alex Certify BIG NEWS: ಸೈನಿಕನಿಗೆ ಕ್ರೀಡಾಜ್ಯೋತಿ ಗೌರವ; ಚೀನಾಗೆ ಛೀಮಾರಿ ಹಾಕಿ, ಭಾರತಕ್ಕೆ ಬೆಂಬಲ ಸೂಚಿಸಿದ ಅಮೆರಿಕಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸೈನಿಕನಿಗೆ ಕ್ರೀಡಾಜ್ಯೋತಿ ಗೌರವ; ಚೀನಾಗೆ ಛೀಮಾರಿ ಹಾಕಿ, ಭಾರತಕ್ಕೆ ಬೆಂಬಲ ಸೂಚಿಸಿದ ಅಮೆರಿಕಾ

ಬೀಜಿಂಗ್‌ನಲ್ಲಿ ಬುಧವಾರ ನಡೆದ ಚಳಿಗಾಲದ ಒಲಿಂಪಿಕ್ ಕ್ರೀಡಾ ಜ್ಯೋತಿಯನ್ನು ಕೊಂಡೊಯ್ಯುವ ಗೌರವವನ್ನು ಗಲ್ವಾನ್ ಘರ್ಷಣೆಯಲ್ಲಿ ಗಾಯಗೊಂಡ ಸೈನಿಕನಿಗೆ ನೀಡಲಾಗಿದೆ. ಇದು ನಾಚಿಕೆಗೇಡಿನ ಸಂಗತಿ ಎಂದು ಅಮೆರಿಕ ಖಂಡಿಸಿದೆ.

ಶುಕ್ರವಾರ ಸುದ್ದಿಗಾರೊಂದಿಗೆ ಮಾತನಾಡಿದ ಯುಎಸ್ ಸ್ಟೇಟ್ಸ್ ವಕ್ತಾರ ನೆಡ್ ಪ್ರೈಸ್, ಭಾರತ ನಮ್ಮ ಮಿತ್ರ ರಾಷ್ಟ್ರ. ಈ ಹಿಂದೆಯೂ ನಮ್ಮ ಮಿತ್ರ ರಾಷ್ಟ್ರಗಳ ನಿರ್ಧಾರಕ್ಕೆ, ಅವರ ಸಾರ್ವಭೌಮತ್ವಕ್ಕೆ ಗೌರವ ನೀಡಿದಂತೆ, ಈ ಬಾರಿಯೂ ನೀಡುತ್ತಿದ್ದೇವೆ. ಚೀನಾ ತನ್ನ ಅಕ್ಕಪಕ್ಕದ ರಾಷ್ಟ್ರಗಳೊಂದಿಗೆ ಹೇಗೆ ನಡೆದುಕೊಳ್ಳುತ್ತಿದೆ ಎಂಬುದನ್ನ ಗಮನಿಸುತ್ತಿದ್ದೇವೆ ಎಂದಿದ್ದಾರೆ.

ಭಾರತ-ಚೀನಾ ಗಡಿ ಪರಿಸ್ಥಿತಿಯ ವಿಷಯಕ್ಕೆ ಬಂದಾಗ, ನಾವು ನೇರ ಮಾತುಕತೆ ಮತ್ತು ಗಡಿ ವಿವಾದಗಳ ಶಾಂತಿಯುತ ಪರಿಹಾರವನ್ನು ಬೆಂಬಲಿಸುವುದನ್ನು ಮುಂದುವರಿಸುತ್ತೇವೆ ಎಂದು ನೆಡ್ ಪ್ರೈಸ್ ಹೇಳಿದ್ದಾರೆ.

ಕಳ್ಳತನ ಮಾಡೋಕೆ ಬಂದವನು ದೇವರ ದರ್ಶನವಾಗುತ್ತಿದ್ದಂತೆ ಕೈ ಮುಗಿದು ವಾಪಾಸ್….!

ಜೂನ್ 2020 ರಲ್ಲಿ ಅತಿಕ್ರಮಣಕ್ಕೆ ಸಂಚು ರೂಪಿಸುತ್ತಿದ್ದ ಪಿಎಲ್‌ಎಯನ್ನು ಹಿಮ್ಮೆಟ್ಟಿಸಲು ಭಾರತೀಯ ಭದ್ರತಾ ಸಿಬ್ಬಂದಿ ಪ್ರತಿದಾಳಿ ನಡೆಸಿದಾಗ ಅದರಲ್ಲಿ ಗಂಭೀರವಾಗಿ ಗಾಯಗೊಂಡ ಸೈನಿಕರಲ್ಲಿ ಒಬ್ಬರಾದ, ಕ್ವಿ ಫಾಬಾವೊ ಅವರಿಗೆ ವಿಂಟರ್ ಒಲಿಂಪಿಕ್ಸ್ನ ಕ್ರೀಡಾಜ್ಯೋತಿ ಗೌರವ ನೀಡಿರುವ ಚೀನಾ, ಈ ಮೂಲಕ ಭಾರತವನ್ನ ಮತ್ತೆ ಕೆಣಕುತ್ತಿದೆ. ಇದೇ ಕಾರಣಕ್ಕೆ ಭಾರತ ವಿಂಟರ್ ಒಲಂಪಿಕ್ಸ್ ಗೆ ರಾಜತಾಂತ್ರಿಕ ಬಹಿಷ್ಕಾರ ಏರಿದೆ.

ಅಮೆರಿಕ ಈಗಾಗಲೇ ಚೀನಾ ವಿಂಟರ್ ಒಲಿಂಪಿಕ್ಸ್​ಗೆ ರಾಜತಾಂತ್ರಿಕ ಬಹಿಷ್ಕಾರ ಘೋಷಿಸಿದೆ. ಇನ್ನು ಒಲಿಂಪಿಕ್ಸ್​ನಲ್ಲಿ ಕ್ರೀಡಾಜ್ಯೋತಿ ಹೊತ್ತೊಯ್ಯಲು ಗಲ್ವಾನ್ ಸಂಘರ್ಷದಲ್ಲಿ ಪಾಲ್ಗೊಂಡಿದ್ದ ಕಮಾಂಡರ್​​ನನ್ನು ಆಯ್ಕೆ ಮಾಡಿದ್ದನ್ನು ಯುಎಸ್​ನ ಜನಪ್ರತಿನಿಧಿ, ರಿಪಬ್ಲಿಕನ್ ಪಕ್ಷದ ಸೆನೆಟರ್ ಜಿಮ್ ರಿಶ್ ಖಂಡಿಸಿದ್ದಾರೆ.

ಹಾಗೇ, ಚೀನಾವನ್ನು ಟೀಕಿಸಿ, ಇಂಥ ನಿರ್ಧಾರ ಕೈಗೊಳ್ಳುವುದು ನಿಜಕ್ಕೂ ನಾಚಿಕೆಗೇಡು. ಯುಎಸ್, ಭಾರತದ ಸಾರ್ವಭೌಮತ್ವವನ್ನು ಸದಾ ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...