alex Certify ಟೋಕಿಯೋ ಒಲಿಂಪಿಕ್ಸ್ 2020: ಐಸೋಲೇಷನ್​ಗೆ ಒಳಗಾದ ಆಸ್ಟ್ರೇಲಿಯಾದ 63 ಕ್ರೀಡಾಪಟುಗಳು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೋಕಿಯೋ ಒಲಿಂಪಿಕ್ಸ್ 2020: ಐಸೋಲೇಷನ್​ಗೆ ಒಳಗಾದ ಆಸ್ಟ್ರೇಲಿಯಾದ 63 ಕ್ರೀಡಾಪಟುಗಳು….!

ಅಮೆರಿಕದ ವಿಶ್ವ ಶ್ರೇಯಾಂಕಿತ ಪೋಲ್​ ವೌಲ್ಟರ್​ ಆಟಗಾರ ಕೊರೊನಾ ಸೋಂಕಿಗೆ ತುತ್ತಾಗುತ್ತಿದ್ದಂತೆಯೇ ಟೋಕಿಯೋ ಒಲಿಂಪಿಕ್​​ನಲ್ಲಿ ಭಾಗಿಯಾಗಬೇಕಿದ್ದ ಆಸ್ಟ್ರೇಲಿಯಾ ಆಟಗಾರರನ್ನ ಐಸೋಲೇಷನ್​ನಲ್ಲಿ ಇರಿಸಲಾಗಿದೆ.

ಅಮೆರಿಕದ ಪೋಲ್​ ವೌಲ್ಟರ್​ ಆಟಗಾರ ಸ್ಯಾಮ್​ ಕೆಂಡ್ರಿಕ್ಸ್ ಕೊರೊನಾ ಸೋಂಕಿಗೆ ತುತ್ತಾದ ಬಳಿಕ ಒಲಿಂಪಿಕ್ಸ್​ನಿಂದ ಹೊರ ನಡೆದಿದ್ದರು. ಆದರೆ ಆಸ್ಟ್ರೇಲಿಯಾದ ಪೌಲ್​​​ ವಾಲ್ಟರ್​​​ ಕುರ್ಟಿಸ್ ಮಾರ್ಷಲ್ ಎಂಬವರು ಸೋಂಕಿತ ಸ್ಯಾಮ್​ ಸಂಪರ್ಕದಲ್ಲಿ ಇದ್ದ ಕಾರಣ 63 ಸದಸ್ಯರ ಆಸ್ಟ್ರೇಲಿಯಾ ತಂಡ ಇದೀಗ ಐಸೋಲೇಷನ್​ನಲ್ಲಿ ಇರಬೇಕಾಗಿದೆ.

ಪ್ರತ್ಯೇಕವಾಗಿರುವ 63 ಆಸ್ಟ್ರೇಲಿಯಾ ಆಟಗಾರರಿಗೆ ಕೊರೊನಾ ಪರೀಕ್ಷೆ ಮಾಡಲಾಗುತ್ತದೆ ಎಂದು ಆಸ್ಟ್ರೇಲಿಯಾ ಒಲಿಂಪಿಕ್​ ಆಡಳಿತ ಮಂಡಳಿ ಮಾಹಿತಿ ನೀಡಿದೆ.

‘ನಾಸಾ’ ಕಣ್ಣಲ್ಲಿ ಸೆರೆಯಾಯ್ತು ಟೋಕಿಯೋ ಒಲಿಂಪಿಕ್​​ನ ಅತ್ಯದ್ಭುತ ದೃಶ್ಯ….!

ಕೆಂಡ್ರಿಕ್ಸ್​ ಕೊರೊನಾ ಸೋಂಕಿಗೆ ಒಳಗಾಗಿರುವ ಬಗ್ಗೆ ಕೋಚ್​ ಹಾಗೂ ತಂದೆ ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಶೇರ್​ ಮಾಡಿದ್ದರು. ಹಾಗೂ ಕೆಂಡ್ರಿಕ್ಸ್​​ ಒಲಿಂಪಿಕ್ಸ್​ನಿಂದ ಹೊರನಡೆದಿದ್ದಾರೆ ಎಂತಲೂ ಮಾಹಿತಿ ನೀಡಿದ್ದರು.

ಕೆಂಡ್ರಿಕ್ಸ್​ 2016ರ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಸಂಪಾದಿಸಿದ್ದರು. ಹಾಗೂ ವರ್ಲ್ಡ್​ ಚಾಂಪಿಯನ್​ಶಿಪ್​ನಲ್ಲಿ 2 ಬಾರಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...