alex Certify ನಿಂಬೆ ಪಾನಕ ಮಿಶ್ರಿತ ಮದ್ಯ ಸೇವಿಸಿದ ಯುವತಿಗೆ ಏನಾಯ್ತು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಂಬೆ ಪಾನಕ ಮಿಶ್ರಿತ ಮದ್ಯ ಸೇವಿಸಿದ ಯುವತಿಗೆ ಏನಾಯ್ತು ಗೊತ್ತಾ….?

UK Girl Goes Into a 'Frozen' State After Having Spiked Drink

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೂ ಕೆಲವು ಮಂದಿ ಕುಡಿದು ಎಲ್ಲೆಂದರಲ್ಲಿ ತೂರಾಡುತ್ತಿರುತ್ತಾರೆ. ಸ್ನೇಹಿತ ಅನ್ನೋ ನೆಪದಲ್ಲಿ ಮೋಸ ಮಾಡುವವರೂ ಇದ್ದಾರೆ. ಮದ್ಯದಲ್ಲಿ ಏನೇನು ಬೆರೆಸಿ ಪ್ರಾಣಕ್ಕೆ ಕುತ್ತು ತರಿಸುವಂತಹ ಸ್ನೇಹಿತರಿಂದ ದೂರವಿರಿ. ಮದ್ಯಪ್ರಿಯರೆ ಎಚ್ಚರ..ಎಚ್ಚರ.. ಸ್ವಲ್ಪ ಎಡವಟ್ಟದ್ರೂ ನಿಮ್ಮ ದೇಹದ ಶಕ್ತಿಯನ್ನೇ ಕಳೆದುಕೊಳ್ಳಬಹುದು.

ಸ್ನೇಹಿತರ ಜತೆ ಕುಡಿದು ತೂರಾಡೋ ಮುನ್ನ ಈ ಸ್ಟೋರಿ ಓದಿ, ಮದ್ಯಪಾನದಿಂದ ದೂರ ಇರಿ..

ಹೌದು, ಜಗತ್ತಿನಲ್ಲಿ ವಿವಿಧ ರೀತಿಯ ಕುಡುಕರು ಇದ್ದಾರೆ. ಕೆಲವರು ತಮ್ಮ ಪಾನೀಯವನ್ನು ಆನಂದಿಸುತ್ತಾರೆ. ಇನ್ನು ಕೆಲವರು ಅದಕ್ಕೆ ಹಣ್ಣಿನ ರಸ ಇಲ್ಲವೇ ಸೋಡಾ ಬೆರೆಸಲು ಇಷ್ಟಪಡುತ್ತಾರೆ. ಆದ್ರೆ ಇಲ್ಲೊಬ್ಬಳು ಯುವತಿ ನಿಂಬೆ ಪಾನಕ ಮಿಶ್ರಿತ ವೊಡ್ಕಾ ಸೇವಿಸಿ, ಪಾರ್ಶ್ವವಾಯುಗೆ ಗುರಿಯಾಗಿದ್ದಾಳೆ.

BIG NEWS: ಭಾರತಕ್ಕೆ ಕೊರೊನಾ ಸಂಬಂಧಿ ಪ್ರಯಾಣ ನಿರ್ಬಂಧವನ್ನು ಸಡಿಲಿಸಿದ ಬ್ರಿಟನ್​

ಯುಕೆಯ ಎಸ್ಸೆಕ್ಸ್ ನಿವಾಸಿಯಾಗಿರುವ ಮಿಲ್ಲಿ ಎಂಬಾಕೆ ನೈಟ್ ಕ್ಲಬ್ ಗೆ ಭೇಟಿ ನೀಡಿದ್ದಾಳೆ. ಈ ವೇಳೆ ಸ್ನೇಹಿತ ಕೊಟ್ಟ ನಿಂಬೆ ಪಾನಕ ಮಿಶ್ರಿತ ವೊಡ್ಕಾ ಸೇವಿಸಿದ ಪರಿಣಾಮ ಈ ಸ್ಥಿತಿಗೆ ತಲುಪಿದ್ದಾಳೆ ಎನ್ನಲಾಗಿದೆ. ಮಿಲ್ಲಿಯ ಪರಿಸ್ಥಿತಿಯನ್ನು ಆಕೆಯ ತಾಯಿ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಆಸ್ಪತ್ರೆ ಬೆಡ್ ಮೇಲೆ ಮಲಗಿರುವ ಪುತ್ರಿಯ ವಿಡಿಯೋ ಹಂಚಿಕೊಂಡಿದ್ದು, ನೋಡಲು ಭಯಾನಕವೆನಿಸುತ್ತದೆ. ಈ ಮೊದಲು ಈ ರೀತಿ ನೋಡಿರಲಿಲ್ಲ ಎಂದು ಹೇಳಿದ್ದಾರೆ.

ಅದೃಷ್ಟವಶಾತ್ ಕೆಲವು ಗಂಟೆಗಳ ಬಳಿಕ ಯುವತಿ ಮಿಲ್ಲಿ ಸಾಮಾನ್ಯ ಸ್ಥಿತಿಗೆ ಮರಳಿದ್ದಾಳೆ. ಇನ್ನು ಆಕೆಗೆ ಪಾನೀಯ ನೀಡಿದ ವ್ಯಕ್ತಿ ವಿರುದ್ಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...