alex Certify ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ʼಚಿಕನ್‌ʼ ಸರಿಯಿಲ್ಲವೆಂದ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ʼಚಿಕನ್‌ʼ ಸರಿಯಿಲ್ಲವೆಂದ ಭೂಪ…!

ಪೊಲೀಸ್ ತುರ್ತು ಸಂಪರ್ಕಕ್ಕೆಂದು ಇರುವ ಸಹಾಯವಾಣಿಗಳಿಗೆ ತಲೆಹರಟೆ ಕರೆಗಳು ಬರುವುದು ಜಗತ್ತಿನೆಲ್ಲಡೆ ಸರ್ವೇ ಸಾಮಾನ್ಯ.

ಇದೇ ಕಾರಣಕ್ಕೆ ಸಹಾಯವಾಣಿಗೆ ಕರೆ ನೀಡುವ ಮುನ್ನ ಸಾರ್ವಜನಿಕರು ವಿವೇಚನೆಯಿಂದ ಯೋಚಿಸಬೇಕೆಂದು ಪೊಲೀಸರು ಬಹಳಷ್ಟು ಅಭಿಯಾನಗಳನ್ನೂ ಹಮ್ಮಿಕೊಳ್ಳುತ್ತಾರೆ. ಆದರೆ ಈ ಎಲ್ಲಾ ಅಭಿಯಾನಗಳ ಹೊರತಾಗಿಯೂ, ಕೆಲವೊಂದು ಕರೆದಾರರು ’ತುರ್ತು’ ಪದವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಈ ಚಾಳಿ ಎಲ್ಲಾ ದೇಶಗಳಲ್ಲೂ ಇದೆ.

ವೈಷ್ಣೋದೇವಿ ಮಂದಿರಕ್ಕೆ ಭೇಟಿ ನೀಡುವ ಭಕ್ತರಿಗೆ IRCTC ಯಿಂದ ಗುಡ್‌ ನ್ಯೂಸ್

ಇಂಥದ್ದೇ ನಿದರ್ಶನವೊಂದರಲ್ಲಿ ಬ್ರಿಟನ್‌‌ನ ಥೇಮ್ಸ್‌ ವ್ಯಾಲಿ ಪೊಲೀಸ್ ಠಾಣೆಯೊಂದಕ್ಕೆ ಕರೆ ಮಾಡಿದ ತಲೆಹರಟೆ ವ್ಯಕ್ತಿಯೊಬ್ಬ ಸ್ಟೋರ್‌ ಒಂದರಲ್ಲಿ ತಾನು ಖರೀದಿ ಮಾಡಿದ ಚಿಕನ್‌ ಕೊಳೆತು ಹೋಗಿದ್ದು, ಈ ವಿಚಾರವಾಗಿ ಸಹಾಯ ಮಾಡಿ ಎಂದು ಕೋರಿದ್ದಾನೆ.

“ಬ್ಯಾಗ್‌ ಅನ್ನು ತೆರೆಯದೇ ಚಿಕನ್‌ ಅನ್ನು ನೇರವಾಗಿ ಫ್ರಿಡ್ಜ್‌ನಲ್ಲಿ ಇಟ್ಟೆ. ತೆರೆದು ನೋಡಿದಾಗ ಅದರಿಂದ ಹೊಮ್ಮಿದ ವಾಸನೆ ಬಹಳ ಕೆಟ್ಟದಾಗಿತ್ತು. ಅದು ಕೊಳೆತುಹೋಗಿತ್ತು. ಅದರಲ್ಲಿ ಏನು ಮಾಡಬೇಕೆಂದು ನನಗೆ ಗೊತ್ತಿಲ್ಲ. ನೀವು ನನಗೆ ಸಲಹೆ ನೀಡುವಿರಾ? ಸೂಪರ್‌ ಮಾರ್ಕೆಟ್‌ಗೆ ಕರೆ ಮಾಡಿ ನನಗೆ ಫ್ರೆಶ್ ಆಗಿರುವ ಕೋಳಿ ಕಳುಹಿಸಿ ಎಂದು ಕೋರಿದ್ದೇನೆ” ಎಂದು ಈತ ಕ್ಲಿಪ್‌ನಲ್ಲಿ ಹೇಳುತ್ತಿರುವುದನ್ನು ಕೇಳಿಸಿಕೊಳ್ಳಬಹುದಾಗಿದೆ.

ಪತ್ನಿಯ ಬಿಕಿನಿ ಫೋಟೋ ಸೆರೆ ಹಿಡಿದ ಆಯುಷ್ಮಾನ್ ಖುರಾನಾ

999 ಸಹಾಯವಾಣಿ ನಿರ್ವಾಹಕ ಈತನಿಗೆ ಬಹಳ ತಾಳ್ಮೆಯಿಂದಲೇ ಉತ್ತರಿಸಿ, ಈ ವಿಚಾರವು ಆತ ಹಾಗೂ ಸೂಪರ್‌ಮಾರ್ಕೆಟ್‌ಗೆ ಬಿಟ್ಟ ವಿಷಯವಾಗಿದೆ ಎಂದು ಹೇಳಿದರೂ ಸಹ ಈ ವ್ಯಕ್ತಿ ತನ್ನ ದೂರನ್ನು ನಿಲ್ಲಿಸುವಂತೆ ಕಾಣಲಿಲ್ಲ.

“ಸದ್ಯದ ಮಟ್ಟಿಗೆ ನಾವು ಅಪರಾಧಗಳ ಕುರಿತಂತೆ ಡೀಲಿಂಗ್ ಮಾಡುತ್ತಿದ್ದೇವೆ. ಕೊಳೆತ ಚಿಕನ್‌ ಅನ್ನು ಬಂದು ಸಂಗ್ರಹಿಸುವುದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ,” ಎಂದಿದ್ದಾರೆ. ಈ ಕರೆಯ ಆಡಿಯೋ ತುಣುಕನ್ನು ಆನ್ಲೈನ್‌ನಲ್ಲಿ ಶೇರ್‌ ಮಾಡಲಾಗಿದ್ದು, ಸಾವಿರಾರು ಪ್ರತಿಕ್ರಿಯೆಗಳನ್ನು ಪಡೆದಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...