alex Certify 100 ಕ್ಕೂ ಹೆಚ್ಚು ಮಹಿಳೆಯರ ಅತ್ಯಾಚಾರ ನಡೆಸಿದ್ದ ಜಲೇಬಿ ಬಾಬಾ ಜೈಲಿನಲ್ಲಿ ಹೃದಯಾಘಾತದಿಂದ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

100 ಕ್ಕೂ ಹೆಚ್ಚು ಮಹಿಳೆಯರ ಅತ್ಯಾಚಾರ ನಡೆಸಿದ್ದ ಜಲೇಬಿ ಬಾಬಾ ಜೈಲಿನಲ್ಲಿ ಹೃದಯಾಘಾತದಿಂದ ಸಾವು

Jalebi Baba Dies of Suspected Heart Attack: Self-Styled Godman Amarpuri, Convicted for Raping Over 100 Women and Making Videos of Sex Assault, Passes Away in Hisar Jail

ಸ್ವಯಂಘೋಷಿತ ದೇವಮಾನವ, ಜಲೇಬಿ ಬಾಬಾ ಎಂದು ಕುಖ್ಯಾತಿ ಪಡೆದಿರುವ ಬಾಬಾ ಬಿಲ್ಲು ರಾಮ್ ಅಲಿಯಾಸ್ ಅಮರಪುರಿ, ಜೈಲಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವ ವರದಿಯಾಗಿದೆ. 100 ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ಅದರ ವಿಡಿಯೋ ಚಿತ್ರೀಕರಿಸಿಕೊಂಡು 14 ವರ್ಷ ಹರಿಯಾಣದ ಹಿಸಾರ್ ಸೆಂಟ್ರಲ್ ಜೈಲಿನಲ್ಲಿ ಶಿಕ್ಷೆ ಅನುಭವಿಸ್ತಿದ್ದ ವೇಳೆ ಸಾವನ್ನಪ್ಪಿದ್ದಾನೆ.

ಮಹಿಳೆಯರಿಗೆ ಮಾದಕದ್ರವ್ಯ ನೀಡಿ ಅವರ ದುರ್ಬಲತೆಯನ್ನು ಬಳಸಿಕೊಳ್ಳುವ ಮೂಲಕ ಅಪರಾಧವೆಸಗುತ್ತಿದ್ದ. ಜೈಲಿನಲ್ಲಿ ಆತನ ಆರೋಗ್ಯ ಹದಗೆಟ್ಟಿದ್ದರಿಂದ ಆಸ್ಪತ್ರೆಗೆ ಸೇರಿಸಲಾಯಿತಾದರೂ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಅಧಿಕಾರಿಗಳ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ವರದಿಗಳ ಪ್ರಕಾರ ಮಂಗಳವಾರ ರಾತ್ರಿ ಅವರು ಅಸ್ವಸ್ಥತೆಯ ಬಗ್ಗೆ ದೂರು ನೀಡಿದ ನಂತರ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ರಾಮ್ ಅಲಿಯಾಸ್ ಅಮರಪುರಿಯನ್ನು ಜನವರಿ 2023 ರಲ್ಲಿ ಶಿಕ್ಷೆಯ ನಂತರ ಹಿಸಾರ್‌ನ ಜೈಲಿನಲ್ಲಿ ಇರಿಸಲಾಗಿತ್ತು. ಅಪ್ರಾಪ್ತರು ಸೇರಿದಂತೆ ತನ್ನ ಮೂವರು ಶಿಷ್ಯರ ಮೇಲೆ ಅತ್ಯಾಚಾರ ಮಾಡಿ ಕೃತ್ಯದ ವೀಡಿಯೊಗಳನ್ನು ಮಾಡಿದ ಆರೋಪದಲ್ಲಿ ಆತನಿಗೆ ಶಿಕ್ಷೆ ವಿಧಿಸಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...