alex Certify BIG NEWS: ‘ಕ್ಯಾನ್ಸರ್’ ಗುಣಪಡಿಸುವಲ್ಲಿ ಮತ್ತೊಂದು ಮಹತ್ವದ ಸಂಶೋಧನೆ; ಕಂಪಿಸುವ ಅಣುಗಳಿಂದ ಶೇ.99 ರಷ್ಟು ಕ್ಯಾನ್ಸರ್ ಕೋಶ ನಾಶ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ‘ಕ್ಯಾನ್ಸರ್’ ಗುಣಪಡಿಸುವಲ್ಲಿ ಮತ್ತೊಂದು ಮಹತ್ವದ ಸಂಶೋಧನೆ; ಕಂಪಿಸುವ ಅಣುಗಳಿಂದ ಶೇ.99 ರಷ್ಟು ಕ್ಯಾನ್ಸರ್ ಕೋಶ ನಾಶ !

ಕ್ಯಾನ್ಸರ್ ರೋಗದ ಪತ್ತೆ ಮತ್ತು ಗುಣಪಡಿಸುವಿಕೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಗಳು ಜರುಗುತ್ತಲೇ ಇರುತ್ತವೆ. ಇದಕ್ಕಾಗಿ ವೈದ್ಯಕೀಯ ಕ್ಷೇತ್ರದ ವಿಜ್ಞಾನಿಗಳು ಮತ್ತು ಸಂಶೋಧಕರು ಕ್ಯಾನ್ಸರ್‌ನ ಮಾರಣಾಂತಿಕ ಕಾಯಿಲೆಗೆ ಚಿಕಿತ್ಸೆ ಅಭಿವೃದ್ಧಿಪಡಿಸಲು ಅಧ್ಯಯನದಲ್ಲಿ ತೊಡಗಿಕೊಂಡಿರುತ್ತಾರೆ. ಇದೀಗ ರೈಸ್ ವಿಶ್ವವಿದ್ಯಾನಿಲಯ, ಟೆಕ್ಸಾಸ್ ಎ & ಎಂ ವಿಶ್ವವಿದ್ಯಾನಿಲಯ ಮತ್ತು ಟೆಕ್ಸಾಸ್ ವಿಶ್ವವಿದ್ಯಾನಿಲಯ ಸಹಯೋಗದ ತಜ್ಞರನ್ನು ಒಳಗೊಂಡಿರುವ ಸಂಶೋಧನಾ ತಂಡವು ಒಂದು ಅದ್ಭುತವಾದ ಆವಿಷ್ಕಾರವನ್ನು ಮಾಡಿದೆ. ಬೆಳಕಿನ ಪ್ರಚೋದನೆಗೆ ಒಡ್ಡಿಕೊಂಡಾಗ ತೀವ್ರವಾದ ಕಂಪನಗಳನ್ನು ಪ್ರದರ್ಶಿಸಲು ಕೆಲವು ಅಣುಗಳ ವಿಶಿಷ್ಟ ಗುಣಗಳನ್ನು ಬಳಸಿಕೊಳ್ಳುವ ಮೂಲಕ ಕ್ಯಾನ್ಸರ್ ಕೋಶಗಳನ್ನು ನಿರ್ಮೂಲನೆ ಮಾಡುವ ವಿಧಾನವನ್ನು ಅವರು ಗುರುತಿಸಿದ್ದಾರೆ.

ವರದಿ ಬಿಡುಗಡೆಯ ಪ್ರಕಾರ, ವೈದ್ಯಕೀಯ ಸಂಶೋಧನೆಯಲ್ಲಿ ಬಳಸಲಾಗುವ ಪ್ಲಾಸ್ಮನ್ ಎಂದು ಕರೆಯಲ್ಪಡುವ ಸಣ್ಣ ಡೈ ಅಣುವಿನ ಪರಮಾಣುಗಳು ಏಕರೂಪದಲ್ಲಿ ಕಂಪಿಸುತ್ತವೆ, ಇದು ನಿಯರ್ ಇನ್ ಫ್ರಾರೆಡ್ ಬೆಳಕಿನಿಂದ ಪ್ರಚೋದಿಸಿದಾಗ ಕ್ಯಾನ್ಸರ್ ಕೋಶಗಳ ಜೀವಕೋಶ ಪೊರೆಯು ಛಿದ್ರವಾಗುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ನೇಚರ್ ಕೆಮಿಸ್ಟ್ರಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಈ ವಿಧಾನವು ಮಾನವನ ಮೆಲನೋಮ ಕೋಶಗಳ ಲ್ಯಾಬ್ ಕಲ್ಚರ್ ವಿರುದ್ಧ 99 ಪ್ರತಿಶತ ದಕ್ಷತೆಯನ್ನು ಹೊಂದಿದೆ ಮತ್ತು ಮೆಲನೋಮ ಗೆಡ್ಡೆಗಳನ್ನು ಹೊಂದಿರುವ ಅರ್ಧದಷ್ಟು ಕೋಶಗಳು ಚಿಕಿತ್ಸೆಯ ನಂತರ ಕ್ಯಾನ್ಸರ್-ಮುಕ್ತವಾಗಿವೆ.

ನಿಯರ್ ಇನ್ ಫ್ರಾರೆಡ್ ಬೆಳಕು ಗೋಚರ ಬೆಳಕಿಗಿಂತ ದೇಹಕ್ಕೆ ತುಂಬಾ ಆಳವಾಗಿ ತೂರಿಕೊಳ್ಳಬಹುದು, ಅಂಗಾಂಶಗಳಿಗೆ ಹಾನಿಯಾಗದಂತೆ ಅಂಗಗಳು ಅಥವಾ ಮೂಳೆಗಳನ್ನು ಪ್ರವೇಶಿಸಬಹುದು.

ನಿಯರ್ ಇನ್ ಫ್ರಾರೆಡ್ ಬೆಳಕು ಮಾನವ ದೇಹಕ್ಕೆ 10 ಸೆಂಟಿಮೀಟರ್‌ಗಳಷ್ಟು ಆಳವಾಗಿ ಹೋಗಬಹುದು, ನ್ಯಾನೊಡ್ರಿಲ್‌ಗಳನ್ನು ಸಕ್ರಿಯಗೊಳಿಸಲು ಬಳಸುವ ಗೋಚರ ಬೆಳಕಿಗಿಂತ ಇದು ಹೆಚ್ಚು ಉತ್ತಮ ಫಲಿತಾಂಶ ನೀಡುತ್ತದೆ. ಇದೊಂದು ದೊಡ್ಡ ಮುನ್ನಡೆ ಎಂದು ತಜ್ಞರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...