alex Certify ರಾಜಕೀಯ ಪಕ್ಷಗಳಿಗೆ 3077 ಕೋಟಿ ರೂ. ಆದಾಯ: ಬಿಜೆಪಿಗೆ ಶೇ. 76.7 ರಷ್ಟು ಪಾಲು, 2361 ಕೋಟಿ ರೂ. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜಕೀಯ ಪಕ್ಷಗಳಿಗೆ 3077 ಕೋಟಿ ರೂ. ಆದಾಯ: ಬಿಜೆಪಿಗೆ ಶೇ. 76.7 ರಷ್ಟು ಪಾಲು, 2361 ಕೋಟಿ ರೂ.

ನವದೆಹಲಿ: 2022- 23ನೇ ಸಾಲಿನಲ್ಲಿ ರಾಜಕೀಯ ಪಕ್ಷಗಳಿಗೆ 3077 ಕೋಟಿ ರೂ. ಆದಾಯ ಬಂದಿದೆ. ಇದರಲ್ಲಿ ಬಿಜೆಪಿ ಶೇಕಡ 76.7 ರಷ್ಟು ಒಟ್ಟಾರೆ 2361 ಕೋಟಿ ರೂ. ಆದಾಯ ಪಡೆದಿದೆ.

ಕಾಂಗ್ರೆಸ್ ಪಕ್ಷ 452.37 ಕೋಟಿ ರೂ. ಆದಾಯ ಪಡೆದುಕೊಂಡಿದ್ದು, ಕ್ರಮಮವಾಗಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿದೆ. ಬಿಜೆಪಿ, ಕಾಂಗ್ರೆಸ್, ಬಿ.ಎಸ್.ಪಿ., ಆಮ್ ಆದ್ಮಿ ಪಕ್ಷ, ಎನ್‌ಪಿಪಿ, ಸಿಪಿಎಂ ಗಳು ತಮ್ಮ ಆದಾಯ ಘೋಷಿಸಿಕೊಂಡಿವೆ.

ಬಿಜೆಪಿ ಚುನಾವಣೆ ಬಾಂಡ್ ಗಳಿಂದ 1294 ಕೋಟಿ ರೂಪಾಯಿ ಆದಾಯ ಪಡೆದಿದ್ದರೆ, ಕಾಂಗ್ರೆಸ್ 171 ಕೋಟಿ ರೂಪಾಯಿ, ಆಮ್ ಆದ್ಮಿ ಪಕ್ಷ 45.45 ಕೋಟಿ ರೂಪಾಯಿ ಆದಾಯ ಪಡೆದಿವೆ. 2021- 22ಕ್ಕೆ ಹೋಲಿಸಿದರೆ ಬಿಜೆಪಿ ಆದಾಯ ಶೇಕಡ 23 ರಷ್ಟು ಹೆಚ್ಚಾಗಿದೆ ಎಂದು ಎಡಿಆರ್ ವರದಿ ತಿಳಿಸಿದೆ.

ಆರು ರಾಷ್ಟ್ರೀಯ ಪಕ್ಷಗಳು 2022-23ರ ಹಣಕಾಸು ವರ್ಷದಲ್ಲಿ ಸುಮಾರು 3077 ಕೋಟಿ ರೂ.ಗಳ ಒಟ್ಟು ಆದಾಯವನ್ನು ಘೋಷಿಸಿವೆ. ಬಿಜೆಪಿಯು ಗರಿಷ್ಠ 2361 ಕೋಟಿ ರೂ. 2022-23ರ ಆರ್ಥಿಕ ವರ್ಷದಲ್ಲಿ ಆರು ರಾಷ್ಟ್ರೀಯ ಪಕ್ಷಗಳ ಒಟ್ಟು ಆದಾಯದಲ್ಲಿ ಆಡಳಿತಾರೂಢ ಬಿಜೆಪಿಯ ಆದಾಯ ಶೇ.76.73ರಷ್ಟಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ಬುಧವಾರ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...