alex Certify ಅಪ್ಪನನ್ನು ಸ್ವಾಗತಿಸಲು ಓಡೋಡಿ ಬಂದ ಪುಟ್ಟ ಕಂದ..! ಭಾವುಕರಾಗಿ ಬಾಲ್ಯ ಸ್ಮರಿಸಿಕೊಂಡ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ಪನನ್ನು ಸ್ವಾಗತಿಸಲು ಓಡೋಡಿ ಬಂದ ಪುಟ್ಟ ಕಂದ..! ಭಾವುಕರಾಗಿ ಬಾಲ್ಯ ಸ್ಮರಿಸಿಕೊಂಡ ಜನ

ಅಮ್ಮ ಎಂದರೆ ಅಕ್ಕರೆ, ಪ್ರೀತಿ. ಅದೇ ರೀತಿ ಸಣ್ಣ ಮಕ್ಕಳಿಗೆ ಅಪ್ಪ ಎಂದರೆ ಕೌತುಕತೆಯ ಭಂಡಾರ. ಅವರು ಯಾವಾಗಲೂ ಹೊರಗಡೆ ಸುತ್ತುತ್ತಲೇ ಇರುತ್ತಾರೆ. ಕೇಳಿದ್ದನ್ನೆಲ್ಲ ಕೊಡಿಸುತ್ತಾರೆ ಎಂಬ ಅನುಭವವೇ ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೂ ಅಪ್ಪನ ಕಡೆಗೆ ಒಂದು ತರಹದ ವಿಶೇಷ ಸೆಳೆತವನ್ನು ಮೂಡಿಸಿರುತ್ತದೆ.

ಮಕ್ಕಳಿಗಾಗಿ ವಿಮೆ ಪಾಲಿಸಿ ತೆಗೆದುಕೊಳ್ಳುವ ಮುನ್ನ ಇದು ತಿಳಿದಿರಲಿ

ಬೆಳಗ್ಗೆ ತಿಂಡಿ ಮುಗಿಸಿ ಮನೆಯಿಂದ ಹೊರಬೀಳುವ ಅಪ್ಪ, ಸಂಜೆ ವೇಳೆ ಎಷ್ಟೊತ್ತಿಗೆ ಮನೆಗೆ ಹಿಂದಿರುಗುತ್ತಾರೋ ಎಂಬುದನ್ನೇ ಮಕ್ಕಳು ನಿರೀಕ್ಷೆ ಮಾಡುತ್ತಾ ಕೂತಿರುವ ಘಟನೆಗಳು ಹಲವು ಮನೆಗಳಲ್ಲಿ ಸಾಮಾನ್ಯವಾಗಿದೆ. ಅದರಲ್ಲೂ 1 ರಿಂದ 5 ವರ್ಷದ ಮಕ್ಕಳಿಗೆ ಅಪ್ಪನ ಬಗ್ಗೆ ಭಾರಿ ಪ್ರೀತಿ ಇರುತ್ತದೆ. ತಾವು ಹೊರ ಜಗತ್ತನ್ನು ಕಾಣಬೇಕು ಎಂಬ ದೊಡ್ಡ ಆಸೆಯನ್ನು ಬಹುತೇಕ ಪೂರೈಸಿ ಖುಷಿಪಡಿಸುವುದೇ ’ಅಪ್ಪ’ ಎಂದು ಸಣ್ಣ ಮಕ್ಕಳಿಗೆ ಚೆನ್ನಾಗಿ ಅರಿವಾಗಿರುತ್ತದೆ.

ಇಂಥದ್ದೇ ಒಂದು ಮಗುವಿನ ಆಪ್ತ ಕ್ಷಣಗಳನ್ನು ಅಮೆರಿಕದಲ್ಲಿ ತಾಯಿಯು ಸೆರೆ ಹಿಡಿದಿದ್ದಾರೆ. ಆ ವಿಡಿಯೊ ಟ್ವಿಟರ್‌ನಲ್ಲಿ ಭಾರಿ ವೈರಲ್‌ ಆಗಿದೆ. ಟ್ರಕ್‌ ಚಾಲಕನಾದ ತಂದೆ ಸಂಜೆ ವೇಳೆಗೆ ಟ್ರಕ್ ಚಲಾಯಿಸಿಕೊಂಡು ಮನೆಗೆ ಮರಳುತ್ತಾನೆ. ಆಗ ಟೋಪಿ ಧರಿಸಿದ ಸಣ್ಣ ಮಗುವು ಅಪ್ಪನ ಕಡೆಗೆ ಪುಟ್ಟ ಹೆಜ್ಜೆಗಳನ್ನು ಇರಿಸುತ್ತಾ ಮುದ್ದಾಗಿ ಓಡುತ್ತದೆ. ಅದಕ್ಕೆ ಚಂದ್ರನು ಕೈಗೆ ಸಿಕ್ಕಷ್ಟೇ ಖುಷಿ ಆಗಿರುತ್ತದೆ.

ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ʼಚಿಕನ್‌ʼ ಸರಿಯಿಲ್ಲವೆಂದ ಭೂಪ…!

‘ Buitengebieden ‘ ಟ್ವಿಟರ್‌ ಖಾತೆಯಲ್ಲಿ ಈ ವಿಡಿಯೋ ಇದೆ. ಡೈಪರ್‌ ತೊಟ್ಟ ಸಣ್ಣ ಪೋರ ಓಡುತ್ತಾ ತಾನು ಧರಿಸಿರುವ ಕ್ಯಾಪ್‌ ಬಿಸಾಡುವುದೇ ನೋಡಲು ಚೆಂದ. ಮಗ ಬಂದನೆಂದು ಖುಷಿಯಿಂದ ತಂದೆಯು ಬಾಗಿ ಅಪ್ಪಿಕೊಂಡು ಎತ್ತಿಕೊಳ್ಳುತ್ತಾರೆ.‌

ಈ ವಿಡಿಯೊಗೆ ’ಡ್ಯಾಡಿ ಮನೆಗೆ ಬಂದಾಗ…..’ ಎಂಬ ಅಡಿಬರಹ ಕೂಡ ಕೊಡಲಾಗಿದೆ. ಇದನ್ನು ಸಾವಿರಾರು ಮಂದಿ ಟ್ವೀಟಿಗರು ವೀಕ್ಷಿಸಿದ್ದು, ತಮ್ಮ ಸಣ್ಣ ವಯಸ್ಸಿನ ತಂದೆಯೊಂದಿಗಿನ ಬಾಂಧವ್ಯವನ್ನು ಮೆಲುಕು ಹಾಕಿದ್ದಾರೆ. ತಂದೆ ಆಗುವ ವರದಾನ ನೀಡಿದ ದೇವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಎಂದು ಅನೇಕ ಟ್ವೀಟಿಗರು ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...