alex Certify BIG NEWS: ಆಸಿಡ್ ದಾಳಿ ಪ್ರಕರಣ; ಆರೋಪಿ ಪತ್ತೆಗೆ 7 ತಂಡ ರಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಆಸಿಡ್ ದಾಳಿ ಪ್ರಕರಣ; ಆರೋಪಿ ಪತ್ತೆಗೆ 7 ತಂಡ ರಚನೆ

ಬೆಂಗಳೂರು: ಯುವತಿ ಮೇಲೆ ಆಸಿಡ್ ದಾಳಿ ನಡೆದು ಎರಡು ದಿನಗಳು ಕಳೆದಿದ್ದರೂ ಇನ್ನೂ ಆರೋಪಿ ನಾಗೇಶ್ ಪತ್ತೆಯಾಗಿಲ್ಲ. ಆರೋಪಿ ಪತ್ತೆಗಾಗಿ ಪೊಲೀಸರ 7 ತಂಡ ರಚನೆ ಮಾಡಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.

ಸೆಂಟ್ ಜಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಸಂತ್ರಸ್ತ ಯುವತಿ ಭೇಟಿ ಬಳಿಕ ಮಾತನಾಡಿದ ಕಮಲ್ ಪಂತ್, ಶೀಘ್ರದಲ್ಲಿಯೇ ಆರೋಪಿಯನ್ನು ಬಂಧಿಸಲಾಗುವುದು. 7 ತಂಡಗಳನ್ನು ರಚಿಸಲಾಗಿದ್ದು, ಹೊರ ರಾಜ್ಯಗಳಲ್ಲಿಯೂ ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದರು.

ಈ ನಡುವೆ ಆಸಿಡ್ ದಾಳಿ ಆರೋಪಿ ನಾಗೇಶ್ ತಮಿಳುನಾಡಿನಲ್ಲಿ ತಲೆ ಮರೆಸಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಆರೋಪಿ ನಾಗೇಶ್ ಪೋಷಕರು ಹಾಗೂ ಅಣ್ಣ ನಾಗೇಂದ್ರ ಬಾಬು ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...