alex Certify ಇಲ್ಲಿದೆ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಬೈಕ್ ಗಳ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಬೈಕ್ ಗಳ ಪಟ್ಟಿ

ಭಾರತದ ಮಧ್ಯಮ ವರ್ಗದ ಹಾಗೂ ಕೆಳ ವರ್ಗದ ಜನರು ಮೋಟರ್‌ ಸೈಕಲ್‌ ಖರೀದಿಗೆ ಹೆಚ್ಚು ಆಸಕ್ತಿ ತೋರುತ್ತಾರೆ. ಕಡಿಮೆ ಬೆಲೆಯ ಹಾಗೂ ಹೆಚ್ಚು ಮೈಲೇಜ್‌ ನೀಡುವ ಬೈಕ್‌ ಗಳು ಅವರ ಮೊದಲ ಆಯ್ಕೆಯಾಗಿರುತ್ತವೆ. ಇದೇ ಕಾರಣಕ್ಕೆ ಭಾರತದಲ್ಲಿ ಕೆಲ ಬೈಕ್‌ ಗಳ ಮಾರಾಟ ಹೆಚ್ಚಿದೆ. ಬೈಕ್‌ ಖರೀದಿ ಆಲೋಚನೆಯಲ್ಲಿದ್ದರೆ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಬೈಕ್‌ ಯಾವುದು ಎಂಬುದನ್ನು ತಿಳಿದುಕೊಳ್ಳಿ.

ಭಾರತದಲ್ಲಿ  ಹೆಚ್ಚು ಮಾರಾಟವಾಗುವ ಮೋಟಾರ್‌ಸೈಕಲ್‌ಗಳ ಪಟ್ಟಿಯಲ್ಲಿ ಹೀರೋ ಸ್ಪ್ಲೆಂಡರ್ ಮೊದಲ ಸ್ಥಾನದಲ್ಲಿದೆ. ಕಳೆದ ತಿಂಗಳು  ಜನವರಿ 2024 ರಲ್ಲಿ 2,55,122 ಹೀರೋ ಸ್ಪ್ಲೆಂಡರ್‌ ಖರೀದಿ ಮಾಡಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿ ಹೋಂಡಾ ಶೈನ್ ಇದೆ. ಅದನ್ನು 1,45,252 ಗ್ರಾಹಕರು ಖರೀದಿಸಿದ್ದಾರೆ. ಬಜಾಜ್ ಪಲ್ಸರ್ ಮೂರನೇ ಸ್ಥಾನದಲ್ಲಿದ್ದು, 1,28,883 ಮಂದಿ ಖರೀದಿಸಿದ್ದಾರೆ. ಇದರ ನಂತರ ನಾಲ್ಕನೇ ಸ್ಥಾನದಲ್ಲಿರುವ ಹೀರೋ ಹೆಚ್‌ ಎಫ್‌ ಡಿಲಕ್ಸ್‌ ಅನ್ನು 78,767 ಗ್ರಾಹಕರು ಖರೀದಿಸಿದ್ದಾರೆ. ಟಿವಿಎಸ್ ರೈಡರ್ ಕೂಡ ಹಿಂದೆ ಬಿದ್ದಿಲ್ಲ. ಅದನ್ನು ಹಿಂದಿನ ವರ್ಷ 43,331 ಗ್ರಾಹಕರು ಖರೀದಿಸಿದ್ದು, ಅದು ಹೆಚ್ಚು ಮಾರಾಟವಾದ ಐದು ಬೈಕ್‌ ಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.

ಇನ್ನು ಪಟ್ಟಿಯಲ್ಲಿ ಬಜಾಜ್ ಪ್ಲಾಟಿನಾ ಆರನೇ ಸ್ಥಾನದಲ್ಲಿದ್ದರೆ ಟಿವಿಎಸ್ ಅಪಾಚೆ ಏಳನೇ ಸ್ಥಾನದಲ್ಲಿದೆ. ಹೀರೋ ಪ್ಯಾಶನ್ 8 ನೇ ಸ್ಥಾನದಲ್ಲಿದೆ. ಒಂಭತ್ತನೇ ಸ್ಥಾನದಲ್ಲಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಇದ್ದರೆ ಹತ್ತನೇ ಸ್ಥಾನದಲ್ಲಿ ಹೋಂಡಾ ಯುನಿಕಾರ್ನ್ ಇದೆ. ಭಾರತದ ಮಾರುಕಟ್ಟೆಯಲ್ಲಿ 100 ರಿಂದ 200 ಸಿಸಿ ಬೈಕ್‌ಗಳಿಗೆ ಉತ್ತಮ ಬೇಡಿಕೆ ಇದೆ. 150 ಸಿಸಿಯಿಂದ 200 ಸಿಸಿ ವರೆಗಿನ ಬೈಕ್‌ಗಳನ್ನು ಹೆಚ್ಚಾಗಿ ಯುವಕರು ಇಷ್ಟಪಡುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...