alex Certify ದಶಕದಲ್ಲೇ ಅತ್ಯಂತ ಕಡಿಮೆ ಮಾರಾಟ ಕಂಡ ಆಟೋಮೊಬೈಲ್ ಮಾರುಕಟ್ಟೆ; ಇದರ ಹಿಂದಿದೆ ಈ ಎಲ್ಲ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಶಕದಲ್ಲೇ ಅತ್ಯಂತ ಕಡಿಮೆ ಮಾರಾಟ ಕಂಡ ಆಟೋಮೊಬೈಲ್ ಮಾರುಕಟ್ಟೆ; ಇದರ ಹಿಂದಿದೆ ಈ ಎಲ್ಲ ಕಾರಣ

ಪಾರ್ಶ್ವವಾಹಕಗಳ (ಸೆಮಿಕಂಡಕ್ಟರ್‌) ಕೊರತೆಯಿಂದಾಗಿ, ಅಕ್ಟೋಬರ್‌ 2021ರಲ್ಲಿ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಮಾರಾಟದ ಅಂಕಿಅಂಶಗಳು ಮಂಕಾಗಿವೆ ಎಂದು ಆಟೋಮೊಬೈಲ್ ಡೀಲರ್‌ಗಳ ಸಂಘಟನೆಗಳ ಪ್ರತಿಷ್ಠಾನ (ಫಾಡಾ) ತಿಳಿಸಿದೆ.

ಕಳೆದ ತಿಂಗಳು ದೇಶಾದ್ಯಂತ ಮಾರಾಟವಾದ ವಾಹನಗಳ ಸಂಖ್ಯೆ 13,64,526 ಇದ್ದು, ಇದು 2020 ಅಕ್ಟೋಬರ್‌ ತಿಂಗಳಿಗೆ ಹೋಲಿಸಿದಲ್ಲಿ 5.33%ರಷ್ಟು ಕಡಿಮೆಯಾಗಿದೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಒಟ್ಟಾರೆ 14,41,299 ವಾಹನಗಳು ಮಾರಾಟವಾಗಿದ್ದವು. ಅಕ್ಟೋಬರ್‌ 2019ಕ್ಕೆ ಹೋಲಿಕೆ ಮಾಡಿದಲ್ಲಿ ವಾಹನಗಳ ಮಾರಾಟದಲ್ಲಿ 26.64%ದಷ್ಟು ಇಳಿಕೆ ಕಂಡು ಬಂದಿದೆ.

‘ಮನಿಕೆ ಮಗೆ ಹಿತೆ’ ಗೆ ನೃತ್ಯ ಮಾಡಿದ ಬೆಂಗಾಲಿ ನಟಿ ಶ್ರೀಲೇಖಾ ಮಿತ್ರಾ: ವಿಡಿಯೋ ವೈರಲ್

ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದರೂ ಸಹ ಅದಕ್ಕೆ ತಕ್ಕಂತೆ ಪೂರೈಕೆ ಇಲ್ಲ ಎಂದು ತಿಳಿಸಿದ ಫಾಡಾ, ಆಟೋಮೊಬೈಲ್ ಉತ್ಪಾದಕರು ಈಗಲೂ ಪೂರೈಕೆಯನ್ನು ಚೇತರಿಸಿಕೊಂಡಲ್ಲಿ, ಮಾರಾಟದ ವಿಚಾರದಲ್ಲಿ ಈಗಲೂ ಸಹ ಈ ವರ್ಷ ಉತ್ತಮವಿರಲಿದೆ.

ಎಸ್‌ಯುವಿ, ಕಾಂಪಾಕ್ಟ್‌ ಎಸ್‌ಯುವಿ ಹಾಗೂ ಲಕ್ಸುರಿ ವರ್ಗಗಳ ವಾಹನಗಳ ಪೂರೈಕೆಯಲ್ಲಿ ಭಾರೀ ಕೊರತೆ ಇದೆ.

ಫಾಡಾ ಪ್ರಕಾರ ದ್ವಿಚಕ್ರ ವಾಹನಗಳ ಮಾರಾಟ ಸಹ ಬಹಳ ನೀರಸವಾಗಿವೆ. ಅದರಲ್ಲೂ ಎಂಟ್ರಿ ಮಟ್ಟದ ವಾಹನಗಳ ಮಾರಾಟಕ್ಕೆ ಪೆಟ್ಟು ಬಿದ್ದಿದೆ. ವಾಹನಗಳ ಬೆಲೆಗಳಲ್ಲಿ ಏರಿಕೆ ಕಂಡು ಬಂದ ಕಾರಣ ಬೇಡಿಕೆ ತಗ್ಗಿರುವ ಸಾಧ್ಯತೆ ಇದೆ. ಪೆಟ್ರೋಲ್ ಬೆಲೆ 100ರೂ/ಲೀಟರ್‌‌‌ ಮೀರಿರುವ ಕಾರಣದಿಂದಲೂ ಸಹ ಜನರು ಹೊಸ ವಾಹನಗಳ ಖರೀದಿಗೆ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ.

ಈ ರಾಶಿಯಲ್ಲಿ ಜನಿಸಿದ ಸ್ತ್ರೀಯರಿಗೆ ಇಂದು ಕಾದಿದೆ ಕಾರ್ಯಕ್ಷೇತ್ರದಲ್ಲಿ ಗೆಲುವು….!

2021ರ ಅಕ್ಟೋಬರ್‌ನಲ್ಲಿ ವಾಹನಗಳ ಮಾರಾಟದ ಸಂಖ್ಯೆಯಲ್ಲಿ 6.07%ನಷ್ಟು ಇಳಿಕೆ ಕಂಡು ಬಂದಿದ್ದು, 9,96,024 ಘಟಕಗಳು ಮಾರಾಟ ಕಂಡಿವೆ. 2020ರ ಅಕ್ಟೋಬರ್‌ನಲ್ಲಿ 10,60,337 ದ್ವಿಚಕ್ರ ವಾಹನಗಳು ಮಾರಾಟವಾಗಿದ್ದವು. ಮತ್ತೊಂದೆಡೆ, ಅಕ್ಟೋಬರ್‌ 2019ಗೆ ಹೋಲಿಸಿದಲ್ಲಿ ದ್ವಿಚಕ್ರ ವಾಹನಗಳ ಮಾರಾಟದಲ್ಲಿ 30.04%ದಷ್ಟು ಇಳಿಕೆ ಕಂಡು ಬಂದಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...