alex Certify ʼಮನಿಕೆ ಮಗೆ ಹಿತೆʼ ಗೆ ಬೆಲ್ಲಿ ಡಾನ್ಸ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮನಿಕೆ ಮಗೆ ಹಿತೆʼ ಗೆ ಬೆಲ್ಲಿ ಡಾನ್ಸ್‌

ಕಳೆದ ಕೆಲ ತಿಂಗಳಿನಿಂದ ನೆಟ್ಟಿಗರನ್ನು ಹುಚ್ಚುಹಿಡಿಸಿರುವ ಸಿಂಹಳ ಹಾಡು ʼಮನಿಕೆ ಮಗೆ ಹಿತೆʼ ದಿನಗಳೆದಂತೆ ತನ್ನ ಟ್ರೆಂಡ್‌ ಅನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುತ್ತಾ ಸಾಗಿದೆ.

ಶ್ರೀಲಂಕಾದ ಗಾಯಕಿ ಯೋಹಾನಿ ಡಿಲೋಕಾ ಡಿ ಸಿಲ್ವಾ ಹಾಡಿರುವ ಈ ಹಾಡಿಗೆ ತಮ್ಮದೇ ಟಚ್‌ ಕೊಟ್ಟು, ತಮ್ಮದೇ ದನಿಯಲ್ಲಿ ಹಾಡುವ ಅಥವಾ ಸ್ಟೆಪ್ ಹಾಕುವ ವಿಡಿಯೋ ಮಾಡಿಕೊಂಡು ಅಪ್ಲೋಡ್ ಮಾಡುವುದು ನೆಟ್ಟಿಗರಲ್ಲಿ ವೈರಲ್ ಟ್ರೆಂಡ್ ಆಗಿದೆ.

ಇದೀಗ ದೀಪಾಲಿ ವಶಿಷ್ಠ ಹೆಸರಿನ ಬೆಲ್ಲಿ ನೃತ್ಯಗಾತಿಯೊಬ್ಬರು ಇದೇ ಹಾಡಿಗೆ ಡ್ಯಾನ್ಸ್ ಮಾಡಿಕೊಂಡು ಅದರ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ 71,000+ ಅನುಯಾಯಿಗಳನ್ನು ಹೊಂದಿರುವ ದೀಪಾಲಿ, ಈ ಹಾಡಿಗೆ ಭಾರೀ ಉತ್ಸಾಹದಿಂದ ಸ್ಟೆಪ್ ಹಾಕಿದ್ದಾರೆ.

“ಈ ಹಾಡು ನನ್ನನ್ನು ಈ ಟ್ರೆಂಡ್‌ನತ್ತ ಎಳೆದಿದೆ,” ಎಂದು ಕ್ಯಾಪ್ಷನ್ ಕೊಟ್ಟು ದೀಪಾಲಿ ತಮ್ಮ ವಿಡಿಯೋ ಶೇರ್‌ ಮಾಡಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...