alex Certify ಕಳವು ಮಾಡಲಾಗಿದ್ದ ಪುರಾತನ ಹಿಂದೂ ಕಲಾಕೃತಿಗಳನ್ನ ಹಿಂದಿರುಗಿಸಿದ ಅಮೆರಿಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಳವು ಮಾಡಲಾಗಿದ್ದ ಪುರಾತನ ಹಿಂದೂ ಕಲಾಕೃತಿಗಳನ್ನ ಹಿಂದಿರುಗಿಸಿದ ಅಮೆರಿಕ

ಕಳ್ಳಸಾಗಣೆ ಮಾಡಲಾಗಿದ್ದ ಪುರಾತನ ಕಲಾಕೃತಿಗಳನ್ನ ವಾಪಸ್ ಪಡೆಯಲು ನ್ಯೂಯಾರ್ಕ್​ ತನಿಖಾಧಿಕಾರಿಗಳು ನಡೆಸಿದ ಹಲವು ವರ್ಷಗಳ ಪ್ರಯತ್ನದ ಫಲವಾಗಿ ಹಿಂದೂ ಹಾಗೂ ಬೌದ್ಧಿಸಂಗೆ ಸಂಬಂಧಿಸಿದ 27ಕ್ಕೂ ಅಧಿಕ ಪುರಾತನ ಕಲಾಕೃತಿಗಳನ್ನ ಅಮೆರಿಕ ಕಾಂಬೋಡಿಯಾಗೆ ಕಳುಹಿಸಿಕೊಟ್ಟಿದೆ. ಈ ಪ್ರತಿಮೆಗಳು ಸರಿ ಸುಮಾರು 3.8 ಮಿಲಿಯನ್​ ಡಾಲರ್​ ಮೌಲ್ಯದ್ದಾಗಿವೆ ಎಂದು ಅಂದಾಜಿಸಲಾಗಿದೆ.

ಇದರಲ್ಲಿ ಹಲವಾರು ಹಿಂದೂ ಹಾಗೂ ಅಂಕೋರಿಯನ್​ ಪ್ರತಿಮೆಗಳು ಇವೆ ಎನ್ನಲಾಗಿದೆ. ನಾಗನ ಮೇಲೆ ಧ್ಯಾನಸ್ಥನಾಗಿರುವ ಬುದ್ಧ, ಶಿವ ಹಾಗೂ ಬುದ್ಧನ ಮರಳುಗಲ್ಲಿನ ಶಿಲ್ಪ ಸೇರಿದಂತೆ ಅನೇಕ ಅಪರೂಪದ ಕಲಾಕೃತಿಗಳು ಇವಾಗಿವೆ ಎನ್ನಲಾಗಿದೆ.

ಗಮನಿಸಿ…! ಕರಾವಳಿ ಸೇರಿ ರಾಜ್ಯದ ಹಲವೆಡೆ ಭಾರೀ ಮಳೆ ಸಾಧ್ಯತೆ

ಇನ್ನು ಈ ವಿಚಾರವಾಗಿ ಮಾತನಾಡಿದ ಕಾಂಬೋಡಿಯಾದ ಸಂಸ್ಕೃತಿ ಹಾಗೂ ಲಲಿತಕಲೆಗಳ ಸಚಿವ ಪೂರಂಗ್​ ಸಕೋನಾ, ಈ ಪ್ರಾಚೀನ ವಸ್ತುಗಳು ನಮ್ಮ ದೇಶದ ಪೂರ್ವಜರ ಕಾಣೆಯಾದ ಆತ್ಮಗಳು ಎಂದು ಹೋಲಿಕೆ ಮಾಡಿದ್ದಾರೆ.

ಮ್ಯಾನ್​ಹ್ಯಾಟನ್​ ಆಂಟಿಕ್ವಿಟೀಸ್​ ಕಳ್ಳಸಾಗಣೆ ಘಟಕ ಹಾಗೂ ಹೋಮ್​ಲ್ಯಾಂಡ್​ ಸೆಕ್ಯೂರಿಟಿ ತನಿಖಾದಳದ ಶೋಧದ ಬಳಿಕ ಪತ್ತೆ ಮಾಡಿದ 400 ವಸ್ತುಗಳನ್ನ ಸಂಬಂಧ ಪಟ್ಟ 10 ದೇಶಗಳಿಗೆ ಹಿಂದಿರುಗಿಸಲಾಗಿದ್ದು ಇದರಲ್ಲಿ ಕಾಂಬೋಡಿಯಾ ಕೂಡ ಒಂದಾಗಿದೆ.

ವಂಚಕ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿಗೆ ಬಿಗ್ ಶಾಕ್; ಜಾಮೀನು ಅರ್ಜಿ ವಜಾಗೊಳಿಸಿದ ಡೊಮಿನಿಕಾ ಕೋರ್ಟ್

ಅಮೆರಿಕದ ಅಧಿಕಾರಿಗಳು ಕಳೆದ ವಾರ ಸ್ಯಾನ್​ ಫ್ರಾನ್ಸಿಸ್ಕೋ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದ ದಶಕಗಳ ಹಿಂದೆ ಕಳವು ಮಾಡಲಾಗಿದ್ದ ಕಲ್ಲಿನ ಕೆತ್ತನೆಗಳನ್ನ ಥೈಲ್ಯಾಂಡ್​ಗೆ ಹಿಂದಿರುಗಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...