alex Certify ಕತ್ತೆ ಪಾಲಕನ ಹೊಸ ಆವಿಷ್ಕಾರ: ಸೌರಶಕ್ತಿಗಾಗಿ ಕತ್ತೆಯನ್ನ ಬಳಸಿದ ಯುವಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕತ್ತೆ ಪಾಲಕನ ಹೊಸ ಆವಿಷ್ಕಾರ: ಸೌರಶಕ್ತಿಗಾಗಿ ಕತ್ತೆಯನ್ನ ಬಳಸಿದ ಯುವಕ

ಆವಿಷ್ಕಾರಗಳು ಯಾವ ಯಾವ ರೂಪದಲ್ಲಿ ಹುಟ್ಟಿಕೊಳ್ಳುತ್ತೆ, ಅಂತ ಅಂದಾಜು ಮಾಡುವುದಕ್ಕೆ ಸಾಧ್ಯವೇ ಇಲ್ಲ. ಈಗ ತೆಲಂಗಾಣದ ಹುಸೇನಪ್ಪ ಯಾರೂ ಕೂಡಾ ಊಹೆಯೂ ಮಾಡಿರಲಿಕ್ಕೆ ಆಗದಂತೆ ಅದ್ಭುತ ಆವಿಷ್ಕಾರವನ್ನ ಮಾಡಿದ್ದಾರೆ.

ಅಸಲಿಗೆ ತೆಲಂಗಾಣದ ಹುಸೇನಪ್ಪನವರು ಕತ್ತೆ ಸಾಕುವುದನ್ನೇ ಕಸಬನ್ನಾಗಿ ಮಾಡಿಕೊಂಡಿದ್ಧಾರೆ. ಈಗ ಇದೇ ಕತ್ತೆಗಳನ್ನ ಇಟ್ಟುಕೊಂಡು ಸೌರಶಕ್ತಿ ಚಾಲಿತ ದೀಪಗಳು ಉರಿಯುವಂತೆ ಮಾಡಿದ್ದಾರೆ.

ಹುಸೇನಪ್ಪ ಕತ್ತೆಗಳನ್ನು ಮೇಯಲು ಬಿಟ್ಟಾಗ ಅವುಗಳ ಬೆನ್ನ ಮೇಲೆ ಸೌರಶಕ್ತಿಯನ್ನ ಸಂಗ್ರಹಿಸುವ ಬೋರ್ಡಗಳನ್ನ ಹಾಗೂ ಬ್ಯಾಟರಿಗಳನ್ನ ನೇತು ಹಾಕಿದ್ಧಾರೆ. ಇದು ಬೆಳಕಿನ ಸಮಯದಲ್ಲಿ ಕತ್ತೆಗಳು ಮೇಯಲು ಹೊರಟಾಗ ಸೌರಶಕ್ತಿಯನ್ನ ಸಂಗ್ರಹಿಸಲು ಸಹಾಯವಾಗಿದೆ. ಇದರಿಂದ ದಟ್ಟ ಕಾಡಿನ ಮಧ್ಯದಲ್ಲಿ ಇರುವ ಜನರು ಮೊಬೈಲ್ ಚಾರ್ಜಿಂಗ್, ಹಾಗೂ ದೀಪಗಳನ್ನ ಉರಿಸುವುದಕ್ಕೆ ಸಾಧ್ಯವಾಗಿದೆ. ಅಲ್ಲದೇ ಕತ್ತಲಲ್ಲಿ ಓಡಾಡೋ ಕತ್ತೆಗಳಿಗೂ ಬೆಳಕು ಸಿಕ್ಕಂತಾಗುತ್ತೆ.

ತೆಲಂಗಾಣದ ನಾರಾಯಣಪೇಟ್ ಜಿಲ್ಲೆಯ ಮಕ್ತಲ್ ಮಂಡಲದ ಜಕ್ಲೇರ್ ಗ್ರಾಮದ ಹುಸೇನಪ್ಪ ಪ್ರತಿನಿತ್ಯ ಕತ್ತೆಗಳನ್ನ ಮೇಯಿಸಲು ಪಕ್ಕದ ನಲ್ಲಮಲ ಅರಣ್ಯ ಪ್ರದೇಶಕ್ಕೆ ಹೋಗುತ್ತಾರೆ. ಈ ಸಮಯದಲ್ಲೂ ಹೊಸ ಆವಿಷ್ಕಾರ ಅವರ ತಲೆಯಲ್ಲಿ ಹುಟ್ಟಿದೆ. ಹುಸೇನಪ್ಪ, ಗ್ರಾಮೀಣ ಪ್ರದೇಶದವರಾಗಿದ್ದು ಈ ರೀತಿಯ ಆವಿಷ್ಕಾರ ಮಾಡಿರೋದನ್ನನೋಡಿ ನೆಟ್ಟಿಗರು ಹುಸೇನಪ್ಪನವರನ್ನ ಹಾಡಿ ಹೊಗಳುತ್ತಿದ್ದಾರೆ.

ಕತ್ತಲಲ್ಲಿ ಓಡಾಡಲು ಹರಸಾಹಸ ಪಡಬೇಕಾಗುತ್ತಿತ್ತು. ಆದರೆ ಹುಸೇನಪ್ಪನವರ ಈ ಆವಿಷ್ಕಾರದಿಂದ ಬೆಳಕಿನ ಸಮಸ್ಯೆಗೆ ಹೊರತುಪಡಿಸಿ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈಗಾಗಲೇ ಈ ಆವಿಷ್ಕಾರದ ಚಿತ್ರಗಳು ವೈರಲ್ ಆಗುತ್ತಿದ್ದು, ನೆಟ್ಟಿಗರು ಕತ್ತೆಪಾಲಕನ ಹೊಸತನಕ್ಕಾಗಿ ಲೈಕ್ ಕೊಟ್ಟು, ಕಾಮೆಂಟ್ ಮಾಡಿ ಶಹಬ್ಬಾಶ್ ಅಂತ ಹೇಳುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...