alex Certify ಸೀಫುಡ್‌ ಸೇವನೆಗೂ ಮುನ್ನ ನಿಮಗಿದು ತಿಳಿದಿರಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೀಫುಡ್‌ ಸೇವನೆಗೂ ಮುನ್ನ ನಿಮಗಿದು ತಿಳಿದಿರಲಿ

ಸೀಫುಡ್‌ ಇಷ್ಟಪಡುವ ಅನೇಕರಿದ್ದಾರೆ. ಬಗೆಬಗೆಯ ಮೀನುಗಳು ಸೇರಿದಂತೆ ಅನೇಕ ರೀತಿಯ ಸಮುದ್ರಾಹಾರಗಳು ಸಾಕಷ್ಟು ಜನಪ್ರಿಯವಾಗಿವೆ. ಆದರೆ ಇತ್ತೀಚಿನ ಅಧ್ಯಯನದ ಪ್ರಕಾರ  ಸಮುದ್ರಾಹಾರದ ನಿಯಮಿತ ಸೇವನೆ ಹಾನಿಕಾರಕ. ಬ್ರಿಟನ್‌ನ ಡಾರ್ಟ್‌ಮೌತ್ ಕಾಲೇಜಿನ ವಿಜ್ಞಾನಿಗಳ ಪ್ರಕಾರ ಸಮುದ್ರಾಹಾರವನ್ನು ಆಗಾಗ್ಗೆ ಸೇವಿಸುವುದರಿಂದ ನೀವು ‘ಫಾರ್‌ಎವರ್‌ ಕೆಮಿಕಲ್ಸ್‌’ ಅಥವಾ PFAS ಸಂಪರ್ಕಕ್ಕೆ ಬರಬಹುದು.

ಸಮುದ್ರಾಹಾರದಲ್ಲಿ ಪಾದರಸ ಮತ್ತು ಇತರ ಮಾಲಿನ್ಯಕಾರಕಗಳ ಬಳಕೆಗೆ ಮಿತಿ ಹೇರಲಾಗಿದೆ. ಆದರೆ ‘ಫಾರ್‌ಎವರ್‌ ಕೆಮಿಕಲ್‌’ಗಳಿಗೆ ಇನ್ನೂ ಯಾವುದೇ ಮಾರ್ಗಸೂಚಿಗಳಿಲ್ಲ. ಹಾಗಂತ ಸಮುದ್ರಾಹಾರವನ್ನು ತಿನ್ನುವುದನ್ನು ನಿಲ್ಲಿಸಬಾರದು. ಏಕೆಂದರೆ ಇದು  ಪ್ರೋಟೀನ್ ಮತ್ತು ಒಮೆಗಾ ಕೊಬ್ಬಿನಾಮ್ಲಗಳ ಉತ್ತಮ ಮೂಲವಾಗಿದೆ.

ಕಾಡ್, ಹ್ಯಾಡಾಕ್, ನಳ್ಳಿ, ಸಾಲ್ಮನ್, ಸ್ಕಲ್ಲಪ್, ಸೀಗಡಿ ಮತ್ತು ಟ್ಯೂನ ಮೀನುಗಳಂತಹ ಜನಪ್ರಿಯ ಸಮುದ್ರಾಹಾರದಲ್ಲಿ 26 ವಿವಿಧ ರೀತಿಯ PFAS ಅನ್ನು ಅಧ್ಯಯನವು ವಿಶ್ಲೇಷಿಸಿದೆ. ಸೀಗಡಿ ಮತ್ತು ನಳ್ಳಿ PFAS ನ ಹೆಚ್ಚಿನ ಸಾಂದ್ರತೆಯನ್ನು ಹೊಂದಿವೆ. ಕೆಲವು ಪಿಎಫ್‌ಎಎಸ್ ರಾಸಾಯನಿಕಗಳು ಸೀಗಡಿ ಮತ್ತು ನಳ್ಳಿ ಮಾಂಸದಲ್ಲಿ ಕ್ರಮವಾಗಿ ಪ್ರತಿ ಗ್ರಾಂಗೆ 1.74 ಮತ್ತು 3.30 ನ್ಯಾನೊಗ್ರಾಂಗಳಷ್ಟು ಸರಾಸರಿ ಸಾಂದ್ರತೆಗಳಲ್ಲಿ ಇರುತ್ತವೆ . ಈ ಸಂಯುಕ್ತಗಳು ನಿಧಾನವಾಗಿ ವಿಭಜನೆಯಾಗುತ್ತವೆ. ಮಾನವನ ಆರೋಗ್ಯ ಮತ್ತು ಪರಿಸರ ಎರಡಕ್ಕೂ ಗಂಭೀರ ಅಪಾಯವನ್ನುಂಟುಮಾಡುತ್ತವೆ.

ಸಮುದ್ರಾಹಾರ ಸೇವನೆಯ ಅನಾನುಕೂಲಗಳು

ಗರ್ಭಿಣಿಯರು ಮತ್ತು ಮಕ್ಕಳು ಸಮುದ್ರಾಹಾರ ಸೇವನೆ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕು. ಕ್ಯಾನ್ಸರ್, ಭ್ರೂಣದ ಅಸಹಜತೆ, ಅಧಿಕ ಕೊಲೆಸ್ಟ್ರಾಲ್, ಥೈರಾಯ್ಡ್, ಯಕೃತ್ತು ಮತ್ತು ಸಂತಾನೋತ್ಪತ್ತಿ ಅಸ್ವಸ್ಥತೆಗಳು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ PFAS ಕಾರಣವಾಗಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...