alex Certify ಟಿವಿ ನೋಡುತ್ತಲೇ ನಿದ್ರೆ ಮಾಡುವ ಅಭ್ಯಾಸವಿದೆಯೇ ? ಹಾಗಿದ್ರೆ ಎಚ್ಚರ; ಅನಾರೋಗ್ಯಕ್ಕೆ ಕಾರಣವಾಗಬಹುದು ಈ ಅಭ್ಯಾಸ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿವಿ ನೋಡುತ್ತಲೇ ನಿದ್ರೆ ಮಾಡುವ ಅಭ್ಯಾಸವಿದೆಯೇ ? ಹಾಗಿದ್ರೆ ಎಚ್ಚರ; ಅನಾರೋಗ್ಯಕ್ಕೆ ಕಾರಣವಾಗಬಹುದು ಈ ಅಭ್ಯಾಸ…!

ಪ್ರತಿಯೊಬ್ಬರೂ ಟಿವಿ ವೀಕ್ಷಿಸುವ ಅಭ್ಯಾಸ ಮಾಡಿಕೊಂಡಿರ್ತಾರೆ. ಟಿವಿ ನೋಡುವುದು ದುರಭ್ಯಾಸವೇನಲ್ಲ, ಆದರೆ ಅತಿಯಾದರೆ ಅನೇಕ ಸಮಸ್ಯೆಗಳು ಬರುತ್ತವೆ. ಟಿವಿ ಮುಂದೆ ದೀರ್ಘಕಾಲ ಕುಳಿತುಕೊಳ್ಳುವುದು ಕಣ್ಣುಗಳಿಗೆ ಮಾತ್ರವಲ್ಲದೇ ಮೆದುಳಿಗೆ ಕೂಡ ಅಪಾಯಕಾರಿ.

ಟಿವಿ ನೋಡುತ್ತಲೇ ಮಲಗಿ ನಿದ್ರಿಸುವುದು ಸಹ ಆರೋಗ್ಯಕ್ಕೆ ಹಾನಿಕಾರಕ ಎಂದು ವರದಿಯೊಂದು ಬಹಿರಂಗಪಡಿಸಿದೆ. ಈ ಅಭ್ಯಾಸ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅನೇಕರು ಟಿವಿ ನೋಡುತ್ತಲೇ ನಿದ್ದೆ ಹೋಗಿಬಿಡುತ್ತಾರೆ. ಆದರೆ ಮಲಗುವ ಮುನ್ನ ಟಿವಿ ನೋಡುವುದು ನಿದ್ರೆಯನ್ನು ಹಾಳು ಮಾಡುತ್ತದೆ. ಜೊತೆಗೆ ತ್ವರಿತವಾಗಿ ತೂಕ ಹೆಚ್ಚಾಗಲು ಕಾರಣವಾಗಬಹುದು.

ಚಿಕಾಗೋದ ನಾರ್ತ್‌ವೆಸ್ಟರ್ನ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನ ಸಂಶೋಧಕರು, 63 ರಿಂದ 84 ವರ್ಷ ವಯಸ್ಸಿನ 550ಕ್ಕೂ ಹೆಚ್ಚು ಜನರನ್ನು ಅಧ್ಯಯನಕ್ಕೆ ಒಳಪಡಿಸಿದ್ದಾರೆ. ಅಧ್ಯಯನದ ಪ್ರಕಾರ ಮಂದ ಬೆಳಕಿನಲ್ಲಿ ಮಲಗುವವರು ಮಧುಮೇಹ, ಸ್ಥೂಲಕಾಯತೆ ಮತ್ತು ಅಧಿಕ ರಕ್ತದೊತ್ತಡದ ಅಪಾಯವನ್ನು ಹೊಂದಿರುತ್ತಾರೆ. ಟಿವಿ ಅಥವಾ ಸ್ಮಾರ್ಟ್‌ಫೋನ್‌ಗಿಂತ ಕಡಿಮೆ ಬೆಳಕಿನಲ್ಲಿ ಮಲಗುವ ಜನರು ಮರುದಿನ ಬೆಳಿಗ್ಗೆ ಹೆಚ್ಚಿನ ಇನ್ಸುಲಿನ್ ಪ್ರತಿರೋಧವನ್ನು ಹೊಂದಿರುತ್ತಾರೆ ಎಂದು ಸಂಶೋಧನೆಯು ಕಂಡುಹಿಡಿದಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಸಾಮರ್ಥ್ಯದ ಮೇಲೂ ಪರಿಣಾಮ ಬೀರುತ್ತದೆ.

ಆರೋಗ್ಯದ ಮೇಲೆ ಟಿವಿ ಬೆಳಕಿನ ಪರಿಣಾಮ

ರಾತ್ರಿಯಲ್ಲಿ ಟಿವಿ ಬೆಳಕು ಮೆಲಟೋನಿನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಿಂದ ನಿದ್ರೆಗೆ ತೊಂದರೆಯಾಗುತ್ತದೆ ಮತ್ತು ಮಧುಮೇಹದ ಜೊತೆಗೆ ಅಧಿಕ ರಕ್ತದೊತ್ತಡದ ಅಪಾಯವೂ ಹೆಚ್ಚಾಗುತ್ತದೆ. ಬಿಪಿ, ಡಯಾಬಿಟೀಸ್ ಮತ್ತು ಬೊಜ್ಜಿನಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು.

ಕೃತಕ ನೀಲಿ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಮೆಲಟೋನಿನ್ ನಿಗ್ರಹಿಸಲ್ಪಡುತ್ತದೆ. ನಾವು ಬಯಸಿದರೂ ನಿದ್ರಿಸಲು ಸಾಧ್ಯವಾಗುವುದಿಲ್ಲ. ನಿದ್ರಾಹೀನತೆಗೆ ಇದು ಕಾರಣವಾಗಬಹುದು.

ಮೆದುಳಿನ ಮೇಲೆ ದುಷ್ಪರಿಣಾಮ

ಮಲಗುವ ಮುನ್ನ ಟಿವಿ ನೋಡುವುದರಿಂದ ಆ ವ್ಯಕ್ತಿ ಅದರ ಬಗ್ಗೆಯೇ ಕನಸು ಕಾಣಲು ಪ್ರಾರಂಭಿಸುತ್ತಾನೆ. ಕೆಲವು ಕನಸುಗಳು ಭಯಾನಕತೆ ಮತ್ತು ಚಂಚಲತೆಯನ್ನು ಉಂಟುಮಾಡಬಹುದು. ಈ ಕಾರಣದಿಂದಾಗಿ  ನಿದ್ರೆಗೆ ತೊಂದರೆಯಾಗುತ್ತದೆ. ಬೆಳಗ್ಗೆ ಎದ್ದ ನಂತರ ಮೂಡ್‌ ಕೆಟ್ಟುಹೋಗಬಹುದು. ಆಯಾಸ ಕೂಡ ಕಾಡುತ್ತದೆ. ಟಿವಿ ನೋಡುವಾಗ ನಿದ್ರಿಸುವುದರಿಂದ ಸರಿಯಾದ ಭಂಗಿಯಲ್ಲಿ ಮಲಗಲು ಸಾಧ್ಯವಾಗುವುದಿಲ್ಲ. ಇದರಿಂದ ಭುಜಗಳು ಮತ್ತು ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...