alex Certify ಏಕಕಾಲದಲ್ಲಿ ಮೂರು ಕಂಪನಿಗಳಿಗೆ ಕೆಲಸ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏಕಕಾಲದಲ್ಲಿ ಮೂರು ಕಂಪನಿಗಳಿಗೆ ಕೆಲಸ…!

ಭಾರತದಲ್ಲಿ ಸ್ಟಾರ್ಟ್​ ಅಪ್​ ವಲಯವು ಹೊಸ ಹೊಸ ಅವಕಾಶ ಸೃಷ್ಟಿಸುತ್ತಿರುವಂತೆ ಜನರಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ಉದ್ಯೋಗ ಕ್ಷೇತ್ರದಲ್ಲಂತೂ ಜನರು ಒಂದಕ್ಕಿಂತ ಹೆಚ್ಚು ಆಯ್ಕೆ ಕಂಡುಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಚೆನ್ನೈ ನಿವಾಸಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದು, ಶ್ವೇತಾ ಶಂಕರ್​ ರಾಪಿಡೋ ಬೈಕ್​ ಟ್ಯಾಕ್ಸಿ ಅಪ್ಲಿಕೇಶನ್​ ಮೂಲಕ ಸವಾರಿ ಮಾಡಿದ್ದರು.

ಆಕೆಯ ರ್ಯಾಪಿಡೋ ಚಾಲಕ ಸ್ವಿಗ್ಗಿ ಸಮವಸ್ತ್ರವನ್ನು ಧರಿಸಿದ್ದು ಹಾಗೆಯೇ, ಡಂಜೊ ಕಂಪನಿಗೆ ಸೇರಿದ ಬ್ಯಾಗ್​ ಹೊಂದಿದ್ದನು. ಶ್ವೇತಾ ಶಂಕರ್​ ಪ್ರಾಥಮಿಕವಾಗಿ ರ್ಯಾಪಿಡೋಗಾಗಿ ಕೆಲಸ ಮಾಡುತ್ತಿರುವ ವ್ಯಕ್ತಿಯನ್ನು ಭೇಟಿಯಾಗಿದ್ದು ಆದರೆ, ಆಹಾರ ಮತ್ತು ದಿನಸಿ ವಿತರಣೆಯನ್ನು ಒಳಗೊಂಡಿರುವ ಸೇವೆಯನ್ನೂ ಗಮನಿಸಿದ್ದಾರೆ.

ತನ್ನ ಅನುಭವವನ್ನು ಹಂಚಿಕೊಂಡ ಶ್ವೇತಾ ಶಂಕರ್​, ನಿನ್ನೆ ರಾಪಿಡೊ ರೈಡ್ ತೆಗೆದುಕೊಂಡಿದ್ದೇನೆ. ಮತ್ತು ಚಾಲಕ, ಸ್ವಿಗ್ಗಿ ಸಮವಸ್ತ್ರವನ್ನು ಧರಿಸಿ ಡಂಜೊ ಬ್ಯಾಗ್​ ಅನ್ನು ಹೊತ್ತೊಯ್ಯುವುದನ್ನು ನೋಡಿದೆ. ಅವರು ಒಂದೇ ಸಮಯದಲ್ಲಿ ಮೂರು ವಿಭಿನ್ನ ಭಾರತೀಯ ಸ್ಟಾರ್ಟ್​- ಅಪ್​ಗಳಲ್ಲಿ ಕೆಲಸ ಮಾಡುತ್ತಿದ್ದು. ಸ್ಮಾರ್ಟ್​ ಜನರು ಹೇಗೆ ಕೆಲಸ ಮಾಡುತ್ತಾರೆ ಎಂಬುದಕ್ಕೆ ಒಂದು ಶ್ರೇಷ್ಠ ಉದಾಹರಣೆ ಎಂದಿದ್ದಾರೆ. ಇದನ್ನು ಕಂಡ ನೆಟ್ಟಿಗರು ಅಭಿಪ್ರಾಯ ನೀಡಿದ್ದಾರೆ.

ಆತ ನಿಜವಾಗಿಯೂ ಲವ್​ ಟ್ರಯಾಂಗಲ್​ ಎಂದು ಒಬ್ಬರು ವ್ಯಾಖ್ಯಾನಿಸಿದರೆ, ಸ್ಮಾರ್ಟ್​ ಕೆಲಸಕ್ಕಿಂತ ಹೆಚ್ಚಾಗಿ ಇದು ಸಮಯದ ಅವಶ್ಯಕತೆಯಾಗಿದೆ. ಅಂತಹವರಿಗೆ ನೀಡುವ ವೇತನವು ಕಡಿಮೆಯಾಗಿದೆ. ಮತ್ತು ಕುಟುಂಬಕ್ಕಾಗಿ ಈ ರೀತಿ ಕೆಲಸ ಮಾಡುತ್ತಾರೆ. ಅವರಿಗೆ ಗೌರವ ಸಲ್ಲಿಸುವುದಾಗಿ ಮತ್ತೊಬ್ಬರು ಕಾಮೆಂಟ್​ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...