alex Certify ಶೀಘ್ರವೇ ಈ ಐದು ಬೈಕ್‌ ಗಳು ಭಾರತದ ಮಾರುಕಟ್ಟೆಗೆ ಲಗ್ಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶೀಘ್ರವೇ ಈ ಐದು ಬೈಕ್‌ ಗಳು ಭಾರತದ ಮಾರುಕಟ್ಟೆಗೆ ಲಗ್ಗೆ

ಪೆಟ್ರೋಲ್‌ ಬೆಲೆಯು 100ರ ಗಡಿ ದಾಟಿ ತಿಂಗಳುಗಳೇ ಕಳೆದರೂ ಕೂಡ ಹೊಸ ಮೋಟಾರ್‌ಸೈಕಲ್‌ ಅಥವಾ ಕಾರುಗಳನ್ನು ಖರೀದಿ ಮಾಡುವ ಜನರ ಸಂಖ್ಯೆ ಕಡಿಮೆ ಏನೂ ಆಗಿಲ್ಲ. ಒಂದೆಡೆ ಎಲೆಕ್ಟ್ರಿಕ್‌ ವಾಹನಗಳು ಹೊಸ ಮಾದರಿಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದರೆ, 250 ಸಿಸಿ ಸಾಮರ್ಥ್ಯ‌ಕ್ಕಿಂತ ಹೆಚ್ಚಿನ ಇಂಜಿನ್‌ ಹೊಂದಿರುವ ಬೈಕ್‌ಗಳ ಹೊಸ ಮಾದರಿಗಳು ಕೂಡ ಮಾರುಕಟ್ಟೆ ಪ್ರವೇಶಕ್ಕೆ ಸಿದ್ಧವಾಗಿವೆ. ಆ ಪೈಕಿ ಐದು ಟಾಪ್‌ ಬೈಕ್‌ಗಳು ಇಲ್ಲಿವೆ.

1. ಯೆಜ್ಡಿ

Yezdi roadking old.png

ಹಳೆಯ ಹುಲಿ ಮತ್ತೆ ಹೊಸ ಅವತಾರದಲ್ಲಿ ರಸ್ತೆಗೆ ಇಳಿಯಲು ಸಿದ್ಧವಾಗಿದೆ. ಆರು ಗೇರ್‌ಗಳ 334 ಸಿಸಿ ಸಾಮರ್ಥ್ಯ‌ದ ಹೊಸ ಯುಗಕ್ಕಾಗಿ ಮಾರ್ಪಡಿಸಿರುವ ರೋಡ್‌ಕಿಂಗ್‌ ಭಾರತದಲ್ಲಿ ಮಾರಾಟಕ್ಕೆ ಶೀಘ್ರವೇ ಲಭ್ಯವಾಗಲಿದೆ.

2. ನ್ಯೂ-ಜೆನ್‌ ಕೆಟಿಎಂ ಆರ್‌ಸಿ 390

RC390 new front side.jpg

ಕೆಟಿಎಂ ಅಂದರೆ ವೇಗ, ಕೆಟಿಎಂ ಅಂದರೆ ಸ್ಪೋರ್ಟ್ಸ್ ಬೈಕ್‌ಗಳ ಸರದಾರ. ಈಗಾಗಲೇ ಪಡ್ಡೆ ಹುಡುಗರ ‘ಮೋಸ್ಟ್‌ ವಾಂಟೆಡ್‌ ಬೈಕ್‌’ ಆಗಿರುವ ಕೆಟಿಎಂ, ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದೆ. ಕಾವಾಸಾಕಿ ನಿಂಜಾ ಮಾದರಿಯಲ್ಲಿ ವಿನ್ಯಾಸವುಳ್ಳ ಕೆಟಿಎಂ ಆರ್‌ಸಿ 390 ಜನವರಿಯಲ್ಲಿ ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ. 373 ಸಿಸಿ ಸಾಮರ್ಥ್ಯ‌ದ ಇಂಜಿನ್‌, ಅತಿವೇಗದಲ್ಲಿದ್ದಾಗ ಬೈಕ್‌ ಜಾರಿಕೊಂಡು ಅಪಘಾತವಾಗುವುದನ್ನು ನಿಯಂತ್ರಿಸುವ ಆ್ಯಂಟಿಲಾಕ್‌ ಬ್ರೇಕಿಂಗ್‌ ಸಿಸ್ಟಮ್‌ (ಎಬಿಎಸ್‌) ಇದರಲ್ಲಿ ಇರಲಿದೆ.

