alex Certify BIG NEWS:‌ ಮತ್ತೆ ಶುರುವಾಗಿದೆ ಕೋವಿಡ್ ಆರ್ಭಟ; ಅಮೆರಿಕ – ಬ್ರಿಟನ್‌ನಲ್ಲಿ ಹೊಸ ರೂಪಾಂತರಿ ಸೋಂಕು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS:‌ ಮತ್ತೆ ಶುರುವಾಗಿದೆ ಕೋವಿಡ್ ಆರ್ಭಟ; ಅಮೆರಿಕ – ಬ್ರಿಟನ್‌ನಲ್ಲಿ ಹೊಸ ರೂಪಾಂತರಿ ಸೋಂಕು…!

ಕೊರೊನಾ ಸಾಂಕ್ರಾಮಿಕದಿಂದ ಇಡೀ ಜಗತ್ತು ಸಂಪೂರ್ಣ ಚೇತರಿಸಿಕೊಂಡಿದೆ ಎಂದುಕೊಳ್ಳುವಷ್ಟರಲ್ಲಿ ಹೊಸ ಕೋವಿಡ್ ರೂಪಾಂತರಗಳು ಹುಟ್ಟಿಕೊಳ್ಳುತ್ತಲೇ ಇವೆ. ಓಮಿಕ್ರಾನ್‌ನ ಎರಡೂ ಉಪ-ರೂಪಾಂತರಗಳು ಸಣ್ಣ ವಿರಾಮದ ನಂತರ ಮತ್ತೆ ಸೋಂಕನ್ನು ಹರಡಲಾರಂಭಿಸಿವೆ. ಎರಿಸ್ ಎಂದು ಅಡ್ಡಹೆಸರು ಹೊಂದಿರುವ EG.5 ಅಮೆರಿಕದಲ್ಲಿ ಸಕ್ರಿಯವಾಗಿದೆ. ಒಟ್ಟು COVID ಪ್ರಕರಣಗಳಲ್ಲಿ ಇದರ ಪಾಲು ಶೇ.17ರಷ್ಟಿದೆ.

ಬ್ರಿಟನ್‌ನಲ್ಲಿ ಈ ರೂಪಾಂತರವು ವೇಗವಾಗಿ ಹರಡುತ್ತಿದೆ. ಈ ಮಧ್ಯೆ BA.2.86, BA.X ಎಂದು ಹೆಸರಿಸಲಾಗಿರುವ ಕೋವಿಡ್‌ ರೂಪಾಂತರಿಯನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಗುರುತಿಸಿದೆ. ಇದರ ಮೇಲೆ ಕಣ್ಣಿಟ್ಟಿದೆ.

COVID ರೋಗಲಕ್ಷಣಗಳಲ್ಲಿ ಬದಲಾವಣೆ ? 

ಸದ್ಯಕ್ಕೆ COVID ರೋಗಲಕ್ಷಣಗಳ ಪ್ರಕಾರ ಮತ್ತು ಮಾದರಿಯಲ್ಲಿ ಯಾವುದೇ ಹೊಸ ಬದಲಾವಣೆ ಕಂಡುಬರುತ್ತಿಲ್ಲ. ಆದಾಗ್ಯೂ, ಆರೋಗ್ಯ ತಜ್ಞರು ಜನರು ಕೋವಿಡ್‌ನ ಸಾಮಾನ್ಯ ಲಕ್ಷಣಗಳ ಬಗ್ಗೆ ಕಾಳಜಿ ವಹಿಸುವಂತೆ ಸೂಚಿಸಿದ್ದಾರೆ. ಸೋಂಕಿನ ಲಕ್ಷಣಗಳಿದ್ದರೆ ಕೂಡಲೇ ಪರೀಕ್ಷಿಸಿಕೊಳ್ಳಬೇಕು, ಆದಷ್ಟು ಬೇಗ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.

ಕೋವಿಡ್‌ನ ಲಕ್ಷಣಗಳು

COVID ರೋಗಲಕ್ಷಣಗಳ ಮಾದರಿಯು ಹಿಂದಿನ ತಳಿಗಳ ಸಮಯದಲ್ಲಿ ಕಂಡುಬಂದಂತೆಯೇ ಇರುತ್ತದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಇಲ್ಲಿಯವರೆಗೆ ಎರಿಸ್ ರೋಗಲಕ್ಷಣಗಳು ಕೂಡ ಅದೇ ತೆರನಾಗಿವೆ. ಜ್ವರ ಅಥವಾ ಶೀತ, ಕೆಮ್ಮು, ಉಸಿರಾಟದ ತೊಂದರೆ, ಆಯಾಸ, ಸ್ನಾಯು ಅಥವಾ ದೇಹದ ನೋವು, ತಲೆನೋವು, ರುಚಿ ಅಥವಾ ವಾಸನೆಯ ನಷ್ಟ, ಗಂಟಲು ನೋವು, ಮೂಗಿನಲ್ಲಿ ಸೋರುವಿಕೆ, ವಾಕರಿಕೆ ಅಥವಾ ವಾಂತಿ, ಅತಿಸಾರ ಈ ರೀತಿಯ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು.

ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶದ ಸೋಂಕು

ಹೆಚ್ಚಿನ ಜನರು ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶದ ಸೋಂಕನ್ನು ಹೊಂದಿರುತ್ತಾರೆ. ಕೆಲವರಲ್ಲಿ ಈ ಸಮಸ್ಯೆ ಗಂಭೀರವಾಗುತ್ತದೆ. ಕೆಲವರಲ್ಲಿ ಉಸಿರಾಟದ ಸಮಸ್ಯೆ ಕೂಡ ಕಾಣಿಸಿಕೊಳ್ಳುತ್ತದೆ. ಕೋವಿಡ್‌ನ ಹಿಂದಿನ ಸೋಂಕಿನ ಅಲೆಗಳ ಸಮಯದಲ್ಲಿ ಕಂಡುಬಂದ ರುಚಿ ಮತ್ತು ವಾಸನೆಯ ನಷ್ಟವು ಎರಿಸ್‌ನಿಂದ ಉಂಟಾದ ಸೋಂಕಿನ ಸಮಯದಲ್ಲಿ ಕಂಡುಬರುವ ಸಾಧ್ಯತೆ ಕಡಿಮೆ ಎಂದು ತಜ್ಞರು ಹೇಳಿದ್ದಾರೆ.

EG.5ನ ಅಪಾಯವೆಷ್ಟು ?

ವಿಶ್ವ ಆರೋಗ್ಯ ಸಂಸ್ಥೆ EG.5 ರೂಪಾಂತರವನ್ನು ಮೌಲ್ಯಮಾಪನ ಮಾಡುತ್ತಿದೆ. ಅದರಿಂದ ಉಂಟಾಗುವ ಆರೋಗ್ಯದ ಅಪಾಯವು ಕಡಿಮೆ ಎಂದು ಹೇಳಿದೆ. ಜುಲೈನಲ್ಲಿ “ವೇರಿಯಂಟ್ ಅಂಡರ್ ಮಾನಿಟರಿಂಗ್” ಪಟ್ಟಿಗೆ  ರೂಪಾಂತರವನ್ನು ಸೇರಿಸಲಾಗಿತ್ತು. EG.5 XBB ಯ ವಂಶಾವಳಿಯಾಗಿದೆ. 1.9.2. “EG.5 ಪೋಷಕ XBB.1.9.2 ಸಬ್‌ವೇರಿಯಂಟ್ ಮತ್ತು XBB.1.5 ಗೆ ಹೋಲಿಸಿದರೆ ಸ್ಪೈಕ್ ಪ್ರೊಟೀನ್‌ನಲ್ಲಿ ಹೆಚ್ಚುವರಿ F456L ಅಮೈನೋ ಆಮ್ಲ ರೂಪಾಂತರವನ್ನು ಹೊಂದಿದೆ. EG.5 ವಂಶಾವಳಿಯೊಳಗೆ, ಸಬ್‌ವೇರಿಯಂಟ್ EG.5.1 ಹೆಚ್ಚುವರಿ ಸ್ಪೈಕ್ ರೂಪಾಂತರ Q52H ಅನ್ನು ಹೊಂದಿದೆ.

“ವೇರಿಯಂಟ್ ಅಂಡರ್ ಮಾನಿಟರಿಂಗ್” ಪಟ್ಟಿಗೆ BA.2.86 

ಡೆನ್ಮಾರ್ಕ್ ಮತ್ತು ಇಸ್ರೇಲ್‌ನಲ್ಲಿ ಮೊದಲು ಗುರುತಿಸಲಾದ BA.2.86 ಅನ್ನು WHO ನ ಮೇಲ್ವಿಚಾರಣೆಯಲ್ಲಿರುವ ರೂಪಾಂತರಗಳ ಪಟ್ಟಿಗೆ ಸೇರಿಸಲಾಗಿದೆ. WHO ನಲ್ಲಿ COVID-19 ಪ್ರತಿಕ್ರಿಯೆಯ ತಾಂತ್ರಿಕ ಪ್ರಮುಖರಾದ ಮಾರಿಯಾ ವ್ಯಾನ್ ಕೆರ್ಕೋವ್ ಈ ರೂಪಾಂತರದ ಬಗ್ಗೆ ಟ್ವೀಟ್ ಮಾಡಿದ್ದಾರೆ. ತನ್ನ ಟ್ವೀಟ್‌ನಲ್ಲಿ, ಖೆರ್ಖೋವ್ ಅವರು ಪ್ರಸ್ತುತ ರೂಪಾಂತರದ ಬಗ್ಗೆ ಕಡಿಮೆ ಮಾಹಿತಿ ಲಭ್ಯವಿದೆ, ಆದರೆ ನಿಕಟವಾಗಿ ಮೇಲ್ವಿಚಾರಣೆ ಮಾಡುವ ಅಗತ್ಯವಿದೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...