alex Certify ಸೊಳ್ಳೆ ಟ್ವೀಟ್ ಮಾಡಿದ ಪೋಸ್ಟ್; ನೆಟ್ಟಿಗರಿಗೆ ಹಾಸ್ಯದೂಟ ನೀಡಿದೆ ಫೋಟೋ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೊಳ್ಳೆ ಟ್ವೀಟ್ ಮಾಡಿದ ಪೋಸ್ಟ್; ನೆಟ್ಟಿಗರಿಗೆ ಹಾಸ್ಯದೂಟ ನೀಡಿದೆ ಫೋಟೋ…!

Photo Of Mosquito 'Sending Tweet' Goes Viral With More Than Three Million Views

ನಾವು ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಟ್ವೀಟ್‌ಗಳು ಮತ್ತು ಪೋಸ್ಟ್ ಗಳನ್ನು ನೋಡುತ್ತೇವೆ. ಆದಾಗ್ಯೂ, ಕೆಲವು ಮಾತ್ರ ನಿಮ್ಮನ್ನು ನಗುವಂತೆ ಮಾಡುತ್ತದೆ ಮತ್ತು ಸ್ವಲ್ಪ ಸಮಯದವರೆಗೆ ನಿಮ್ಮ ತಲೆಯಲ್ಲೇ ಗಿರಕಿ ಹೊಡೆಯುತ್ತಿರುತ್ತವೆ.

ಅಂತಹ ಹಾಸ್ಯದ ದೃಶ್ಯವೊಂದು ಗಮನಸೆಳೆದಿದ್ದು ನಿಮ್ಮ ಕೆಲಸದ ದಿನವನ್ನು ಹಗುರಗೊಳಿಸಲಿದೆ.

ಕಂಪ್ಯೂಟರ್ ನಲ್ಲಿ ಮುಂದೆ ಕುಳಿತು ಕೀಬೋರ್ಡ್ ಕೆಲಸ ಮಾಡುವ ನಮ್ಮಂತೆಯೇ ಸೊಳ್ಳೆಯೂ ಕೂಡ ಕೀಬೋರ್ಡ್ ನಲ್ಲಿ ಕೆಲಸ ಮಾಡಿದೆ ಎಂಬ ಹಾಸ್ಯ ಪ್ರಜ್ಞೆಯನ್ನು ಹೊಂದಿರುವ ಪೋಸ್ಟ್ ಇದಾಗಿದೆ.

ಕೀ ಬೋರ್ಡ್ ನ “V” ಅಕ್ಷರದ ಮೇಲೆ ಸೊಳ್ಳೆ ಕುಳಿತಿದ್ದು ಟೈಪ್ ಮಾಡುತ್ತಿರುವಂತೆ ಕಂಡಿದೆ. ಇದನ್ನು ಹಾಸ್ಯ ಪ್ರಜ್ಞೆಯಿಂದ ನೋಡಿದ ಇಂಟರ್ನೆಟ್ ಬಳಕೆದಾರ ‘ಈ ಟ್ವೀಟನ್ನು ಸೊಳ್ಳೆ ಕಳಿಸಿದೆ’ ಎಂದು ಪೋಸ್ಟ್ ಮಾಡಿದ್ದಾರೆ.

ಮೇ 8 ರಂದು ಆನ್‌ಲೈನ್‌ನಲ್ಲಿ ಹಂಚಿಕೊಂಡ ಈ ಫೋಟೋ ವೈರಲ್ ಆಗಿದೆ. ಟ್ವಿಟರ್ ನಲ್ಲಿ 3.1 ಮಿಲಿಯನ್ ಜನರ ಗಮನ ಸೆಳೆದಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...