alex Certify ಚಿಪ್ಸ್‌ ಪೊಟ್ಟಣದಲ್ಲಿ ಉಗುಳಿ ಶೆಲ್ಫ್‌ನಲ್ಲಿಟ್ಟ ಮಹಿಳೆ; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿಪ್ಸ್‌ ಪೊಟ್ಟಣದಲ್ಲಿ ಉಗುಳಿ ಶೆಲ್ಫ್‌ನಲ್ಲಿಟ್ಟ ಮಹಿಳೆ; ವಿಡಿಯೋ ವೈರಲ್

ಸಣ್ಣತನದ ಪರಮಾವಧಿಯ ನಿದರ್ಶನವೊಂದರಲ್ಲಿ ಅಮೆರಿಕದ ಮಹಿಳೆಯೊಬ್ಬರು ಗ್ರಾಸರಿ ಸ್ಟೋರ್‌ನಲ್ಲಿದ್ದ ಚಿಪ್ಸ್‌ ಪ್ಯಾಕ್ ಒಂದರ ಒಳಗೆ ಉಗುಳುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ಇಲ್ಲಿನ ನ್ಯಾಶ್‌ವಿಲ್ಲೆಯ ದಿನಸಿ ಅಂಗಡಿಯೊಂದರಲ್ಲಿ ಹೀಗೆ ಮಾಡಿದ ಈಕೆಯನ್ನು ಮೇಕಪ್ ಕಲಾವಿದೆ ಲಿಬ್ಬಿ ಬಾರ್ನೆಸ್ ಎಂದು ಗುರುತಿಸಲಾಗಿದ್ದು, ಈಕೆ ಸಂಗೀತಗಾರ ಹಂಟರ್‌ ಹೇಯ್ಸ್‌ರ ಮಾಜಿ ಪ್ರೇಯಸಿಯಾಗಿದ್ದಾರೆ.

ಹಾವುಗಳನ್ನು ಓಡಿಸಲು ಹೋಗಿ ಕೋಟ್ಯಾಂತರ ರೂ. ಮೌಲ್ಯದ ಮನೆಗೆ ಬೆಂಕಿ ಇಟ್ಟ ಭೂಪ…!

ಆಲೂಗಡ್ಡೆ ಚಿಪ್ಸ್ ಪೊಟ್ಟಣದೊಳಗೆ ಉಗುಳುತ್ತಿರುವ ತನ್ನದೇ ವಿಡಿಯೋವನ್ನು ಶೂಟ್ ಮಾಡಿಕೊಂಡ ಲಿಬ್ಬಿ, ಖುದ್ದು ತಾನೇ ಅದನ್ನು ಯೂಟ್ಯೂಬ್‌ನಲ್ಲಿ ಶೇರ್‌ ಮಾಡಿದ್ದಾರೆ. ಪೊಟ್ಟಣದಲ್ಲಿದ್ದ ಚಿಪ್ಸ್‌ ಅನ್ನು ಸ್ವಲ್ಪವೇ ತಿಂದು ನೋಡಿದ ಲಿಬ್ಬಿ, ಬಳಿಕ ಅದನ್ನು ಪೋರ್ಟಬಲ್ ಐರನ್‌ ಬಳಸಿ ಮತ್ತೆ ಸೀಲ್ ಮಾಡಲು ಯತ್ನಿಸಿದ್ದಾರೆ. ಈ ವಿಡಿಯೋವನ್ನು ಆಕೆ ತಕ್ಷಣವೇ ಡಿಲೀಟ್ ಮಾಡಿದರೂ ಸಹ ಅಂತರ್ಜಾಲದಲ್ಲಿ ಅದು ಇನ್ನೂ ಹಾಗೇ ಇದೆ.

ಇದರೊಂದಿಗೆ ಅಲ್ಲಿಯೇ ಇದ್ದ ನೀರಿನ ಬಾಟಲಿಯೊಂದನ್ನು ಸಿಪ್ ಮಾಡಿ ಅದನ್ನು ಮತ್ತೆ ಅಲ್ಲಿಯೇ ಇಟ್ಟಿದ್ದಾರೆ. ಆಕೆಯ ಈ ವರ್ತನೆಗೆ ಸಾಮಾಜಿಕ ಜಾಲತಾಣದ ಬಳಕೆದಾರರು ಭಾರೀ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಡಿಯೋ ವೈರಲ್ ಆಗುತ್ತಲೇ ಆಂತರಿಕ ತನಿಖೆ ನಡೆಸಿದ್ದಾಗಿ ತಿಳಿಸಿದ ಸ್ಟೋರ್‌, ಆಕೆ ಬಳಸಿ ಬಿಸಾಡಿದ ಪೊಟ್ಟಣಗಳನ್ನು ಪತ್ತೆ ಮಾಡಿ ಆಕೆಗೇ ಮಾರಲಾಗಿದೆ ಎಂದು ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...