alex Certify ಇದು ಅಂತಿಂಥಾ ಕ್ಯಾಚ್‌ ಅಲ್ಲವೇ ಅಲ್ಲ….! ಗಿನ್ನಿಸ್‌ ಬುಕ್‌ ಆಫ್ ರೆಕಾರ್ಡ್‌ ನಲ್ಲೂ ಇದು ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇದು ಅಂತಿಂಥಾ ಕ್ಯಾಚ್‌ ಅಲ್ಲವೇ ಅಲ್ಲ….! ಗಿನ್ನಿಸ್‌ ಬುಕ್‌ ಆಫ್ ರೆಕಾರ್ಡ್‌ ನಲ್ಲೂ ಇದು ದಾಖಲು

ಯಾವುದೇ ಕ್ರೀಡೆಯಾಗಲಿ ಅಲ್ಲಿ ದಿನಕ್ಕೊಂದು ದಾಖಲೆಗಳಾಗುತ್ತಲೇ ಇರುತ್ತೆ. ಈ ಬಾರಿಯೂ ಅಂತಹದ್ದೇ ಒಂದು ವಿಶೇಷ ದಾಖಲೆ ಮಾಡಲಾಗಿದೆ. ಅದು ಈ ಬಾರಿ ಗಿನ್ನಿಸ್ ಬುಕ್ ಆಫ್ ರಿಕಾರ್ಡ್‌ಗೆ ಸೇರಿದೆ.

ಅದು ಅಮೆರಿಕಾದ ಫುಟ್ಬಾಲ್ ಮೈದಾನ. ಅಲ್ಲಿ ಇಬ್ಬರು ಯುವಕರು ಒಂದು ದಾಖಲೆ ಮಾಡುವುದಕ್ಕೆ ಸಿದ್ಧವಾಗಿ ನಿಂತಿದ್ದರು. ಅದು ಅಂತಿಂಥ ದಾಖಲೆಯಲ್ಲ, ಯಾರೊಬ್ಬರೂ ಊಹಿಸಿಕೊಳ್ಳೊದಕ್ಕೂ ಸಾಧ್ಯವಾಗದ ದಾಖಲೆ ಅದು. ಇಬ್ಬರಲ್ಲಿ ಒಬ್ಬ ಯುವಕ ಹೆಲಿಕಾಪ್ಟರ್‌ನಲ್ಲಿ 188.9 ಮೀಟರ್ನಷ್ಟು ಮೇಲೆ ಹೋಗಿ ಅಲ್ಲಿಂದಾನೇ ಫುಟ್ಬಾಲ್‌ನ್ನ ಕೆಳಗೆ ಬಿಸಾಕಿದ್ದಾನೆ. ಕೆಳಗೆ ನಿಂತಿದ್ದ ಇನ್ನೊಬ್ಬ, ಅಷ್ಟೆತ್ತರದಿಂದ ಬಂದ ಬಾಲ್‌ನ್ನ ಯಶಸ್ವಿಯಾಗಿ ಹಿಡಿಯುತ್ತಾನೆ.

ಆ ಕ್ಯಾಚ್ ಈಗ ಗಿನ್ನಿಸ್‌ ವಿಶ್ವ ದಾಖಲೆ ರೆಕಾರ್ಡ್ ಮಾಡಿ ತನ್ನ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಹಾಕಿಕೊಂಡಿದೆ. ಈಗಾಗಲೇ ಈ ವಿಡಿಯೋವನ್ನ 3.3.ಲಕ್ಷ ಜನರು ವೀಕ್ಷಿಸಿದ್ದಾರೆ. ಹಾಗೆಯೇ ಇಷ್ಟು ಅದ್ಭುತ ಕ್ಯಾಚ್ ವಿಡಿಯೋಗೆ 25ಸಾವಿರ ಜನರು ಲೈಕ್ ಕೊಟ್ಟಿದ್ದಾರೆ. ನೆಟ್ಟಿಗರು ಈ ವಿಡಿಯೋ ನೋಡಿ ಅಚ್ಚರಿ ವ್ಯಕ್ತ ಪಡಿಸಿದ್ದಾರೆ.

‘ಇದೊಂದು ಅದ್ಭುತ ಕ್ಯಾಚ್‘ ಅಂತ ಒಬ್ಬರು ಹೇಳಿಕೊಂಡಿದ್ದಾರೆ. ‘ಯುವಕರ ಈ ಪ್ರಯತ್ನ ಮೆಚ್ಚಲೇ ಬೇಕು‘ ಅಂತ ಇನ್ನೊಬ್ಬರು ಕಾಮೆಂಟ್ ಹಾಕಿದ್ದಾರೆ. ‘ಈ ವಿಡಿಯೋ ನೋಡಿದ್ದಕ್ಕೆ ಗಿನ್ನಿಸ್‌ ಬುಕ್ ವಲ್ಡ್ ರಿಕಾರ್ಡ್ ಪುಸ್ತಕದಲ್ಲಿ ನನ್ನ ಹೆಸರು ಬರೆಯಬೇಕು’ ಅಂತ ಇನ್ನೊಬ್ಬರು ತಮಾಷೆ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...