alex Certify ಗಾಢ ನಿದ್ದೆಯಲ್ಲಿದ್ದಾಗ ಎದೆಯ ಮೇಲೆ ದೆವ್ವ ಕುಳಿತಂತೆ ಭಾಸವಾಗುತ್ತಿದೆಯೇ….? ಇದೊಂದು ವಿಚಿತ್ರ ಕಾಯಿಲೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಾಢ ನಿದ್ದೆಯಲ್ಲಿದ್ದಾಗ ಎದೆಯ ಮೇಲೆ ದೆವ್ವ ಕುಳಿತಂತೆ ಭಾಸವಾಗುತ್ತಿದೆಯೇ….? ಇದೊಂದು ವಿಚಿತ್ರ ಕಾಯಿಲೆ…..!

ನಿದ್ದೆಯಲ್ಲಿ ಕೆಟ್ಟ ಕನಸು ಬೀಳುವುದು ಸಾಮಾನ್ಯ. ಆದರೆ ಕೆಲವೊಮ್ಮೆ ಇದ್ದಕ್ಕಿದ್ದಂತೆ ನಿದ್ರೆಯಿಂದ ಎಚ್ಚರವಾಗುತ್ತದೆ, ಆದರೆ ದೇಹವನ್ನು ಚಲಿಸಲು ಸಾಧ್ಯವಾಗುವುದಿಲ್ಲ. ಎದೆಯ ಮೇಲೆ ಯಾರೋ ಕುಳಿತಂತೆ, ಭಾರವಾದ ವಸ್ತುವನ್ನು ಇರಿಸಿದಂತೆ ಭಾಸವಾಗುತ್ತದೆ. ಕಿರುಚಲು ಅಥವಾ ಕೂಗಲು ಬಯಸಿದರೂ ಧ್ವನಿ ಹೊರಬರುವುದೇ ಇಲ್ಲ. ನಾವು ಎಲ್ಲವನ್ನೂ ನೋಡುತ್ತೇವೆ, ಆತಂಕವನ್ನು ಅನುಭವಿಸುತ್ತೇವೆ. ಆದರೆ  ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ. ವಾಸ್ತವವಾಗಿ ಇದು “ಸ್ಲೀಪ್ ಪ್ಯಾರಾಲಿಸಿಸ್‌” ಎಂಬ ಕಾಯಿಲೆ.

ವ್ಯಕ್ತಿ ನಿದ್ರೆ ಮತ್ತು ಎಚ್ಚರದ ನಡುವಿನ ಪರಿವರ್ತನೆಯ ಹಂತದಲ್ಲಿದ್ದಾಗ ನಿದ್ರಾ ಪಾರ್ಶ್ವವಾಯು ಸಂಭವಿಸುತ್ತದೆ. ಹೆಚ್ಚು ಸರಳವಾಗಿ ಹೇಳುವುದಾದರೆ, ಹಸಿ ನಿದ್ರೆಯಲ್ಲಿರುವಾಗ ಅಂದರೆ ತುಂಬಾ ಆಳವಾದ ನಿದ್ದೆ ಬರುವ ಮುನ್ನ ಇದು ಸಂಭವಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಮ್ಮ ಮನಸ್ಸು ಎಚ್ಚರವಾಗಿರುತ್ತದೆ, ದೇಹವು ಇನ್ನೂ ನಿದ್ರಿಸುತ್ತಿರುತ್ತದೆ. ಈ ಸಮಯದಲ್ಲಿ ಸುತ್ತಲಿನ ಶಬ್ದಗಳನ್ನು ಕೇಳಬಹುದು ಮತ್ತು ನೋಡಬಹುದು, ಆದರೆ ಚಲಿಸಲು ಅಥವಾ ಮಾತನಾಡಲು ಸಾಧ್ಯವಾಗುವುದಿಲ್ಲ. ಈ ಪರಿಸ್ಥಿತಿಯು ಕೆಲವು ಸೆಕೆಂಡುಗಳಿಂದ ಕೆಲವು ನಿಮಿಷಗಳವರೆಗೆ ಇರುತ್ತದೆ. ಸಾಕಷ್ಟು ಭಯಾನಕವೆನಿಸುತ್ತದೆ.

ಸ್ಲೀಪ್‌ ಪ್ಯಾರಾಲಿಸಿಸ್‌ ಲಕ್ಷಣಗಳು

ಇದರ ಕೆಲವು ಲಕ್ಷಣಗಳು ತುಂಬಾ ಸಾಮಾನ್ಯವಾಗಿವೆ. ಮಲಗಿರುವಾಗ ಇದ್ದಕ್ಕಿದ್ದಂತೆ ಎಚ್ಚರಗೊಳ್ಳುವುದು ಮತ್ತು ದೇಹವನ್ನು ಚಲಿಸಲು ಸಾಧ್ಯವಾಗದಿರುವುದು, ಉಸಿರಾಟದ ತೊಂದರೆ,  ಉಸಿರುಗಟ್ಟುವಿಕೆ, ಎದೆಯ ಮೇಲೆ ಒತ್ತಡವನ್ನು ಅನುಭವಿಸುವುದು ಹೆದರಿಕೆ, ವಿಚಿತ್ರ ಶಬ್ದಗಳನ್ನು ಕೇಳುವುದು ಇತ್ಯಾದಿ.

ನಿದ್ರಾ ಪಾರ್ಶ್ವವಾಯುವಿಗೆ ಕಾರಣಗಳು

ಸಾಮಾನ್ಯವಾಗಿ ನಿದ್ರೆಯ ಕೊರತೆ, ಮಾನಸಿಕ ಒತ್ತಡ, ದುರ್ಬಲ ಸ್ಲೀಪ್‌ ಸೈಕಲ್‌, ಮಾನಸಿಕ ಅಸ್ವಸ್ಥತೆ ಅಥವಾ ಕೆಲವು ಔಷಧಿಗಳ ಅಡ್ಡ ಪರಿಣಾಮದಿಂದ ಇದು ಉಂಟಾಗುತ್ತದೆ.

ಇದನ್ನು ಸಂಪೂರ್ಣವಾಗಿ ತಡೆಯುವುದು ಸ್ವಲ್ಪ ಕಷ್ಟ. ಆದರೆ ಕೆಲವು ಸಲಹೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಅಪಾಯವನ್ನು ಕಡಿಮೆ ಮಾಡಬಹುದು. ಈ ಸಮಸ್ಯೆಯಿಂದ ಪಾರಾಗಲಯ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ನಿಯಮಿತ ವ್ಯಾಯಾಮ ಮಾಡಬೇಕು. ಮಲಗುವ ಮತ್ತು ಏಳುವ ಸಮಯವನ್ನು ನಿಗದಿಪಡಿಸಿ. ಸಮತೋಲಿತ ಆಹಾರವನ್ನು ತೆಗೆದುಕೊಳ್ಳಿ. ಮಲಗುವ ಮುನ್ನ ಪ್ರತಿದಿನ ಯೋಗ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...