alex Certify ಪೊಲೀಸ್​ ಸ್ಟೇಷನ್​ ಆವರಣದಲ್ಲೇ ರೀಲ್ಸ್; ಇಬ್ಬರು ಯುವಕರು ಅಂದರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸ್​ ಸ್ಟೇಷನ್​ ಆವರಣದಲ್ಲೇ ರೀಲ್ಸ್; ಇಬ್ಬರು ಯುವಕರು ಅಂದರ್

ಪೊಲೀಸ್​ ಠಾಣೆಯ ಎದುರು ರೀಲ್ಸ್​ ಮಾಡಿದ ಇಬ್ಬರು ಯುವಕರನ್ನು ಬಂಧಿಸಿದ ಘಟನೆಯು ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಗೊಂಡಾದ ವಜೀರ್​ಗಂಜ್​ ಪೊಲೀಸ್​ ಠಾಣೆಯ ಎದುರು ಇಬ್ಬರು ಯುವಕರು ರೀಲ್​ ಮಾಡಿದ್ದರು ಎನ್ನಲಾಗಿದೆ.‌

ಈ ಘಟನೆ ಸಂಬಂಧ ಸೋಶಿಯಲ್​ ಮೀಡಿಯಾದಲ್ಲಿ ವೀಡಿಯೋ ವೈರಲ್​ ಆಗುತ್ತಿದ್ದಂತೆಯೇ ಪೊಲೀಸ್​ ಠಾಣೆಯ ಎದುರು ವಿಡಿಯೋ ಚಿತ್ರೀಕರಣ ಮಾಡುವುದು ಕಾನೂನುಬಾಹಿರವೇ ಅಥವಾ ಅದಕ್ಕೆ ನಿಷೇಧ ಹೇರಲಾಗಿದೆಯಾ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.

ಬಂಧನದ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಶೇರ್​ ಮಾಡಿರುವ ವಜೀರ್​ಗಂಜ್​ ಠಾಣಾ ಪೊಲೀಸರು, ಪೊಲೀಸ್​ ಠಾಣೆಯ ಆವರಣದಲ್ಲಿ ರೀಲ್ಸ್​ ಮಾಡಿದ ಇಬ್ಬರನ್ನು ಬಂಧಿಸಿದ್ದೇವೆ. ಯುವಕರು ತಾವು ಮಾಡಿದ ರೀಲ್ಸ್​ನ್ನು ಎಕ್ಸ್​ನಲ್ಲಿ ಶೇರ್​ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ಪೊಲೀಸರ ಈ ಟ್ವೀಟ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ಪೊಲೀಸ್​ ಠಾಣೆಯ ಆವರಣದಲ್ಲಿ ರೀಲ್ಸ್ ಮಾಡುವುದು ಅಪರಾಧವೇ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು ಪೊಲೀಸ್​ ಠಾಣೆ ಆವರಣದ ವಿಡಿಯೋ ಮಾಡೋದ್ರಿಂದ ಕಳ್ಳರಿಗೆ ಏನಾದ್ರೂ ಪ್ರೂಫ್​ ನೀಡಿದಂತೆ ಆಗುತ್ತದೆಯೇ ಎಂದು ಹೇಳೋ ಮೂಲಕ ಪೊಲೀಸರಿಗೆ ಟಾಂಗ್​ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...