alex Certify ಮೈಕೆಲ್ ಜಾಕ್ಸನ್ ಹಾಡಿಗೆ ವ್ಯಕ್ತಿಯೊಬ್ಬನ ಸಖತ್ ಸ್ಟೆಪ್ಸ್: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೈಕೆಲ್ ಜಾಕ್ಸನ್ ಹಾಡಿಗೆ ವ್ಯಕ್ತಿಯೊಬ್ಬನ ಸಖತ್ ಸ್ಟೆಪ್ಸ್: ವಿಡಿಯೋ ವೈರಲ್

ಜನರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸಾಮಾಜಿಕ ಮಾಧ್ಯಮವನ್ನು ಬಳಸುತ್ತಾರೆ. ಹಲವಾರು ಹಾಡುವ ಮತ್ತು ನೃತ್ಯ ಮಾಡುವ ವಿಡಿಯೋಗಳು ಪ್ರತಿ ದಿನವೂ ಅಂತರ್ಜಾಲದಲ್ಲಿ ವೈರಲ್ ಆಗುತ್ತವೆ. ಹಾಗೆ ಇಲ್ಲೊಬ್ಬ ವ್ಯಕ್ತಿ ಮೈಕೆಲ್ ಜಾಕ್ಸನ್ ಹಾಡಿಗೆ ಬೀದಿಯಲ್ಲಿ ಸಖತ್ ಸ್ಟೆಪ್ಸ್ ಹಾಕಿದ್ದು, ಈ ವಿಡಿಯೋ ಆನ್‌ಲೈನ್‌ನಲ್ಲಿ ಭಾರಿ ಸದ್ದು ಮಾಡಿದೆ.

ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆಗೆ `ಗ್ಲೋಬಲ್ ಅಚಿವರ್ಸ್ʼ ಪ್ರಶಸ್ತಿ

ವಿಡಿಯೋದಲ್ಲಿ ವ್ಯಕ್ತಿಯು ಮೈಕೆಲ್ ಜಾಕ್ಸನ್ ಅವರ ‘ಡೇಂಜರಸ್’ ಹಾಡಿಗೆ ನೃತ್ಯ ಮಾಡುವುದನ್ನು ಕಾಣಬಹುದು. ಈತ ‘ಪಾಪ್ ಕಿಂಗ್’ನನ್ನು ಅನುಕರಿಸಿದ್ದನ್ನು ನೋಡಿ ನೆಟ್ಟಿಗರು ನಿಬ್ಬೆರಗಾಗಿದ್ದಾರೆ. ‘ಮೈಕಲ್ ಜಾಕ್ಸನ್ ದೆವ್ವ ಅವನೊಳಗೆ ವಾಸಿಸುತ್ತಿದೆ’ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಆದರೆ, ವಿಡಿಯೋವನ್ನು ಯಾವಾಗ ಮತ್ತು ಎಲ್ಲಿ ಚಿತ್ರೀಕರಿಸಲಾಗಿದೆ ಎಂಬುದು ತಿಳಿದಿಲ್ಲ.

ಚಲಿಸುತ್ತಿದ್ದ ಬಸ್ ನಲ್ಲೇ ನಡೆದಿದೆ ಬೆಚ್ಚಿಬೀಳಿಸುವ ಘಟನೆ

1991 ರಲ್ಲಿ ಬಿಡುಗಡೆಯಾದ ‘ಡೇಂಜರಸ್’ ಸಾರ್ವಕಾಲಿಕ ಹೆಚ್ಚು ಮಾರಾಟವಾದ ಆಲ್ಬಂಗಳಲ್ಲಿ ಒಂದಾಗಿದೆ. ಇದು ಪಾಪ್ ಗಾಯಕನ ಎಂಟನೇ ಸ್ಟುಡಿಯೋ ಆಲ್ಬಂ ಆಗಿದೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಈತನ ನೃತ್ಯ ಸಖತ್ ಸದ್ದು ಮಾಡುತ್ತಿದೆ. ಈತನ ನೃತ್ಯಕ್ಕೆ ನೆಟ್ಟಿಗರು ಮನಸೋತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...