alex Certify ಸಸ್ಯಹಾರಿಗಳ ಮೂಳೆ ಬೆಳವಣಿಗೆಗೆ ನೆರವಾಗುತ್ತೆ ಈ ಆಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಸ್ಯಹಾರಿಗಳ ಮೂಳೆ ಬೆಳವಣಿಗೆಗೆ ನೆರವಾಗುತ್ತೆ ಈ ಆಹಾರ

ಮಾಂಸಹಾರ ಸೇವನೆಯಿಂದ ಮೂಳೆಗಳ ಬೆಳವಣೆಗೆ ಉತ್ತಮವಾಗಿರುತ್ತದೆ. ಆದರೆ ಸಸ್ಯಹಾರ ಸೇವಿಸುವವರಿಗೆ ಸರಿಯಾದ ಪ್ರಮಾಣದ ಜೀವಸತ್ವಗಳು ಮತ್ತು ಕ್ಯಾಲ್ಸಿಯಂ ಸಿಗುವುದಿಲ್ಲ ಎನ್ನುತ್ತಾರೆ. ಹಾಗಾಗಿ ಸಸ್ಯಹಾರಿಗಳು ಈ ಆಹಾರಗಳನ್ನು ಸೇವಿಸುವುದರಿಂದ ಮೂಳೆಗಳು ಉತ್ತಮವಾಗಿ ಬೆಳೆಯುತ್ತದೆ.

*ನೆಲ್ಲಿಕಾಯಿ : ಇದರಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಸಿ ಅಧಿಕವಾಗಿರುತ್ತದೆ. ಹಾಗಾಗಿ ಇದನ್ನು ಸೇವಿಸಿದರೆ ಮೂಳೆಗಳು ಬಲವಾಗುತ್ತದೆ.

*ಅಂಜೂರ : ಅಂಜೂರದಲ್ಲಿರುವ ಜೀವಸತ್ವಗಳು ಮತ್ತು ಕ್ಯಾಲ್ಸಿಯಂ ಮೂಳೆಗಳ ಬೆಳವಣೆಗೆಗೆ ಸಹಕಾರಿ. ಹಾಗಾಗಿ ಇದನ್ನು ಸೇವಿಸಿದರೆ ಮೂಳೆಗಳ ಬೆಳವಣಿಗೆಯ ಜೊತೆಗೆ ರಕ್ತ ಹೀನತೆ, ಜೀರ್ಣಾಂಗ ವ್ಯವಸ್ಥೆ ಉತ್ತಮವಾಗಿರುತ್ತದೆ.

*ಬಾದಾಮಿ : ಬಾದಾಮಿಯಲ್ಲಿ ಕ್ಯಾಲ್ಸಿಯಂ, ವಿಟಮಿನ್ ಇ ಮತ್ತು ಪ್ರೋಟೀನ್ ಸಮೃದ್ಧವಾಗಿರುತ್ತದೆ. ಬೆಳಿಗ್ಗೆ 5-6 ಬಾದಾಮಿಯನ್ನು ನೆನೆಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಮೂಳೆಗಳ ಬೆಳವಣೆಗೆಗೆ ಬೇಕಾದ ಕ್ಯಾಲ್ಸಿಯಂ ಸಿಗುತ್ತದೆ.

*ಸೀತಾಫಲ : ಈ ಹಣ್ಣಿನಲ್ಲಿ ಕ್ಯಾಲ್ಸಿಯಂ ಉತ್ತಮ ಪ್ರಮಾಣದಲ್ಲಿರುತ್ತದೆ. ಇದು ಮೂಳೆಗಳ ಬೆಳವಣೆಗೆಯನ್ನು ಬಲಪಡಿಸುತ್ತದೆ. ವಿಟಮಿನ್ ಡಿ ಕೊರತೆಯನ್ನು ನಿವಾರಿಸುತ್ತದೆ.

*ಸೋಯಾಬೀನ್ : ಸೋಯಾ ಬೀನ್ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ನ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ. ಇದನ್ನು ಪ್ರತಿದಿನ ಸೇವಿಸಿದರೆ ಅದು ಮೂಳೆಗಳನ್ನು ಬಲಪಡಿಸುತ್ತದೆ. ಪ್ರೋಟೀನ್ ಮೆದುಳಿನ ವೇಗವನ್ನು ಹೆಚ್ಚಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...