alex Certify ಮದ್ಯ ಸಮರ್ಪಿಸದಿದ್ದರೆ ನಿಲ್ಲುವುದಿಲ್ಲ ರಾವಣನ ಪ್ರತಿಕೃತಿ….! ಮೀರತ್‌ ನಲ್ಲೊಂದು ವಿಚಿತ್ರ ಆಚರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯ ಸಮರ್ಪಿಸದಿದ್ದರೆ ನಿಲ್ಲುವುದಿಲ್ಲ ರಾವಣನ ಪ್ರತಿಕೃತಿ….! ಮೀರತ್‌ ನಲ್ಲೊಂದು ವಿಚಿತ್ರ ಆಚರಣೆ

ಇನ್ನೇನು ವಿಜಯದಶಮಿ ಹಬ್ಬ ಸಮೀಪಿಸಿದೆ. ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ದೇಶಾದ್ಯಂತ ಸಿದ್ಧತೆಗಳು ಭರದಿಂದ ಸಾಗಿವೆ. ವಿಜಯದಶಮಿಯಂದು ದಹನಕ್ಕಾಗಿ ರಾವಣ, ಕುಂಭಕರ್ಣರ ಮತ್ತು ಮೇಘನಾದನ ಪ್ರತಿಕೃತಿಗಳನ್ನು ಸಿದ್ಧಪಡಿಸುವಲ್ಲಿ ಕಲಾವಿದರು ನಿರತರಾಗಿದ್ದಾರೆ.

ಮೀರತ್​ನ ಭೆೈಂಸಾಲಿ ಮೈದಾನವು ಪ್ರತಿ ವರ್ಷ ಹಬ್ಬದ ಸಂದರ್ಭದಲ್ಲಿ ಒಂದು ವಿಚಿತ್ರ ದೃಶ್ಯಕ್ಕೆ ಸಾಕ್ಷಿಯಾಗುತ್ತದೆ. ಈ ವಿಚಿತ್ರ ಆಚರಣೆಯಲ್ಲಿ, ಸಂಘಟಕರು ರಾವಣನ ಪ್ರತಿಕೃತಿಯನ್ನು ನಿಲ್ಲುವಂತೆ ಮಾಡಲು ಅದರ ಪಾದಗಳಿಗೆ ಮದ್ಯ ಸ್ಪರ್ಶಿಸಬೇಕು, ಇಲ್ಲದಿದ್ದರೆ, ಬೀಳುತ್ತದೆ ಎಂದು ಹೇಳಲಾಗುತ್ತದೆ.

ಈ ಪರಂಪರೆ ಹಲವು ವರ್ಷಗಳಿಂದ ನಡೆಯುತ್ತಿದೆ ಎಂದು ಸಂಘಟಕರು ಹೇಳುತ್ತಾರೆ. ಮದ್ಯ ನೀಡದಿದ್ದರೆ ರಾವಣನ ಪ್ರತಿಮೆ ಬೀಳುತ್ತದೆ ಎಂದು ಸಮಿತಿಯ ಅಧ್ಯಕ್ಷ ಪವನ್​ ಗಾರ್ಗ್​ ಅವರೇ ಹೇಳಿದ್ದಾರೆ.

ರಾವಣ ಅಸುರೀ ಶಕ್ತಿಯ ಸಂಕೇತ ಎಂದು ಅವರು ಹೇಳುತ್ತಾರೆ, ಆದ್ದರಿಂದ ಮದ್ಯವನ್ನು ನೀಡುವ ಈ ಆಚರಣೆಯನ್ನು ಮುಂದುವರಿಸಬೇಕು ಎಂಬುದು ಅವರ ಅಭಿಪ್ರಾಯ.

1959 ರಿಂದ ಇಲ್ಲಿ ರಾಮಲೀಲಾವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ ಮತ್ತು ದಸರಾದಂದು ಭವ್ಯವಾದ ಜಾತ್ರೆಯನ್ನು ನಡೆಸಲಾಗುತ್ತದೆ. ಸಂಪ್ರದಾಯದಂತೆ ರಾವಣನ ದಹನವನ್ನು ದಸರಾ ದಿನದಂದು ಮಾಡಲಾಗುತ್ತದೆ. ಸಮಿತಿಯಿಂದ ಮದ್ಯ ನೀಡದೇ ಮೂರ್ತಿ ಪ್ರತಿಷ್ಠಾಪಿಸುವ ಪ್ರಯತ್ನವೂ ಒಂದೆರಡು ಬಾರಿ ನಡೆದಿತ್ತು. ಪ್ರತಿ ಬಾರಿಯೂ ಅದು ಬಿದ್ದಿತ್ತು ಎಂದು ಸಂಸ್ಥೆ ಹೇಳಿಕೊಂಡಿದೆ. ಇದರಿಂದ ಸಂಸ್ಥೆಗೆ ಸಂಬಂಧಿಸಿದವರಿಗೆ ಸಾಕಷ್ಟು ತೊಂದರೆಯೂ ಕೂಡ ಆಗಿದೆ. ಹಾಗಾಗಿ ಪ್ರತಿ ಬಾರಿ ವಿಜಯದಶಮಿ ಹಬ್ಬದಂದು ಮೂರ್ತಿಗೆ ಮದ್ಯವನ್ನು ಅರ್ಪಿಸಲಾಗುತ್ತದೆ.

ರಾವಣನ ಪ್ರತಿಕೃತಿ ದಹನಕ್ಕೆ ಹೈಟೆಕ್​ ಸಿದ್ಧತೆಗಳನ್ನು ಸಹ ಮಾಡಲಾಗುತ್ತಿದೆ, ಅಲ್ಲಿ ರಾವಣ ಮತ್ತು ರಾಮನ ನಡುವಿನ ಯುದ್ಧವನ್ನು ಡ್ರೋನ್​ಗಳ ಮೂಲಕ ತೋರಿಸಲಾಗುತ್ತದೆ. ರಾಮನು ರಾವಣನ ಪ್ರತಿಕೃತಿಗಳನ್ನು ಮತ್ತು ಇತರ “ಕೆಟ್ಟತನದ ಚಿಹ್ನೆಗಳನ್ನು” ರಿಮೋಟ್​ ಬಳಸಿ ಸುಡುವಂತೆ ವ್ಯವಸ್ಥೆ ಮಾಡಿರುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...