alex Certify Watch Photo | ಒಂದೇ ಫ್ರೇಂನಲ್ಲಿ ನಾಲ್ಕು ತಿಮಿಂಗಿಲಗಳ ‘ಫ್ಯಾಮಿಲಿ’ ಸೆರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch Photo | ಒಂದೇ ಫ್ರೇಂನಲ್ಲಿ ನಾಲ್ಕು ತಿಮಿಂಗಿಲಗಳ ‘ಫ್ಯಾಮಿಲಿ’ ಸೆರೆ

ಮಸ್ಸಾಚುಸೆಟ್ಸ್ ಕರಾವಳಿಯಲ್ಲಿ ನಾಲ್ಕು ತಿಮಿಂಗಿಲಗಳು ಒಂದೇ ಕಡೆ ಈಜುತ್ತಿರುವ ಚಿತ್ರವೊಂದು ವೈರಲ್ ಆಗಿದೆ. ’ನ್ಯೂ ಇಂಗ್ಲೆಂಡ್ ಅಕ್ವೇರಿಯಂ’ನ ವಿಜ್ಞಾನಿಗಳು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.

ಅಕ್ವೇರಿಯಂನ ಟ್ವಿಟರ್‌ ಖಾತೆಯಲ್ಲಿ ಈ ದೃಶ್ಯ ಶೇರ್‌ ಮಾಡಲಾಗಿದೆ. ನಾನ್ಟುಕೆಟ್ ದ್ವೀಪದಿಂದ 40 ಮೈಲಿ ದೂರದಲ್ಲಿ ಈ ತಿಮಿಂಗಿಲಗಳು ಕಂಡು ಬಂದಿವೆ ಎಂದು ಹೇಳಲಾಗಿದೆ.

ವಿಜ್ಞಾನಿಗಳ ತಂಡದ ಕ್ಯಾಥರೀನ್ ಮೆಕೆನ್ನಾ ಕಣ್ಣಿಗೆ ಈ ತಿಮಿಂಗಿಲಗಳು ಮೊದಲು ಬಿದ್ದಿವೆ. ಈ ತಿಮಿಂಗಿಲಗಳ ಪೈಕಿ ಒಂದು ವಯಸ್ಕ ಗಂಡು, ಒಂದು ವಯಸ್ಕ ಹೆಣ್ಣು ಹಾಗೂ ಮತ್ತೆರಡು ಆಡುವ ವಯಸ್ಸಿನ ಮರಿ ತಿಮಿಂಗಿಲಗಳಾಗಿವೆ ಎನ್ನಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...