ಶ್ರೀಲಂಕಾದ ಯುವ ಗಾಯಕಿ ಯೊಹಾನಿ ದಿಲೊಕಾ ಡಿಸಿಲ್ವಾ ಹಾಡಿದ ಮನಿಕೆ ಮಗೆ ಹಿಥೇ ಹಾಡು ವಿಶ್ವವಿಖ್ಯಾತ ಆಗಿದೆ. ಇಂಪಾದ ಗಾಯನ, ತಲೆದೂಗಿಸುವಂಥ ತಾಳ, ಸುಶ್ರಾವ್ಯ ರಾಗಕ್ಕೆ ಮನಸೋಲದವರೇ ಇಲ್ಲ.
ಬಹಳಷ್ಟು ಜನರು ಈ ಲಂಕಾ ಭಾಷೆಯ ಗೀತೆಯನ್ನು ತಮ್ಮ ಪ್ರಾದೇಶಿಕ ಭಾಷೆಯಲ್ಲಿ ಹಾಡಿ ಭೇಷ್ ಎನಿಸಿಕೊಂಡಿದ್ದಾರೆ ಕೂಡ. ಆದರೆ ಉಜ್ವಲ್ ಎಂಬ ಮನಾಲಿಯ ಯುವಕರೊಬ್ಬರು ಕರ್ನಾಟಕ ಶಾಸ್ತ್ರೀಯ ಸಂಗೀತದ ವಾದ್ಯ ’’ಘಟ’’ದಲ್ಲಿ ಈ ಗೀತೆಯನ್ನು ಮರುಸೃಷ್ಟಿಸಿದ್ದಾರೆ. ತಾಳವಾದ್ಯದಲ್ಲಿ ಸುಶ್ರಾವ್ಯ ಗೀತೆ ಮೂಡಿಬಂದಿರುವ ವಿಡಿಯೊ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ.
GOOD NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇನ್ನಷ್ಟು ಕುಸಿತ; ಸಾವಿನ ಸಂಖ್ಯೆಯಲ್ಲಿಯೂ ದಿಢೀರ್ ಇಳಿಕೆ
ಹಿಮಾಚಲ ಪ್ರದೇಶದ ಗುಡ್ಡಗಾಡುಗಳ ಕೆಳಗೆ ರಮ್ಯ ಮನೋಹರ ವಾತಾವರಣದಲ್ಲಿ ಉಜ್ವಲ್ ಅವರು ಘಟದಿಂದ ಮಗೆ ಹಿಥೇಯನ್ನು ಹೊಮ್ಮಿಸಿರುವುದು, ಕೇಳಲು ದೈವಿಕವಾಗಿದೆ ಎಂದು ಹಲವಾರು ಇನ್‌ಸ್ಟಾಗ್ರಾಂ ಬಳಕೆದಾರರು ಕಮೆಂಟ್ ಮಾಡಿ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.
ಸಿಂಹಳ ಭಾಷೆಯ ಈ ಜನಪ್ರಿಯ ಗೀತೆಯನ್ನು ಮೂಲದಲ್ಲಿ ಬರೆದವರು ಸತೀಶನ್ ರತ್ನಾಯಕ ಅವರು. ಕಳೆದ ಮೇನಲ್ಲಿ ಯೊಹಾನಿಯ ಕಂಠದಲ್ಲಿ ಈ ಗೀತೆ ಬಿಡುಗಡೆಯಾಗಿ ಇಡೀ ಜಗತ್ತನ್ನೇ ಆಕರ್ಷಿಸಿತ್ತು. ಬಾಲಿವುಡ್‌ನ ಬಿಗ್ ಬಿ ಖ್ಯಾತಿಯ ಅಮಿತಾಭ್ ಬಚ್ಚನ್ ಅವರು ಕೂಡ ಈ ಗೀತೆಯನ್ನು ತಮ್ಮ ಮೊಮ್ಮಗಳ ಮೂಲಕ ಕೇಳಿಸಿಕೊಂಡು, ಟ್ವಿಟರ್ ಖಾತೆಯಲ್ಲಿ ಬಹಳ ಮೆಚ್ಚುಗೆ ಸೂಚಿಸಿದ್ದಾರೆ.
https://youtu.be/k8vWhjzbxhw