alex Certify ಲ್ಯಾಪ್​ಟಾಪ್ ಅಂತ್ಯಕ್ರಿಯೆಗೆ ಮುಂದಾದ ಟಿಕ್​ಟಾಕರ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲ್ಯಾಪ್​ಟಾಪ್ ಅಂತ್ಯಕ್ರಿಯೆಗೆ ಮುಂದಾದ ಟಿಕ್​ಟಾಕರ್…!

ಲ್ಯಾಪ್​ಟಾಪ್​​ ಅತ್ಯಂತ ಪ್ರಚಲಿತ ಎಲೆಕ್ಟ್ರಿಕ್​ ಸಾಧನಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಒಂದು ಡಿವೈಸ್​ ಎಂದರೆ ತಪ್ಪಾಗಲಿಕ್ಕಿಲ್ಲ. ಈಗಂತೂ ವರ್ಕ್​ ಫ್ರಮ್​ ಹೋಮ್​ಗಳ ಸಂಖ್ಯೆ ಹೆಚ್ಚಿರೋದ್ರಿಂದ ಮನೆಯಲ್ಲೊಂದು ಲ್ಯಾಪ್​ಟಾಪ್​ಗಳನ್ನ ಕಾಣಬಹುದಾಗಿದೆ.

ಲ್ಯಾಪ್​ಟಾಪ್​ಗಳು ಬಹುಕಾಲದವರೆಗೆ ಬಳಕೆ ಮಾಡಬಹುದಾದ ಒಂದು ಎಲೆಕ್ಟ್ರಿಕ್​ ಸಾಧನವಾಗಿದೆ. ಆದರೆ ಯಾವ ಸಾಧನವೂ ಶಾಶ್ವತವಲ್ಲ. ಲ್ಯಾಪ್​ಟಾಪ್​ ಇನ್ನೇನು ಸಂಪೂರ್ಣವಾಗಿ ಹಾಳಾಗುತ್ತೆ ಅನ್ನೋವಾಗ ಪರದೆ ಅಸ್ಪಷ್ಟವಾಗಿ ಕಾಣುವುದು, ಪದೇ ಹ್ಯಾಂಗ್​ ಆಗೋದು, ಇದ್ದಕ್ಕಿದ್ದಂತೆ ಶಟ್​ಡೌನ್​ ಆಗೋದು ಹೀಗೆ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತದೆ. ಈ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳಲು ಶುರುವಾದ ಬಳಿಕ ಹೊಸ ಲ್ಯಾಪ್​ಟಾಪ್​ ಖರೀದಿ ಮಾಡುವ ಸಮಯ ಬಂದಿದೆ ಎಂದು ಅರ್ಥ ಮಾಡಿಕೊಳ್ಳಲಿಕ್ಕೆ ಅಡ್ಡಿಯಿಲ್ಲ.

ಸ್ಮಾರ್ಟ್ ಶಾಪಿಂಗ್ ಮಾಡಿ ಹಣ ಉಳಿಸಿ

ಆದರೆ ಕೆಲವರಿಗೆ ತಮ್ಮ ಅತ್ಯಂತ ಪ್ರೀತಿಯ ಸಾಧನವನ್ನ ಬಿಟ್ಟಿರೋದು ಸುಲಭದ ಮಾತಾಗಿರಲ್ಲ. ಅದೇ ರೀತಿ ಟಿಕ್​ಟಾಕ್​ ಬಳಕೆದಾರ ಝೇನ್​ ಕೂಡ ಲ್ಯಾಪ್​ಟಾಪ್​ ಮೇಲಿನ ತಮ್ಮ ಪ್ರೀತಿ ಎಂತಾದ್ದು ಅನ್ನೋದನ್ನ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.

ತಮ್ಮ ಪ್ರೀತಿಯ ಲ್ಯಾಪ್​ಟಾಪ್​ ಅಂತ್ಯಕ್ರಿಯೆ ಮಾಡುವ ಬಗ್ಗೆ ಮಾತನಾಡುತ್ತಿರೋ ವಿಡಿಯೋವನ್ನ ಝೇನ್​ ಸೋಶಿಯಲ್ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ .

ಈ ಬೆಕ್ಕಿನ ಚಾಣಾಕ್ಷತನ ನೋಡಿದ್ರೆ ನೀವು ಶಾಕ್​ ಆಗೋದು ಗ್ಯಾರಂಟಿ..!

ತನ್ನ ಹಾಳಾದ ಲ್ಯಾಪ್​ಟಾಪ್​ನ ಸಮೇತ ಅಂತ್ಯಕ್ರಿಯೆಗೆ ನೋಂದಣಿ ಮಾಡುವ ಕಚೇರಿಗೆ ಭೇಟಿ ನೀಡಿದ ಟಿಕ್​ಟಾಕರ್​​ ಕಚೇರಿಯಲ್ಲಿದ್ದ ಮಹಿಳೆಯ ಜೊತೆ ಮಾತನಾಡಿದ್ದಾನೆ.

ಮಹಿಳೆಯು ಟಿಕ್​ಟಾಕರ್​ ಬಳಿ ಅವರು ಆಗಲೇ ಸತ್ತು ಹೋದರಾ ಎಂದು ಕೇಳುತ್ತಾಳೆ. ಅಲ್ಲದೇ ಶವ ಎಲ್ಲಿದೆ ಎಂದು ಮಹಿಳೆ ಪ್ರಶ್ನೆ ಮಾಡುತ್ತಾಳೆ.

ಇದಕ್ಕೆ ಉತ್ತರಿಸಿದ ಟಿಕ್​ಟಾಕರ್​, ನನ್ನ ಲ್ಯಾಪ್​ಟಾಪ್​ ಸತ್ತು ಹೋಗಿದೆ ಎಂದು ಹೇಳುತ್ತಾನೆ. ಈ ವಿಡಿಯೋ ಎಷ್ಟರ ಮಟ್ಟಿಗೆ ವೈರಲ್​ ಆಗಿದೆ ಅಂದರೆ 2 ಮಿಲಿಯನ್​ಗೂ ಅಧಿಕ ವೀವ್ಸ್ ಸಂಪಾದಿಸುವಲ್ಲಿ ಯಶಸ್ವಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...