alex Certify ರಾಜ್ಯದಲ್ಲಿ ಈವರೆಗೆ 35 ಕೋಟಿ ರೂ. ನಗದು ಸೇರಿ 262 ಕೋಟಿ ರೂ. ಮೊತ್ತದ ಚುನಾವಣಾ ಅಕ್ರಮ ವಸ್ತು ಜಪ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದಲ್ಲಿ ಈವರೆಗೆ 35 ಕೋಟಿ ರೂ. ನಗದು ಸೇರಿ 262 ಕೋಟಿ ರೂ. ಮೊತ್ತದ ಚುನಾವಣಾ ಅಕ್ರಮ ವಸ್ತು ಜಪ್ತಿ

ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ವಿವಿಧ ತನಿಖಾ ತಂಡಗಳು ಇದುವರೆಗೆ 262 ಕೋಟಿ ರೂ. ಮೊತ್ತದ ಅಕ್ರಮ ವಸ್ತು ಜಪ್ತಿ ಮಾಡಿವೆ.

35 ಕೋಟಿ ರೂಪಾಯಿ ನಗದು ಸೇರಿ 262 ಕೋಟಿ ರೂ. ಮೊತ್ತದ ವಿವಿಧ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. 133 ಕೋಟಿ ರೂಪಾಯಿ ಮೌಲ್ಯದ ಮದ್ಯ, 5.48 ಕೋಟಿ ರೂ ಮೌಲ್ಯದ ಮಾದಕ ವಸ್ತು, 9.49 ಕೋಟಿ ರೂ. ಮೌಲ್ಯದ 16 ಕೆಜಿ ಚಿನ್ನ, 27 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ಜಪ್ತಿ ಮಾಡಲಾಗಿದೆ.

ನಗದು, ಮದ್ಯ ಸೇರಿ ವಶಪಡಿಸಿಕೊಂಡ ವಿವಿಧ ವಸ್ತುಗಳ ಪ್ರಕರಣಗಳಿಗೆ ಸಂಬಂಧಿಸಿದಂತೆ 1337 ಎಫ್ಐಆರ್ ದಾಖಲಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿಯಿಂದ ಮಾಹಿತಿ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...