alex Certify ಎದೆ ನಡುಗಿಸುವಂತಿದೆ ಚಲಿಸುತ್ತಿದ್ದ ಬೈಕ್‌ ಮೇಲೆ ಬಂಡೆ ಉರುಳಿ ಬಿದ್ದ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎದೆ ನಡುಗಿಸುವಂತಿದೆ ಚಲಿಸುತ್ತಿದ್ದ ಬೈಕ್‌ ಮೇಲೆ ಬಂಡೆ ಉರುಳಿ ಬಿದ್ದ ವಿಡಿಯೋ

ಕೇರಳದ ತಾಮರಸ್ಸೇರಿಯಲ್ಲಿ ಮೈಜುಮ್ಮೆನ್ನುವ ಘಟನೆ ನಡೆದಿದೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರನ ಮೇಲೆ ಭಾರೀ ಗಾತ್ರದ ಬಂಡೆ ಗುಡ್ಡದಿಂದ ಉರುಳಿ ಬಿದ್ದು ಆತ ಸಾವನ್ನಪ್ಪಿದ್ದಾನೆ.

ಬೈಕ್ ಹಿಂದೆ ಹೋಗುತ್ತಿದ್ದ ಮತ್ತೋರ್ವ ಬೈಕ್ ಸವಾರ ಈ ಶಾಕಿಂಗ್ ದೃಶ್ಯವನ್ನು ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾನೆ.

BIG NEWS: ಆಸಿಡ್ ದಾಳಿ ಪ್ರಕರಣ; ಆರೋಪಿ ಪತ್ತೆಗೆ 7 ತಂಡ ರಚನೆ

ಬೈಕ್ ಸವಾರನ ಮೇಲೆ ಹೆಬ್ಬಂಡೆಯ ಒಂದು ತುಣುಕು ಬಿದ್ದ ಪರಿಣಾಮ ಆತ ಆಯತಪ್ಪಿ ಎಡಬದಿಯಲ್ಲಿರುವ ಕಮರಿಗೆ ಬಿದ್ದಿದ್ದಾನೆ. ಕಲ್ಲು ಬಿದ್ದ ರಭಸದಿಂದ ತೀವ್ರ ರಕ್ತಸ್ರಾವವಾಗಿ ಆತ ಸ್ಥಳದಲ್ಲೇ ಅಸುನೀಗಿದ್ದಾನೆ.

ಆ ಕ್ಷಣವನ್ನು ಮತ್ತೊಬ್ಬ ಸವಾರ ಸೆರೆ ಹಿಡಿದಿರುವ ವಿಡಿಯೋ ನೋಡಿದರೆ ಮೈಜುಮ್ಮೆನ್ನುವಂತಿದ್ದು, ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...