alex Certify ‘ಮನಿಕೆ ಮಗೆ ಹಿತೆ’ಗೆ ಕುಣಿದ 8 ವರ್ಷದ ಬಾಲಕಿ: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮನಿಕೆ ಮಗೆ ಹಿತೆ’ಗೆ ಕುಣಿದ 8 ವರ್ಷದ ಬಾಲಕಿ: ವಿಡಿಯೋ ವೈರಲ್

Viral Video: Little Girl Grooves to Manike Mage Hithe, Internet Says What a  Rockstar | Watch

ಅಬ್ಬಾ….. ಈ ಸಿಂಹಳೀಯ ಹಾಡು ಮನಿಕೆ ಮಗೆ ಹಿತೆ ಕ್ರೇಜ್ ಇನ್ನೂ ಕಡಿಮೆಯಾದಂತೆ ಕಾಣುತ್ತಿಲ್ಲ. ಇಂಟರ್ನೆಟ್ ತುಂಬಾ ಈ ಹಾಡಿನ ಟ್ಯೂನ್ ಕೇಳಿಬರುತ್ತಿದೆ. ಜೊತೆಗೆ ಹಲವಾರು ಮಂದಿ ಈ ಹಾಡಿಗೆ ತಮ್ಮದೇ ಶೈಲಿಯಲ್ಲಿ ನೃತ್ಯ ಕೂಡ ಮಾಡಿದ್ದಾರೆ. ಇದೀಗ ಮತ್ತೆ ಇಂಥದ್ದೇ ವಿಡಿಯೋವೊಂದು ವೈರಲ್ ಆಗಿದೆ.

ಸಿಂಹಳದ ಹಾಡಿನ ಬೀಟ್‌ಗಳಿಗೆ ಪುಟ್ಟ ಹುಡುಗಿಯೊಬ್ಬಳು ಸಖತ್ತಾಗಿ ಸ್ಟೆಪ್ ಹಾಕಿದ್ದಾಳೆ. ರಿಯಾ ಮೆಹ್ತಾ ಎಂದು ಬಾಲಕಿಯನ್ನು ಗುರುತಿಸಲಾಗಿದ್ದು, ಈಕೆಗೆ ಕೇವಲ 8 ವರ್ಷ ವಯಸ್ಸಾಗಿದೆ. ಬಾಲಕಿಯು ಹಾಡಿನ ಮ್ಯಾಶ್-ಅಪ್‌ಗೆ ಸುಂದರವಾಗಿ, ಬಹಳ ಆತ್ಮವಿಶ್ವಾಸದಿಂದ ನೃತ್ಯ ಮಾಡಿದ್ದಾಳೆ.

ಈ ವಿಡಿಯೋವನ್ನು ಬಾಲಕಿಯ ತಾಯಿ ನೇಹಾ ಮೆಹ್ತಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಂಗೀತ ಮತ್ತು ನೃತ್ಯಕ್ಕೆ ಯಾವುದೇ ಧರ್ಮ, ಭಾಷೆ, ಲಿಂಗ, ವಯಸ್ಸಿನ ಗಡಿಗಳಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾಳೆ ಈ ಪುಟ್ಟ ಬಾಲೆ.

ಸಾಮಾಜಿಕ ಜಾಲತಾಣದಲ್ಲಿ ಬಾಲಕಿಯ ನೃತ್ಯದ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಕೂಡ ಇಷ್ಟಪಟ್ಟಿದ್ದಾರೆ. ಕಮೆಂಟ್ ವಿಭಾಗದಲ್ಲಿ ಬಳಕೆದಾರರು, ಹೃದಯ ಹಾಗೂ ಪ್ರೀತಿಯ ಎಮೋಜಿಗಳನ್ನು ತುಂಬಿದ್ದಾರೆ. ಅಲ್ಲದೆ ಪುಟ್ಟ ರಾಕ್ ಸ್ಟಾರ್ ಅಂತೆಲ್ಲಾ ಪ್ರತಿಕ್ರಿಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...