alex Certify ಚಿಕ್ಕಪ್ಪ – ಸೋದರಳಿಯನ ಭೀಕರ ಜಗಳಕ್ಕೆ ಸಾಕ್ಷಿಯಾಯ್ತು ತರಕಾರಿ ಮಾರುಕಟ್ಟೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿಕ್ಕಪ್ಪ – ಸೋದರಳಿಯನ ಭೀಕರ ಜಗಳಕ್ಕೆ ಸಾಕ್ಷಿಯಾಯ್ತು ತರಕಾರಿ ಮಾರುಕಟ್ಟೆ….!

ಶಿಮ್ಲಾ: ಕಳೆದ ವಾರ ಶಿಮ್ಲಾದ ಗಂಜ್ ಬಜಾರ್ ತರಕಾರಿ ಮಾರುಕಟ್ಟೆಯಲ್ಲಿ ಬೆಳಿಗ್ಗೆ 8 ಗಂಟೆಗೆ ಮಾರಾಟಗಾರರು ಹಣ್ಣುಗಳನ್ನು ಹರಾಜು ಹಾಕುತ್ತಿದ್ದಾಗ ನಡೆದ ಗಲಾಟೆಯ ವಿಡಿಯೋ ವೈರಲ್​ ಆಗಿದೆ. ಚಿಕ್ಕಪ್ಪ ಮತ್ತು ಸೋದರಳಿಯ ನಡುವಿನ ಕೌಟುಂಬಿಕ ಕಲಹವೇ ಜಗಳಕ್ಕೆ ಪ್ರಮುಖ ಕಾರಣವಾಗಿ ಪರಿಸ್ಥಿತಿ ಕೈಮೀರಿತ್ತು.ಇದರ ವಿಡಿಯೋ ವೈರಲ್​ ಆಗಿದೆ.

ವೈರಲ್​ ವಿಡಿಯೋದಲ್ಲಿ ಮಾರಾಟಗಾರರು ಗಲಾಟೆಯಲ್ಲಿ ಪಾಲ್ಗೊಂಡು ಖಾಲಿ ತರಕಾರಿ ಬುಟ್ಟಿಗಳನ್ನು ಇತರರ ಮೇಲೆ ಎಸೆಯುವುದನ್ನು ನೋಡಬಹುದು. ಪೊಲೀಸರು ಮಾರುಕಟ್ಟೆಗೆ ಆಗಮಿಸಿ ಮಧ್ಯ ಪ್ರವೇಶಿಸಿದ ಬಳಿಕವೇ ಪರಿಸ್ಥಿತಿ ಹತೋಟಿಗೆ ತರಲಾಯಿತು.

ಒಬ್ಬ ವ್ಯಕ್ತಿಯು ಖಾಲಿ ತರಕಾರಿ ಬುಟ್ಟಿಯನ್ನು ಇನ್ನೊಬ್ಬರ ಮೇಲೆ ಎಸೆಯುವ ಮೂಲಕ ಈ ವಿಡಿಯೋ ಪ್ರಾರಂಭವಾಗುತ್ತದೆ. ಹಿನ್ನಲೆಯಲ್ಲಿಯೂ ಒಬ್ಬ ವ್ಯಕ್ತಿಯು ಉದ್ದನೆಯ ರಾಡ್‌ನಿಂದ ಇತರರನ್ನು ಹೊಡೆಯುವುದನ್ನು ನಾವು ನೋಡಬಹುದು.

ಸ್ವಲ್ಪ ಸಮಯದ ನಂತರ, 4-5 ಜನರು ತಂಡವನ್ನು ರಚಿಸುತ್ತಾರೆ ಮತ್ತು ಒಬ್ಬ ವ್ಯಕ್ತಿಯು ಇನ್ನೊಬ್ಬನನ್ನು ಒದೆಯುತ್ತಾನೆ. ಕೊನೆಯಲ್ಲಿ, ಒಬ್ಬ ಪೋಲೀಸ್ ಅಧಿಕಾರಿ ಮಧ್ಯಪ್ರವೇಶಿಸುತ್ತಾರೆ. ಈ ವಿಡಿಯೋ 1.7 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಗಳಿಸಿದ್ದು, ಥರಹೇವಾರಿ ಕಮೆಂಟ್​ ಬರುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...