alex Certify ರುಚಿಯಾದ ‘ಚಿಯಾ ಸೀಡ್ಸ್ ಪುಡ್ಡಿಂಗ್’ ಮಾಡಿ ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರುಚಿಯಾದ ‘ಚಿಯಾ ಸೀಡ್ಸ್ ಪುಡ್ಡಿಂಗ್’ ಮಾಡಿ ನೋಡಿ

ಐಸ್ ಕ್ರೀಮ್/ಸಿಹಿ ಖಾದ್ಯಗಳನ್ನು ತಿನ್ಬೇಕು ಅನಿಸುತ್ತದೆ. ಆದರೆ ಹೆಚ್ಚುತ್ತಿರುವ ತೂಕದಿಂದ ಹಿಂದೇಟು ಹಾಕುತ್ತೇವೆ. ಹಾಗಾಗಿ ಆರೋಗ್ಯಕರವಾದ ತಿನಿಸುಗಳನ್ನು ಮಾಡಿಕೊಂಡು ಸಿಹಿ ತಿನ್ನಬೇಕು ಎಂಬ ಆಸೆಯನ್ನು ಈರಡೇರಿಸಿಕೊಳ್ಳಬಹುದು. ಇಲ್ಲಿದೆ ನೋಡಿ ಚಿಯಾ ಸೀಡ್ಸ್ ಪುಡ್ಡಿಂಗ್. ಇದು ತಿನ್ನುವುದಕ್ಕೂ ಚೆನ್ನಾಗಿರುತ್ತದೆ. ಆರೋಗ್ಯಕ್ಕೂ ಒಳ್ಳೆಯದು.

ಬೇಕಾಗುವ ಸಾಮಗ್ರಿಗಳು:

1 ಕಪ್-ತೆಂಗಿನಕಾಯಿ ಹಾಲು, ¼ ಕಪ್- ಚಿಯಾ ಸೀಡ್ಸ್, 1 ಟೀ ಸ್ಪೂನ್- ವೆನಿಲ್ಲಾ ಎಸೆನ್ಸ್, ½ ಟೀ ಸ್ಪೂನ್-ಬಾದಾಮಿ ಎಕ್ಸ್ರಟಾಕ್ಟ್, 1-2 ಟೇಬಲ್ ಸ್ಪೂನ್- ಜೇನು ತುಪ್ಪ.

ಮಾಡುವ ವಿಧಾನ:

ತೆಂಗಿನಕಾಯಿ ಹಾಲನ್ನು ಒಂದು ಬೌಲ್ ಗೆ ಹಾಕಿಕೊಳ್ಳಿ. ಇದಕ್ಕೆ ಚಿಯಾ ಸೀಡ್ಸ್ ಕೂಡ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದಕ್ಕೆ ವೆನಿಲ್ಲಾ ಎಕ್ಸ್ರಟಾಕ್ಟ್, ಜೇನುತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದನ್ನು ಒಂದು ಗಾಳಿಯಾಡದ ಗ್ಲಾಸಿನ ಜಾರಿನೊಳಗೆ ಹಾಕಿ 5 ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿಡಿ. ಸರ್ವ್ ಮಾಡುವಾಗ ಇದರ ಮೇಲೆ ನಿಮಗಿಷ್ಟವಾದ ಡ್ರೈಫ್ರೂಟ್ಸ್ ಹಾಕಿದರೆ ರುಚಿಯಾದ ಚಿಯಾ ಸೀಡ್ಸ್ ಪುಡ್ಡಿಂಗ್ ರೆಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...