alex Certify 30 ವರ್ಷ ಒಂದೇ ನಂಬರ್ ಲಾಟರಿ ಟಿಕೆಟ್ ಖರೀದಿಸುತ್ತಿದ್ದವನಿಗೆ ಕೊನೆಗೂ ಒಲಿದ ಅದೃಷ್ಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

30 ವರ್ಷ ಒಂದೇ ನಂಬರ್ ಲಾಟರಿ ಟಿಕೆಟ್ ಖರೀದಿಸುತ್ತಿದ್ದವನಿಗೆ ಕೊನೆಗೂ ಒಲಿದ ಅದೃಷ್ಟ

ಅದೃಷ್ಟ ಇದ್ರೆ ಮಾತ್ರ ಲಾಟರಿ ಹೊಡೆಯೋಕೆ ಸಾಧ್ಯ. ಕೆಲವರು ಅದೃಷ್ಟ ಪರೀಕ್ಷೆ ಹೆಸರಿನಲ್ಲಿ ಕೈನಲ್ಲಿರುವ ಹಣವನ್ನೆಲ್ಲ ಕಳೆದುಕೊಳ್ತಾರೆ. ಲಾಟರಿ ಹೊಡೆದ್ರೆ ಮಾತ್ರ, ಬಡವ ಕೂಡ ರಾತ್ರೋರಾತ್ರಿ ಶ್ರೀಮಂತನಾಗ್ತಾನೆ.

ಕೆಲವರು, ತಾವು ಮಾಡುವ ಕೆಲಸದ ಮೇಲೆ ಹೆಚ್ಚು ವಿಶ್ವಾಸವಿಟ್ಟಿರುತ್ತಾರೆ. ಪದೇ ಪದೇ ವಿಫಲವಾದ್ರೂ, ಭರವಸೆ ಕಳೆದುಕೊಳ್ಳುವುದಿಲ್ಲ. ಒಂದಲ್ಲ ಒಂದು ದಿನ ಯಶಸ್ಸು ಸಿಗುತ್ತೆ ಎಂಬ ವಿಶ್ವಾಸದಲ್ಲಿ ಕೆಲಸ ಮಾಡ್ತಾರೆ.

ಅಮೆರಿಕಾದ ಮಿಚಿಗನ್ ನಲ್ಲಿ ವಾಸಿಸುವ ವ್ಯಕ್ತಿಯೊಬ್ಬನಿಗೆ ಬರೋಬ್ಬರಿ 30 ವರ್ಷಗಳ ನಂತ್ರ ಲಾಟರಿ ಕೈ ಹಿಡಿದಿದೆ. ವ್ಯಕ್ತಿ ಒಂದೇ ನಂಬರ್ ಲಾಟರಿಯನ್ನು 30 ವರ್ಷಗಳ ಕಾಲ ಖರೀದಿ ಮಾಡಿದ್ದಾನೆ.

1991ರಿಂದ ಒಂದೇ ನಂಬರ್ ಲಾಟರಿಯನ್ನು ಆತ ಖರೀದಿ ಮಾಡ್ತಿದ್ದ ಎನ್ನಲಾಗಿದೆ. 61 ವರ್ಷದ ವ್ಯಕ್ತಿ 1,36,48,77,818 ರೂಪಾಯಿ ಲಾಟರಿ ಗೆದ್ದಿದ್ದಾನೆ. 18.41 ಮಿಲಿಯನ್ ಡಾಲರ್ ಗೆದ್ದಿರುವ ವ್ಯಕ್ತಿ ಅದ್ರಲ್ಲಿ 11.7 ಮಿಲಿಯನ್ ಡಾಲರ್ ತಾನು ಪಡೆಯುತ್ತಾನಂತೆ. ಉಳಿದ ಹಣವನ್ನು ದಾನ ನೀಡಲು ನಿರ್ಧರಿಸಿದ್ದಾನೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...