alex Certify ಎಣ್ಣೆಯುಕ್ತ ಚರ್ಮದ ಕಾಂತಿ ಹೆಚ್ಚಿಸಲು ಬಳಸಿ ಈ ಸ್ಕ್ರಬ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಣ್ಣೆಯುಕ್ತ ಚರ್ಮದ ಕಾಂತಿ ಹೆಚ್ಚಿಸಲು ಬಳಸಿ ಈ ಸ್ಕ್ರಬ್

ಎಣ್ಣೆಯುಕ್ತ ಚರ್ಮದವರಿಗೆ ಸ್ಕಿನ್ ಸಮಸ್ಯೆ ಚೆನ್ನಾಗಿ ಕಂಡು ಬರುತ್ತದೆ. ಮೊಡವೆ, ಗುಳ್ಳೆಗಳು ಚೆನ್ನಾಗಿ ಮೂಡುತ್ತವೆ. ಎಣ್ಣೆಯುಕ್ತ ಚರ್ಮದಲ್ಲಿ ಸತ್ತ ಜೀವಕೋಶಗಳು ನಿವಾರಣೆಯಾಗದೇ ಚರ್ಮದ ಬಣ್ಣ ಕಾಂತಿ ಹೀನವಾಗಿರುತ್ತದೆ. ಹಾಗಾಗಿ ಈ ಎಣ್ಣೆಯುಕ್ತ ಚರ್ಮದ ಎಣ್ಣೆಯಂಶವನ್ನು ನಿವಾರಿಸಿ ಸತ್ತ ಜೀವಕೋಶಗಳನ್ನು ತೊಲಗಿಸಿ ಚರ್ಮದ ಕಾಂತಿ ಹೆಚ್ಚಿಸಲು ಈ ಸ್ಕ್ರಬ್ ಗಳನ್ನು ಬಳಸಿ.

*ನಿಂಬೆ ರಸ ಚರ್ಮ ಹೆಚ್ಚುವರಿ ಎಣ್ಣೆ ಉತ್ಪಾದನೆ ಮಾಡುವುದನ್ನು ತಡೆಯುತ್ತದೆ. ಉಪ್ಪು ಚರ್ಮದಲ್ಲಿ ಸೇರಿಕೊಂಡಿರುವ ಬ್ಯಾಕ್ಟೀರಿಯಾಗಳನ್ನು ನಿವಾರಿಸಿ ಚರ್ಮದ ಆರೋಗ್ಯ ಕಾಪಾಡುತ್ತದೆ. ಹಾಗಾಗಿ 1 ಚಮಚ ನಿಂಬೆ ರಸಕ್ಕೆ 1 ಚಮಚ ಉಪ್ಪನ್ನು ಮಿಕ್ಸ್ ಮಾಡಿ ಮುಖಕ್ಕೆ 10 ನಿಮಿಷ ಸ್ಕ್ರಬ್ ಮಾಡಿ. ಬಳಿಕ ತಣ್ಣೀರಿನಿಂದ ವಾಶ್ ಮಾಡಿ. ಇದರಿಂದ ಸತ್ತ ಜೀವಕೋಶಗಳು ನಿವಾರಣೆಯಾಗುತ್ತದೆ.

*ಚರ್ಮದ ಮೇಲೆ ಅತಿಯಾದ ಎಣ್ಣೆಯನ್ನು ಕಡಿಮೆ ಮಾಡಲು ಜೇನುತುಪ್ಪ ಬಹಳ ಸಹಕಾರಿ. ಜೇನುತುಪ್ಪ ನಂಜುನಿವಾರಕ ಮತ್ತು ಮೊಡವೆಗಳನ್ನು ನಿವಾರಿಸುತ್ತದೆ. ಬಾದಾಮಿ ಚರ್ಮದ ಕಾಂತಿಯನ್ನು ಹೆಚ್ಚಿಸಲು ಸಹಕಾರಿ. ಹಾಗಾಗಿ ಬಾದಾಮಿ ಪುಡಿಗೆ 2 ಚಮಚ ಜೇನುತುಪ್ಪ ಮಿಕ್ಸ್ ಮಾಡಿ ಚರ್ಮಕ್ಕೆ ಸ್ಕ್ರಬ್ ಮಾಡಿ, ಇದರಿಂದ ಚರ್ಮ ಸ್ವಚ್ಛವಾಗಿ ಕಾಂತಿಯುತವಾಗಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...