alex Certify ಕುತೂಹಲ ಮೂಡಿಸುತ್ತೆ 80ರ ಹರೆಯದ ವೃದ್ಧನ ವಿಶೇಷ ಸ್ನೇಹದ ಕತೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುತೂಹಲ ಮೂಡಿಸುತ್ತೆ 80ರ ಹರೆಯದ ವೃದ್ಧನ ವಿಶೇಷ ಸ್ನೇಹದ ಕತೆ..!

ಸ್ನೇಹಿತರು ಇಲ್ಲ ಅಂದರೆ ಜೀವನದಲ್ಲಿ ಮಜವೇ ಇರೋದಿಲ್ಲ. ಸಂತೋಷಕ್ಕೆ, ದುಃಖಕ್ಕೆ ಹೀಗೆ ನಮ್ಮ ಭಾವನೆಯನ್ನ ಹಂಚಿಕೊಳ್ಳೋಕೆ ಸ್ನೇಹಿತರು ಬೇಕೆ ಬೇಕು. ಅದೇ ರೀತಿ ಫ್ರೆಂಚ್​ 80 ವರ್ಷದ ವೃದ್ಧ ಕೂಡ ವಿಶೇಷ ಸ್ನೇಹಿತನನ್ನ ಹೊಂದಿದ್ದು ಇದೇ ಕಾರಣಕ್ಕೆ ಸೋಶಿಯಲ್​ ಮೀಡಿಯಾದಲ್ಲಿ ಸದ್ದು ಮಾಡ್ತಿದ್ದಾರೆ.

ಫ್ರೆಂಚ್​ ವಾಯುವ್ಯ ಪ್ರದೇಶದ ಬ್ರಿಟಾನಿಯಿಂದ ನಿವೃತ್ತರಾದ ಬೌಗೆಟ್​ ಹಕ್ಕಿ ಮರಿಯೊಂದಿಗೆ ಸ್ನೇಹ ಬೆಳೆಸಿದ್ದರು. ಇವರಿಬ್ಬರ ಸ್ನೇಹ ಇದೀಗ ಎಷ್ಟರ ಮಟ್ಟಿಗೆ ಗಾಢವಾಗಿದೆ ಎಂದರೆ ಬೌಗೆಟ್​ ಸೈಕಲ್​ನಲ್ಲಿ ಸವಾರಿ ಮಾಡುವಾಗ, ಹೊರಗಡೆ ಹೋಗುವಾಗ, ಉದ್ಯಾನದಲ್ಲಿ ನೀರು ಹಾಕುವಾಗ ಹೀಗೆ ಪ್ರತಿ ಕೆಲಸ ಮಾಡುವಾಗಲೂ ಪಾರಿವಾಳವನ್ನ ಹೆಗಲ ಮೇಲೆಯೇ ಕೂರಿಸಿಕೊಂಡಿರ್ತಾರೆ.

ಬೆಕ್ಕಿನಿಂದ ರಕ್ಷಿಸಿಕೊಳ್ಳಲು ಯತ್ನಿಸುತ್ತಿದ್ದ ಈ ಪುಟ್ಟ ಪಾರಿವಾಳ ಬೌಗೆಟ್​ನ ಕಣ್ಣಿಗೆ ಬಿದ್ದಿತ್ತು. ಅಲ್ಲಿಂದ ಶುರುವಾದ ಇವರ ಸ್ನೇಹ ಇದೀಗ ಒಬ್ಬರನ್ನ ಬಿಟ್ಟು ಇನ್ನೊಬ್ಬರಿಗೆ ಇರಲಾರದ ಮಟ್ಟಿಗೆ ಬೆಳೆದಿದೆ. ಇವರಿಬ್ಬರ ಸ್ನೇಹದ ಕತೆ ಇದೀಗ ಸೋಶಿಯಲ್​ ಮೀಡಿಯಾದಲ್ಲೂ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...