alex Certify ಮೊಗದಲ್ಲಿ ಮಂದಹಾಸ ಮೂಡಿಸುತ್ತೆ ಫುಟ್ಬಾಲ್‌ ಪಂದ್ಯದ ವೇಳೆ ತರಲೆ ಬೆಕ್ಕು ಮಾಡಿದ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಗದಲ್ಲಿ ಮಂದಹಾಸ ಮೂಡಿಸುತ್ತೆ ಫುಟ್ಬಾಲ್‌ ಪಂದ್ಯದ ವೇಳೆ ತರಲೆ ಬೆಕ್ಕು ಮಾಡಿದ ಕೆಲಸ

ಸಾಕು ಪ್ರಾಣಿಗಳು ಮನೆಯಲ್ಲಿ ಆಗಾಗ್ಗೆ ಮನರಂಜನೆ ಕೊಡುತ್ತಿರುತ್ತವೆ. ಅದರಲ್ಲೂ ಬೆಕ್ಕು, ನಾಯಿಗಳು ಕುಟುಂಬ ಸದಸ್ಯರ ಒತ್ತಡ ಕಡಿಮೆ ಮಾಡುವ ಸ್ಟ್ರೆಸ್​ ಬಸ್ಟರ್​ಗಳು ಕೂಡ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬೆಕ್ಕುಗಳ ಅಪರಿಮಿತ ವಿಡಿಯೋಗಳು ಬರುತ್ತಿವೆ. ಇದೀಗ ಬಂದಿರುವ ಹೊಸ ವಿಡಿಯೋದಲ್ಲಿ ಬೆಕ್ಕಿನ ಮರಿಯ ಚೆಲ್ಲಾಟ ನೆಟ್ಟಿಗರನ್ನು ಖುಷಿಯಲ್ಲಿ ತೇಲಿಸಿದೆ.

ಲೇಖಕಿ ಮೆಲ್​ ರಾಬಿನ್ಸ್​ ತನ್ನ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ, ಅಲ್ಲಿ ತರಲೆ ಬೆಕ್ಕಿನ ಮರಿಯು ಗೋಲ್​ಕೀಪರ್​ನಂತೆ ವರ್ತಿಸುವುದನ್ನು ಕಾಣಬಹುದು. “ಈ ಬೆಕ್ಕು ಉತ್ತಮ ಗೋಲಿಯಾಗಿ ಕೆಲಸ ಮಾಡುತ್ತದೆ” ಎಂದು ಶೀರ್ಷಿಕೆಯೊಂದಿಗೆ ರೀಲ್​ ಪೋಸ್ಟ್​ ಇದೆ.

ಕೆಲವು ವ್ಯಕ್ತಿಗಳು ಟಿವಿಯಲ್ಲಿ ಫುಟ್​ಬಾಲ್​ ಪಂದ್ಯ ವೀಕ್ಷಿಸುತ್ತಿದ್ದು, ಅವರ ಮುದ್ದಿನ ಬೆಕ್ಕಿನ ಮರಿ ಸಹ ಟಿವಿ ನೋಡುತ್ತಿರುತ್ತದೆ. ಚೆಂಡು ಗೋಲ್​ ಬಾಕ್ಸ್​ ಹತ್ತಿರ ಬಂದಾಗಲೆಲ್ಲಾ ಬೆಕ್ಕಿನ ಮರಿ ಟಿವಿ ಪರದೆಗೆ ತನ್ನ ಪುಟ್ಟ ಮುಂಗಾಲಿನಿಂದ ಬಡಿದು ಬಾಲ್​ ನಿಲ್ಲಿಸಲು ಪ್ರಯತ್ನಿಸುವುದನ್ನು ನೋಡಬಹುದು. ಬೆಕ್ಕಿನ ಮರಿಯ ಈ ತರಲೆಯನ್ನು ನೋಡಿ ಅಲ್ಲಿದ್ದವರು ಜೋರಾಗಿ ನಗುವಂತೆ ಮಾಡಿತು.

ಬೆಕ್ಕಿನ ಮರಿ ಪ್ರತಿ ಬಾರಿ ಚೆಂಡು ಕಾಣಿಸಿದಾಗಲೆಲ್ಲ ಅದೇ ರೀತಿ ಮಾಡುತ್ತದೆ, ಈ ಉಲ್ಲಾಸದ ದೃಶ್ಯ ನೋಡಿದರೆ ನಗುವುದನ್ನು ನಿಲ್ಲಿಸಲು ಸಾಧ್ಯವಿಲ್ಲ.

ಈ ರೀಲ್​ 1.5 ಮಿಲಿಯನ್​ ವೀಕ್ಷಣೆಯಾಗಿದೆ. 72 ಕೆ ಲೈಕ್ ಪಡೆದಿದೆ. ಇನ್​ಸ್ಟಾಗ್ರಾಮ್​ ಬಳಕೆದಾರರಿಗೆ ಈ ವಿಡಿಯೊ ಖುಷಿಪಡಿಸಿದೆ. ಸಾವಿರಾರು ಮಂದಿ ಕಾಮೆಂಟ್​ ಮಾಡಿ ಖುಷಿ ಹಂಚಿಕೊಂಡಿದ್ದಾರಲ್ಲದೇ ಬೆಕ್ಕಿನ ಮರಿಯ ಚಟುವಟಿಕೆಯನ್ನು ಕೊಂಡಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...