3. ರಾಯಲ್‌ ಎನ್‌ಫೀಲ್ಡ್‌ ಹಂಟರ್‌

2021 Royal Enfield Hunter

ಮಿಟಿಯಾರ್‌ 350, ಕ್ಲಾಸಿಕ್‌ 350ಯ ನಂತರ ಹೊಸ ಶ್ರೇಣಿಯ ದೈತ್ಯ ಬೈಕ್‌ವೊಂದನ್ನು ರಾಯಲ್‌ ಎನ್‌ಫೀಲ್ಡ್‌ ಮೋಟಾರ್ಸ್‌ ಪರಿಚಯಿಸುತ್ತಿದೆ. ಅಗಲವಾದ ಹ್ಯಾಂಡಲ್‌ ಬಾರ್‌ವುಳ್ಳ ಹಂಟರ್‌ ರಸ್ತೆಗೆ ಇಳಿಯಲಿದೆ. ಇದು ಕೂಡ 349 ಸಿಸಿ ಸಾಮರ್ಥ್ಯ‌ದ ಇಂಜಿನ್‌ ಹೊಂದಿದೆ.

4. ಹೊಂಡಾ ಸಿಬಿ300ಆರ್‌

CB300R side.png

ಜಪಾನ್‌ ಮೂಲದ ಖ್ಯಾತ ಬೈಕ್‌ ಹಾಗೂ ಕಾರು ತಯಾರಿಕೆ ಸಂಸ್ಥೆ ಹೊಂಡಾದಿಂದ ಬಿಎಸ್‌ 6 ಇಂಜಿನ್‌ ಹೊಂದಿರುವ 286 ಸಿಸಿ ಸಾಮರ್ಥ್ಯ‌ದ ಸಿಬಿ300ಆರ್‌ ರಸ್ತೆಗಳಲ್ಲಿ ವೇಗವಾಗಿ ನುಗ್ಗಲಿದೆ. ಬಿಎಂಡಬ್ಲ್ಯೂ ಬೈಕ್‌ಗಳ ಮಾದರಿಯ ಹೊಸ ವಿನ್ಯಾಸವನ್ನು ಇದು ಹೊಂದಿದೆ.

5. ರಾಯಲ್‌ ಎನ್‌ಫೀಲ್ಡ್‌ 650 ಕ್ರೂಸರ್‌

Upcoming Royal Enfield 650 cc cruiser bike spotted testing yet again

ಅಮೆರಿಕದ ಖ್ಯಾತ , ಐಷಾರಾಮಿ ಬೈಕ್‌ಗಳ ತಯಾರಿಕೆ ಸಂಸ್ಥೆ ಹಾರ್ಲೆ ಡೇವಿಡ್‌ಸನ್‌ ಬೈಕ್‌ಗಳ ವಿನ್ಯಾಸದ ದೈತ್ಯ ಹಾಗೂ ಹೆಚ್ಚಿನ ಸಾಮರ್ಥ್ಯ‌ದ ’’ಕ್ರೂಸರ್‌’’ ಹೆಸರಿನ ಬೈಕ್‌ ರಾಯಲ್‌ ಎನ್‌ಫೀಲ್ಡ್‌ ಪರಿಚಯಿಸಲಿದೆ.

648 ಸಿಸಿ ಸಾಮರ್ಥ್ಯ‌ದ ಆರ್‌ಇ ಕ್ರೂಸರ್‌ 2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಮಾಡಲಾಗಿತ್ತು. ದೈತ್ಯ ದೇಹಿಗಳು ಆರಾಮಾಗಿ ಕೂತುಕೊಂಡು ಕಾರಿನಂತೆ ಚಲಾಯಿಸುವ ಮಜಾ ಪಡೆಯಲು ಸೂಕ್ತವಾದ ಬೈಕ್‌ ಇದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...