕ್ಕೆ ಮನಸೋಲದವರೇ ಇಲ್ಲ.

ಬಹಳಷ್ಟು ಜನರು ಈ ಲಂಕಾ ಭಾಷೆಯ ಗೀತೆಯನ್ನು ತಮ್ಮ ಪ್ರಾದೇಶಿಕ ಭಾಷೆಯಲ್ಲಿ ಹಾಡಿ ಭೇಷ್‌ ಎನಿಸಿಕೊಂಡಿದ್ದಾರೆ ಕೂಡ. ಆದರೆ ಉಜ್ವಲ್‌ ಎಂಬ ಮನಾಲಿಯ ಯುವಕರೊಬ್ಬರು ಕರ್ನಾಟಕ ಶಾಸ್ತ್ರೀಯ ಸಂಗೀತದ ವಾದ್ಯ ’’ಘಟ’’ದಲ್ಲಿ ಈ ಗೀತೆಯನ್ನು ಮರುಸೃಷ್ಟಿಸಿದ್ದಾರೆ. ತಾಳವಾದ್ಯದಲ್ಲಿ ಸುಶ್ರಾವ್ಯ ಗೀತೆ ಮೂಡಿಬಂದಿರುವ ವಿಡಿಯೊ ಇನ್‌ಸ್ಟಾಗ್ರಾಂನಲ್ಲಿ ವೈರಲ್‌ ಆಗಿದೆ.

GOOD NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇನ್ನಷ್ಟು ಕುಸಿತ; ಸಾವಿನ ಸಂಖ್ಯೆಯಲ್ಲಿಯೂ ದಿಢೀರ್ ಇಳಿಕೆ

ಹಿಮಾಚಲ ಪ್ರದೇಶದ ಗುಡ್ಡಗಾಡುಗಳ ಕೆಳಗೆ ರಮ್ಯ ಮನೋಹರ ವಾತಾವರಣದಲ್ಲಿ ಉಜ್ವಲ್‌ ಅವರು ಘಟದಿಂದ ಮಗೆ ಹಿಥೇಯನ್ನು ಹೊಮ್ಮಿಸಿರುವುದು, ಕೇಳಲು ದೈವಿಕವಾಗಿದೆ ಎಂದು ಹಲವಾರು ಇನ್‌ಸ್ಟಾಗ್ರಾಂ ಬಳಕೆದಾರರು ಕಮೆಂಟ್‌ ಮಾಡಿ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.

ಸಿಂಹಳ ಭಾಷೆಯ ಈ ಜನಪ್ರಿಯ ಗೀತೆಯನ್ನು ಮೂಲದಲ್ಲಿ ಬರೆದವರು ಸತೀಶನ್‌ ರತ್ನಾಯಕ ಅವರು. ಕಳೆದ ಮೇನಲ್ಲಿ ಯೊಹಾನಿಯ ಕಂಠದಲ್ಲಿ ಈ ಗೀತೆ ಬಿಡುಗಡೆಯಾಗಿ ಇಡೀ ಜಗತ್ತನ್ನೇ ಆಕರ್ಷಿಸಿತ್ತು. ಬಾಲಿವುಡ್‌ನ ಬಿಗ್‌ ಬಿ ಖ್ಯಾತಿಯ ಅಮಿತಾಭ್‌ ಬಚ್ಚನ್‌ ಅವರು ಕೂಡ ಈ ಗೀತೆಯನ್ನು ತಮ್ಮ ಮೊಮ್ಮಗಳ ಮೂಲಕ ಕೇಳಿಸಿಕೊಂಡು, ಟ್ವಿಟರ್‌ ಖಾತೆಯಲ್ಲಿ ಬಹಳ ಮೆಚ್ಚುಗೆ ಸೂಚಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...