alex Certify ಪಾರಿವಾಳಗಳು ಬಾಲ್ಕನಿಯಲ್ಲಿ ಗಲೀಜು ಮಾಡುವುದನ್ನು ತಡೆಯಲು ಫಾಲೋ ಮಾಡಿ ಈ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾರಿವಾಳಗಳು ಬಾಲ್ಕನಿಯಲ್ಲಿ ಗಲೀಜು ಮಾಡುವುದನ್ನು ತಡೆಯಲು ಫಾಲೋ ಮಾಡಿ ಈ ಟಿಪ್ಸ್

ಹೆಚ್ಚಾಗಿ ಪಾರಿವಾಳಗಳು ಮನೆಗಳ ಮಹಡಿಯ ಮೇಲೆ ಅಥವಾ ಬಾಲ್ಕನಿಯಲ್ಲಿ ಬಂದು ಕುಳಿತುಕೊಳ್ಳುತ್ತವೆ. ಹಾಗೇ ಅಲ್ಲಿ ಗಲೀಜು ಮಾಡಿ ಆ ಸ್ಥಳವನ್ನು ಹಾಳು ಮಾಡುತ್ತವೆ. ಅವುಗಳನ್ನು ಎಷ್ಟು ಬಾರಿ ಓಡಿಸಿದರೂ ಅವು ಮತ್ತೆ ಬರುತ್ತಿರುತ್ತವೆ. ಈ ಪಾರಿವಾಳಗಳು ಬರದಂತೆ ತಡೆಯಲು ಈ ಟಿಪ್ಸ್ ಫಾಲೋ ಮಾಡಿ.

*ಪಾರಿವಾಳಗಳು ಬರದಂತೆ ತಡೆಯಲು ವೈನ್ ಮತ್ತು ದಾಲ್ಚಿನ್ನಿಯನ್ನು ಬಳಸಬಹುದು. ನೀರು, ವೈನ್ ಮತ್ತು ದಾಲ್ಚಿನ್ನಿ ಪುಡಿಯನ್ನು ಒಂದು ಪಾತ್ರೆಯಲ್ಲಿ ಬೆರೆಸಿ ಪಾರಿವಾಳಗಳು ಬರುವ ಸ್ಥಳದಲ್ಲಿ ಸಿಂಪಡಿಸಿ. ಅದರ ವಾಸನೆಗೆ ಪಾರಿವಾಳಗಳು ಆ ಕಡೆ ಸುಳಿಯುವುದಿಲ್ಲ.

*ಕರಿಮೆಣಸು ಅಥವಾ ಕೆಂಪು ಮೆಣಸಿನಕಾಯಿ ಪುಡಿಯನ್ನು ನೀರಿನಲ್ಲಿ ಬೆರೆಸಿ ಸಿಂಪಡಿಸಿ. ಅಥವಾ ಕರಿಮೆಣಸು ಮತ್ತು ಕೆಂಪು ಮೆಣಸಿನಕಾಯಿ ಪುಡಿ ಎರಡು ಒಟ್ಟಿಗೆ ಬೆರೆಸಿ ಸಿಂಪಡಿಸಬಹುದು. ಅದರಿಂದ ಅದರ ವಾಸನೆ ಹಾಗೇ ಖಾರಕ್ಕೆ ಪಾರಿವಾಳಗಳು ಆ ಕಡೆ ಸುಳಿಯುವುದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...