alex Certify ಭಾರತಕ್ಕೆ ಮತ್ತೊಂದು ಪದಕದ ಭರವಸೆ ಮೂಡಿಸಿದ ಕಮಲ್​ಪ್ರೀತ್​ ಕೌರ್​ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತಕ್ಕೆ ಮತ್ತೊಂದು ಪದಕದ ಭರವಸೆ ಮೂಡಿಸಿದ ಕಮಲ್​ಪ್ರೀತ್​ ಕೌರ್​ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ

ಟೋಕಿಯೋ ಒಲಿಂಪಿಕ್​​ನಲ್ಲಿ ಚಕ್ರ ಎಸೆತ ವಿಭಾಗದಲ್ಲಿ ಅಂತಿಮ ಸುತ್ತು ಪ್ರವೇಶಿಸುವ ಮೂಲಕ ಭಾರತಕ್ಕೆ ಮತ್ತೊಂದು ಪದಕದ ಭರವಸೆ ಮೂಡಿಸಿದ್ದಾರೆ. ಕಮಲ್​ಪ್ರೀತ್​ ತಮ್ಮ ಮೂರನೇ ಪ್ರಯತ್ನದಲ್ಲಿ  ಮೀಟರ್​ ದೂರಕ್ಕೆ ಚಕ್ರ ಎಸೆತ ಮಾಡುವ ಮೂಲಕ ಫೈನಲ್​​ನಲ್ಲಿ ಜಾಗ ಸಂಪಾದಿಸಿದ್ದಾರೆ. ಕಮಲ್​ಜೀತ್​ ಫೈನಲ್​​ನಲ್ಲೂ ಇದೇ ಪ್ರದರ್ಶನ ನೀಡಿದ್ದಲ್ಲಿ ಅಥ್ಲೆಟಿಕ್​​ ವಿಭಾಗದಲ್ಲಿ ಪದಕ ಪಡೆದ ಮೊದಲ ಭಾರತೀಯ ಎಂಬ ಕೀರ್ತಿಗೆ ಭಾಜನರಾಗಲಿದ್ದಾರೆ. ಕಮಲ್​ಪ್ರೀತ್​ ಕೌರ್​​​ ಫೈನಲ್​ಗೆ ಆಯ್ಕೆಯಾದ ಬಳಿಕ ಭಾರತೀಯರಲ್ಲಿ ಮತ್ತೊಂದು ಪದಕದ ಭರವಸೆ ಹುಟ್ಟುಕೊಂಡಿದೆ.

ಯಾರು ಈ ಕಮಲ್​ಪ್ರೀತ್​ ಕೌರ್​..?

ಕಮಲ್​ಪ್ರೀತ್​ ಕೌರ್​ ಪಂಜಾಬ್​ನ ಶ್ರೀ ಮುಕ್ತಸರ್​​ ಸಾಹಿಬ್​ ಜಿಲ್ಲೆಯ ಬಾದಲ್​ ಗ್ರಾಮದ ನಿವಾಸಿಯಾಗಿದ್ದಾರೆ. ವ್ಯಾಸಂಗದಲ್ಲಿ ಹಿಂದಿದ್ದ ಕಮಲ್​ ಪ್ರೀತ್​​ ಕ್ರೀಡೆಯಲ್ಲಿ ಉತ್ತಮ ಆಸಕ್ತಿ ಹೊಂದಿದ್ದರು. ಒಂದು ದಿನ ಕಮಲ್​ಪ್ರೀತ್​ರ ಕೋಚ್​ ಅವರಿಗೆ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗಿಯಾಗುವಂತೆ ಹೇಳಿದ್ದರು. ಈ ಸ್ಪರ್ಧೆಯಲ್ಲಿ ಕಮಲ್​ಪ್ರೀತ್​ ಉತ್ತಮ ಪ್ರದರ್ಶನ ನೀಡುವ ಮೂಲಕ ನಾಲ್ಕನೇ ಸ್ಥಾನವನ್ನು ಸಂಪಾದಿಸಿದ್ದರು. ಓದಿನಲ್ಲಿ ತನಗೆ ಯಾವುದೇ ಸಾಧನೆ ಮಾಡೋದು ಸಾಧ್ಯವಿಲ್ಲ ಎಂಬುದು ಕಮಲ್​ಪ್ರೀತ್​ಗೆ ಅರಿವಿದ್ದ ಹಿನ್ನೆಲೆ ಅವರು ಕ್ರೀಡೆಯ ಕಡೆಗೆ ಹೆಚ್ಚಿನ ಗಮನ ನೀಡಲು ಶುರು ಮಾಡಿದ್ದರು. ಇದಾದ ಬಳಿಕ ಅವರು ಮೈದಾನಕ್ಕೆ ಇಳಿದು ತಮ್ಮ ಭವಿಷ್ಯ ಕಟ್ಟಿಕೊಳ್ಳಲು ಮುಂದಾದರು.

2014ರಿಂದ ಕಮಲ್​ಪ್ರೀತ್​ ಕ್ರೀಡೆಯನ್ನು ಗಂಭೀರವಾಗಿ ತೆಗೆದುಕೊಂಡರು. ಇವರ ಪ್ರಾಥಮಿಕ ತರಬೇತಿ ಅವರ ಗ್ರಾಮದಲ್ಲೇ ಇರುವ ಭಾರತೀಯ ಕ್ರೀಡಾ ಪ್ರಾಧಿಕಾರ ಕೇಂದ್ರದಲ್ಲಿ ನಡೆಯಿತು. ಕಮಲ್​ಪ್ರೀತ್​ ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯಿಂದ ಚಕ್ರ ಎಸೆತದ ಪ್ರ್ಯಾಕ್ಟಿಸ್​ ಮಾಡಲು ಆರಂಭಿಸಿದ್ರು. 2016ರಲ್ಲಿ ಅಂಡರ್​ 18 ಹಾಗೂ ಅಂಡರ್​ 20 ವಿಭಾಗದಲ್ಲಿ ಚಾಂಪಿಯನ್​ ಆಗಿ ಹೊರಹೊಮ್ಮಿದರು.

ಕಮಲ್​ ಪ್ರೀತ್​ ಹೆಸರಲ್ಲಿದೆ ಈ ದಾಖಲೆ :

2019ರಲ್ಲಿ ದೋಹಾದಲ್ಲಿ ನಡೆದ ಏಷಿಯನ್​ ಅಥ್ಲೆಟಿಕ್​​ ಚಾಂಪಿಯನ್​ಶಿಪ್​​ನಲ್ಲಿ ಕಮಲ್​ಪ್ರೀತ್​ 5ನೇ ಸ್ಥಾನವನ್ನು ಪಡೆದಿದ್ದರು. ಇವರು 65 ಮೀಟರ್​ ದೂರದಲ್ಲಿ ಚಕ್ರ ಎಸೆತ ಮಾಡಿದ್ದರು ಹಾಗೂ ಇಷ್ಟು ದೂರ ಚಕ್ರ ಎಸೆದ ಮೊದಲ ಮಹಿಳೆ ಎನಿಸಿಕೊಂಡರು. 2019ರಲ್ಲಿ 60.5  ಮೀಟರ್​ ಚಕ್ರ ಎಸೆತದಲ್ಲಿ ಚಿನ್ನದ ಪದಕ ಸಂಪಾದಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...